ETV Bharat / state

ಹೇಮಗುಡ್ಡದಲ್ಲಿ ವೈಭವದ ದಸರಾ: ಕಣ್ಮನ ಸೆಳೆದ ಜಂಬೂ ಸವಾರಿ - ಈಟಿವಿ ಭಾರತ ಕನ್ನಡ

ಮೈಸೂರು ದಸರಾ ಮಾದರಿಯಲ್ಲಿ ಗಂಗಾವತಿ ತಾಲೂಕಿನ ಹೇಮಗುಡ್ಡದಲ್ಲಿ ಅದ್ಧೂರಿ ಜಂಬೂಸವಾರಿ ನಡೆಯಿತು. ಅಲಂಕೃತ ಮಂಟಪದಲ್ಲಿ ದುರ್ಗಾ ಪರಮೇಶ್ವರಿ ಹೊತ್ತ ಜಂಬೂ ಸವಾರಿಗೆ ಮಾಜಿ ಸಂಸದ ಎಚ್.ಜಿ. ರಾಮುಲು ಚಾಲನೆ ನೀಡಿದರು.

gangavathi-hemagudda-dasara
ಹೇಮಗುಡ್ಡದಲ್ಲಿ ವೈಭವದ ದಸರಾ : ಕಣ್ಮನ ಸೆಳೆದ ಜಂಬೂ ಸವಾರಿ
author img

By

Published : Oct 4, 2022, 10:35 PM IST

ಗಂಗಾವತಿ (ಕೊಪ್ಪಳ) : ಮೈಸೂರು ದಸರಾ ಮಾದರಿಯ ಜಂಬೂ ಸವಾರಿ ಖ್ಯಾತಿ ಹೊಂದಿರುವ ತಾಲ್ಲೂಕಿನ ಹೇಮಗುಡ್ಡದಲ್ಲಿ ಅದ್ಧೂರಿ ಜಂಬೂಸವಾರಿ ನಡೆಯಿತು. ಇಲ್ಲಿನ ದುರ್ಗಾ ಪರಮೇಶ್ವರಿ ದೇಗುಲದ ಆವರಣದಲ್ಲಿ ಮಾಜಿ ಸಂಸದ ಎಚ್.ಜಿ. ರಾಮುಲು ಆನೆಗೆ ಪೂಜೆ ಸಲ್ಲಿಸುವ ಮೂಲಕ ಜಂಬೂಸವಾರಿಗೆ ಚಾಲನೆ ನೀಡಿದರು. ಅಲಂಕೃತ ಮಂಟಪದಲ್ಲಿ ದುರ್ಗಾಪರಮೇಶ್ವರಿಯನ್ನು ಹೊತ್ತ ಜಂಬೂ ಸವಾರಿ ನಡೆಯಿತು.

ದೇಗುಲದಿಂದ ಹೊರಟ ಜಂಬೂ ಸವಾರಿಯು, ಸುಮಾರು ಒಂದು ಕಿಲೋ ಮೀಟರ್ ದೂರ ಇರುವ ಹನುಮಂತ ದೇವರ ಪಾದಗಟ್ಟೆ ತಲುಪಿ ಪುನಃ ವಾಪಸ್ ದೇಗುಲಕ್ಕೆ ಅಗಮಿಸಿತು. ಜಂಬೂಸವಾರಿಯಲ್ಲಿ ನಾನಾ ವಾದ್ಯ ಮೇಳಗಳು ಕಣ್ಮನ ಸೆಳೆದವು.

ಧರ್ಮಕರ್ತ ಮಾಜಿ ಶಾಸಕ ಎಚ್.ಆರ್.ಶ್ರೀನಾಥ್ ಅವರು ಜಂಬೂ ಸವಾರಿಯ ನೇತೃತ್ವವಹಿಸಿದ್ದರು. ಜಂಬೂ ಸವಾರಿಯಲ್ಲಿ ವಿವಿಧ ಗಣ್ಯರು, ಊರ ಪರವೂರ ಜನರು ಭಾಗವಹಿಸಿದ್ದರು. ಇದಕ್ಕೂ ಮೊದಲು 40ಕ್ಕೂ ಹೆಚ್ಚು ಜೋಡಿಗಳು ದೇವಸ್ಥಾನದಲ್ಲಿ ದಾಂಪತ್ಯ ಜೀವನಕ್ಕೆ ಕಾಲಿರಿಸಿದರು.

gangavathi-hemagudda-dasara
40ಕ್ಕೂ ಹೆಚ್ಚು ಜೋಡಿಗಳು ದೇವಸ್ಥಾನದಲ್ಲಿ ದಾಂಪತ್ಯ ಜೀವನಕ್ಕೆ ಕಾಲಿರಿಸಿದರು

ಇದನ್ನೂ ಓದಿ : ಸಾಂಸ್ಕೃತಿಕ ನಗರದಲ್ಲಿ ಜಂಬೂ ಸವಾರಿಯ ಸಂಭ್ರಮ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.