ಗಂಗಾವತಿ: ನಗರದ ಬೇರೂನಿ ಮಸೀದಿ ಆವರಣದಲ್ಲಿ ನಡೆದ ಕುಸ್ತಿ ಪಂದ್ಯಾವಳಿಯಲ್ಲಿ ಬಳ್ಳಾರಿ ಜಿಲ್ಲೆಯ ಮರಿಯಮ್ಮನಹಳ್ಳಿಯ ಹನುಮಂತ ಗಂಗಾವತಿ ಕುವರನಾಗಿ ಹೊರಹೊಮ್ಮಿದ್ದಾರೆ.
ನಾನಾ ಜಿಲ್ಲೆ, ತಾಲೂಕುಗಳಿಂದ ಆಗಮಿಸಿದ್ದ ಸುಮಾರು 20ಕ್ಕೂ ಹೆಚ್ಚು ಕುಸ್ತಿಪಟುಗಳ ಪೈಕಿ ಹನುಮಂತ ಮೊದಲ ಸ್ಥಾನ ಪಡೆದು 'ಗಂಗಾವತಿ ಕುವರನಾಗಿ' ಹೊರಹೊಮ್ಮಿದ್ದಾರೆ. ದಾವಣಗೆರೆಯ ಸಂತೋಷ್ ದ್ವಿತೀಯ ಸ್ಥಾನ ಗಳಿಸಿದ್ದು, ವಿಜೇತರಿಗೆ ನಗದು ಹಾಗೂ ಪಾರಿತೋಷಕ ನೀಡಿ ಗೌರವಿಸಲಾಯಿತು. ಅಲ್ಲದೆ ಸ್ಪರ್ದೆಗೆ ಬಂದ ಎಲ್ಲಾ ಕ್ರೀಡಾಪಟುಗಳಿಗೆ ಉಚಿತ ಊಟ, ವಸತಿ ಹಾಗೂ ವಾಹನದ ಭತ್ಯೆ ನೀಡಲಾಯಿತು.