ETV Bharat / state

ನಗರಸಭೆ ಚುನಾವಣೆ.. ತಂತ್ರ, ರಣತಂತ್ರಕ್ಕೆ ಆರು ಸದಸ್ಯರ ಮೇಲೆ ಪ್ರಕರಣ ದಾಖಲು

ಗಂಗಾವತಿ ನಗರಸಭಾ ಚುನಾವಣೆ ಸಮೀಪಿಸುತ್ತಿದ್ದಂತೆ ಹೈ ಡ್ರಾಮಾಗಳು ಕೂಡ ನಗರದಲ್ಲಿ ಹೆಚ್ಚುತ್ತಲೇ ಇವೆ. ಸದಸ್ಯರ ಅಪಹರಣ ಸೇರಿದಂತೆ ಇನ್ನಿತರ ರಣತಂತ್ರ ರೂಪಿಸುವಲ್ಲಿ ಎರಡು ಪಕ್ಷಗಳು ನಿರತರಾಗಿದ್ದು, ಪರಿಣಾಮ ಆರು ಸದಸ್ಯರ ಮೇಲೆ ಪ್ರಕರಣ ದಾಖಲಾಗಿದೆ..

Gangavathi Municipality Election
ಅಪಹರಣಕ್ಕೊಳಗಾದ ಅಭ್ಯರ್ಥಿಗಳು
author img

By

Published : Oct 31, 2020, 5:16 PM IST

ಗಂಗಾವತಿ: ಇಲ್ಲಿನ ನಗರಸಭೆಯ ಚುಕ್ಕಾಣಿ ಹಿಡಿಯುವ ಉದ್ದೇಶದಿಂದ ಬಿಜೆಪಿ ಹಾಗೂ ಕಾಂಗ್ರೆಸ್ ತೀವ್ರತರಹದ ಲಾಬಿ ನಡೆಸಿ, ತಂತ್ರ-ರಣತಂತ್ರ ಹೆಣೆದಿದ್ದಾರೆ. ಈ ಹಿನ್ನೆಲೆ ಇದೀಗ ಎರಡೂ ಪಕ್ಷದ ಒಟ್ಟು ಆರು ನಗರಸಭಾ ಸದಸ್ಯರ ಮೇಲೆ ನಗರ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿವೆ.

ಬಿಜೆಪಿ ಸದಸ್ಯೆ ಸುಧಾ ಸೋಮನಾಥ ಅವರನ್ನು ಅಪಹರಿಸಿದ್ದಾಗಿ ದಾಖಲಾದ ದೂರಿನಲ್ಲಿ ಕಾಂಗ್ರೆಸ್ ಸದಸ್ಯರಾದ ಮನೋಹರಸ್ವಾಮಿ, ಶಾಮೀದ್ ಮನಿಯಾರ ಹಾಗೂ ಸೋಮನಾಥ ಭಂಡಾರಿ ಅವರ ಮೇಲೆ ಸದಸ್ಯೆಯ ಅತ್ತೆ ಅ.22ರಂದು ದೂರು ದಾಖಲಿಸಿದ್ದರು.

ಇದಾದ ಬಳಿಕ ಕಾಂಗ್ರೆಸ್ ಸದಸ್ಯ ಮನೋಹರಸ್ವಾಮಿಯನ್ನು ಅಪಹರಿಸಲು ಯತ್ನಿಸಿದ ಪ್ರಕರಣದಲ್ಲಿ ಬಿಜೆಪಿಯ ಅಜೇಯ್ ಬಿಚ್ಚಾಲಿ, ನವೀನ್ ಮಾಲಿಪಾಟೀಲ್, ಪರುಶುರಾಮ ಮಡ್ಡೇರ್ ಎಂಬ ಬಿಜೆಪಿ ಸದಸ್ಯರ ಮೇಲೆ ದೂರು ದಾಖಲಾಗಿದೆ.

ನಗರಸಭೆಯಲ್ಲಿ ಅಧಿಕಾರ ಪಡೆಯಬೇಕೆಂಬ ಕಾರಣಕ್ಕೆ ಎರಡೂ ಪಕ್ಷಗಳಲ್ಲಿಯೂ ಸಹ ತೀವ್ರವಾಗಿ ತಂತ್ರಗಾರಿಕೆ ನಡೆಯುತ್ತಿದ್ದು, ಸದಸ್ಯರ ಅಪಹರಣ, ನಿಂದನೆ, ಆಮಿಶ ಮೊದಲಾದ ಅಂಶಗಳಿಂದಲೇ ನಗರಸಭೆಯ ಚುನಾವಣೆ ಜನರ ಗಮನ ಸೆಳೆಯುತ್ತಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.