ETV Bharat / state

ಕುವೈತ್​​ನಲ್ಲಿ ಯುವಕ ಸಾವು : ಮೃತದೇಹ ಕರೆತರಲು ಬಿಜೆಪಿ ಮುಖಂಡನ ನೆರವು

author img

By

Published : Nov 23, 2022, 9:32 PM IST

ಉದ್ಯೋಗ ನಿಮಿತ್ತ ಕುವೈತ್​ಗೆ ತೆರಳಿದ್ದ ಯುವಕನೊಬ್ಬ ಮೃತಪಟ್ಟಿದ್ದು, ಆತನ ಮೃತದೇಹವನ್ನು ಭಾರತಕ್ಕೆ ಕರೆತರಲು ಹಿರಿಯ ಬಿಜೆಪಿ ಮುಖಂಡ ತಿಪ್ಪೇರುದ್ರಸ್ವಾಮಿ ಶ್ರಮಿಸಿ, ಮೃತನ ಕುಟುಂಬಕ್ಕೆ ನೆರವಾಗಿದ್ದಾರೆ.

gangavathi-youth-died-in-kuwait-bjp-leader-tippeswamy-helped-diceased-family
ಕುವೈತ್​​ನಲ್ಲಿ ಯುವಕ ಸಾವು : ಮೃತದೇಹ ಕರೆತರಲು ಬಿಜೆಪಿ ಮುಖಂಡನ ನೆರವು

ಗಂಗಾವತಿ : ದುಡಿಯಲು ಹೋಗಿದ್ದ ಗಂಗಾವತಿಯ ಯುವಕನೊಬ್ಬ ಕುವೈತ್​ನಲ್ಲಿ ಮೃತಪಟ್ಟಿದ್ದು, ಆತನ ಮೃತದೇಹವನ್ನು ತವರಿಗೆ ತರಲಾಗಿದ್ದು, ಅಂತ್ಯ ಸಂಸ್ಕಾರ ನೆರವೇರಿಸಲಾಗಿದೆ.

ಗಂಗಾವತಿಯ ಶಮೀದ್​ ಸಾಬ್​ ಎಂಬ ಯುವಕ ಉದ್ಯೋಗ ನಿಮಿತ್ತ ಕುವೈತ್​​ಗೆ ತೆರಳಿದ್ದರು. ನವೆಂಬರ್ 11ರಂದು ಶಮೀದ್ ಕುವೈತ್​ನ ಕಟಕ್​ ನಗರದಲ್ಲಿ ಸಾವನ್ನಪ್ಪಿದ್ದು, ಮೃತದೇಹವನ್ನು ಭಾರತಕ್ಕೆ ಕರೆತರಲು ಮೃತನ ಕುಟುಂಬಸ್ಥರು ಪರದಾಡುತ್ತಿದ್ದರು.

ಈ ಬಗ್ಗೆ ಮಾಹಿತಿ ಪಡೆದುಕೊಂಡ ಬಿಜೆಪಿಯ ಮುಖಂಡ, ಕಾಡಾದ ಮಾಜಿ ಅಧ್ಯಕ್ಷ ತಿಪ್ಪೇರುದ್ರಸ್ವಾಮಿ ಪಕ್ಷದಲ್ಲಿ ತಮಗಿರುವ ಸಂಪರ್ಕವನ್ನು ಬಳಸಿಕೊಂಡು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಮತ್ತು ವಿದೇಶಾಂಗ ಸಚಿವ ಜೈ ಶಂಕರ್ ಅವರನ್ನು ಸಂಪರ್ಕಿಸಿದ್ದಾರೆ.

ಹೀಗೆ ನಿರಂತರ ಪ್ರಯತ್ನ ಮಾಡಿ ಮೃತ ಯುವಕನ ದೇಹವನ್ನು ಭಾರತಕ್ಕೆ ತರಿಸುವಲ್ಲಿ ಸಹಕರಿಸಿದ್ದಾರೆ. ನ.21ರಂದು ಯುವಕನ ಮೃತದೇಹ ಗಂಗಾವತಿಗೆ ಬಂದಿದ್ದು, ಕುಟುಂಬಸ್ಥರು ಅಂತ್ಯಕ್ರಿಯೆ ನೆರವೇರಿಸಿದ್ದಾರೆ.

ಇದನ್ನೂ ಓದಿ : ನಾನೇನೂ ಮಾಡಿಲ್ಲ, ಸತ್ಯಾಸತ್ಯತೆ ನಿನಗೆ ಬಿಟ್ಟದ್ದು : ದೇವರ ಮೊರೆ ಹೋದ ಬಿಜೆಪಿ ಟಿಕೆಟ್ ಆಕಾಂಕ್ಷಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.