ಗಂಗಾವತಿ : ರಕ್ಷಾ ಬಂಧನದ ಅಂಗವಾಗಿ ಇಲ್ಲಿನ ವಿವಿಧ ಠಾಣೆಗಳಲ್ಲಿ ಕೆಲಸ ಮಾಡುತ್ತಿರುವ ಮಹಿಳಾ ಪೊಲೀಸರು ಸಿಬ್ಬಂದಿಗೆ ರಾಖಿ ಕಟ್ಟುವ ಮೂಲಕ ಶುಭಾಶಯ ತಿಳಿಸಿದರು.
ಇಲ್ಲಿನ ಗಂಗಾವತಿ ಗ್ರಾಮೀಣ ಠಾಣೆ, ನಗರಠಾಣೆ, ಸಂಚಾರಿ ಠಾಣೆ, ಗ್ರಾಮೀಣ ವೃತ್ತದ ಸಿಪಿಐ ಹಾಗೂ ಗಂಗಾವತಿ ಉಪ ವಿಭಾಗ ಡಿವೈಎಸ್‌ಪಿ ಕಚೇರಿಯಲ್ಲಿ ಕೆಲಸ ಮಾಡುವ ಸಿಬ್ಬಂದಿಗೆ ಮಹಿಳಾ ಕಾನ್ಸ್‌ಟೇಬಲ್‌ಗಳು ರಾಖಿ ಕಟ್ಟುವ ಮೂಲಕ ಸಹೋದರತ್ವ ಭಾವನೆ ಬೆಸೆದರು.
ಈ ವೇಳೆ ಗಂಗಾವತಿ ನಗರಠಾಣೆಯ ವೆಂಕಟಸ್ವಾಮಿ, ಡಿವೈಎಸ್‌ಪಿ ಚಂದ್ರಶೇಖರ್, ಸಂಚಾರಿ ಠಾಣೆಯ ನಾಗರಾಜ್, ಜಾಧವ, ಸುರೇಶ ತಳವಾರ, ಗಂಗಾವತಿ ಗ್ರಾಮೀಣ ಠಾಣೆಯ ಪಿಎಸ್ಐಗಳಾದ ದೊಡ್ಡಪ್ಪ ಮತ್ತು ಯಲ್ಲಪ್ಪ ಮುಂತಾದವರಿಗೆ ರಾಖಿ ಕಟ್ಟಲಾಯಿತು.