ETV Bharat / state

ಕಮಿಷನ್ ಪಡೆದೂ, ಬಿಲ್ ಹಣ ನೀಡಿಲ್ಲ: ಪ್ರಧಾನಿಗೆ ಕಾರಟಗಿ ಕಾಂಟ್ರಾಕ್ಟರ್ ಪತ್ರ - contractor letter to PM

ಪಧಾನಿಗೆ ಗುತ್ತಿಗೆದಾರನೊಬ್ಬ ಕಮಿಷನ್​ ವಿಚಾರವಾಗಿ ಪತ್ರ ಬರೆದಿದ್ದಾರೆ. ಉದ್ಯೋಗ ಖಾತ್ರಿ ಯೋಜನೆಯಲ್ಲಿ ಸಾಮಗ್ರಿ ಪೂರೈಕೆ ಮಾಡಿದ ಮತ್ತು ಕೆಲಸ ಮಾಡಿದ ಬಿಲ್ ಪಾವತಿಗೆ ಪರ್ಸೆಂಟೇಜ್​ ಪಡೆದರೂ ಅಧಿಕಾರಿಗಳು, ಜನಪ್ರತಿನಿಧಿಗಳು ಬಿಲ್ ಪಾವತಿ ಮಾಡದೆ ಸತಾಯಿಸುತ್ತಿದ್ದಾರೆ ಎಂದು ಕೊಪ್ಪಳ ಜಿಲ್ಲೆಯ ಗುತ್ತಿಗೆದಾರರೊಬ್ಬರು ಪ್ರಧಾನಿಗೆ ಪತ್ರ ಬರೆದಿದ್ದಾರೆ.

Karatagi contractor letter to PM about commission
ಪಿಎಂಗೆ ಕಾರಟಗಿ ಕಂಟ್ರಾಕ್ಟರ್ ಪತ್ರ
author img

By

Published : May 3, 2022, 7:07 PM IST

ಗಂಗಾವತಿ(ಕೊಪ್ಪಳ): ಉದ್ಯೋಗ ಖಾತ್ರಿ ಯೋಜನೆಯಲ್ಲಿ ಸಾಮಗ್ರಿ ಪೂರೈಕೆ ಮಾಡಿದ ಮತ್ತು ಕೆಲಸ ಮಾಡಿದ ಬಿಲ್ ಪಾವತಿಗೆ ಪರ್ಸೆಂಟೇಜ್​ (ಕಮಿಷನ್) ಪಡೆದರೂ ಅಧಿಕಾರಿಗಳು, ಜನಪ್ರತಿನಿಧಿಗಳು ಬಿಲ್ ಪಾವತಿಸದೆ ಸತಾಯಿಸುತ್ತಿದ್ದಾರೆ ಎಂದು ಗುತ್ತಿಗೆದಾರರೊಬ್ಬರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದಾರೆ. ಕಾರಟಗಿ ತಾಲೂಕಿನ ಕುಂಟೋಜಿ ಗ್ರಾಮದ ನಿವಾಸಿ ಯರಿಸ್ವಾಮಿ ನಾಗೇಶಪ್ಪ ಪ್ರಧಾನಿಗೆ ಪತ್ರ ಬರೆದ ಗುತ್ತಿಗೆದಾರ.

2021ನೇ ಸಾಲಿನಲ್ಲಿ ಮುಸ್ಟೂರು ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ನರೇಗಾ ಯೋಜನೆಯಲ್ಲಿ ತ್ಯಾಜ್ಯ ವಿಲೇವಾರಿ ಘಟಕ ನಿರ್ಮಾಣಕ್ಕೆ ಸಾಮಗ್ರಿ ಪೂರೈಸಿದ್ದೇನೆ. ಬಿಲ್ ಪಾವತಿಗೆ ವಿನಾಕಾರಣ ಸತಾಯಿಸಲಾಗುತ್ತಿದೆ. ಕಾರಟಗಿ ಪ್ರಭಾರಿ ಇಓ, ಮುಸ್ಟೂರು ಪಿಡಿಓ ಹಾಗೂ ಗ್ರಾ.ಪಂ. ಅಧ್ಯಕ್ಷ, ನರೇಗಾ ತಾಂತ್ರಿಕ ಸಹಾಯಕ ಭ್ರಷ್ಟರು. ಇವರ ವಿರುದ್ಧ ಜಿಪಂ ಸಿಇಓಗೆ ದೂರು ನೀಡಿದ್ದರೂ ಪ್ರಯೋಜನವಾಗಿಲ್ಲ. ಹೀಗಾಗಿ, ಅವರ ಮೇಲೆ ಕ್ರಮ ಕೈಗೊಳ್ಳಲು ಸೂಚಿಸುವಂತೆ ಪತ್ರದಲ್ಲಿ ಪ್ರಧಾನಿ ಅವರನ್ನು ಕೋರಿದ್ದಾರೆ.

Karatagi contractor letter to PM about commission
ಕಮಿಷನ್ ಪಡೆದೂ, ಬಿಲ್ ಹಣ ನೀಡಿಲ್ಲ

ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ದೂರದಾದ ಯರಿಸ್ವಾಮಿ, ಶೇ.30-40 ಪರ್ಸಂಟೇಜ್ ಕಮೀಷನ್ ಕೇಳಿದ್ದರು. ನಾನು ಕೊಟ್ಟಿಲ್ಲದ್ದಕ್ಕೆ ನನಗೆ ಬರಬೇಕಿರುವ ಹಣವನ್ನು ಪಂಚಾಯಿತಿ ಅಧ್ಯಕ್ಷನ ಸ್ನೇಹಿತರ ಅಂಗಡಿಯಾದ ಶ್ರೀರಾಮನಗರದ ರಹೇನಾ ಎಂಟರ್​ಪ್ರಸೈಸ್ ಬಿಲ್ ಹಾಕಲಾಗಿದೆ. ಏಳು ಲಕ್ಷ ರೂಪಾಯಿ ಬಾಕಿ ಬರಬೇಕಿದೆ ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

ಇದನ್ನೂ ಓದಿ: ಪಿಎಸ್ಐ ನೇಮಕಾತಿ ಅಕ್ರಮ: ಬ್ಲೂಟೂತ್ ಡಿವೈಸ್ ಮುಚ್ಚಿಟ್ಟಿದ್ದು ಹೂವು ಕುಂಡದಲ್ಲಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.