ETV Bharat / state

VIDEO:ವಿದ್ಯಾರ್ಥಿಗಳನ್ನು ಸೆಳೆಯಲು ಮುಂದಾಯ್ತು ಗಂಗಾವತಿ ಸರ್ಕಾರಿ ಕಾಲೇಜು - ಭತ್ತದ ನಾಡು ಗಂಗಾವತಿ

ಗಂಗಾವತಿ ಸರ್ಕಾರಿ ಕಾಲೇಜು ವಿದ್ಯಾರ್ಥಿಗಳನ್ನು ಸೆಳೆಯಲು ಮುಂದಾಗಿದ್ದು, ಈ ಸಂಬಂಧ ಅದು ವಿಡಿಯೋವೊಂದನ್ನು ಬಿಡುಗಡೆಗೊಳಿಸಿದೆ.

Gangavathi government college
ಗಂಗಾವತಿ ಸರ್ಕಾರಿ ಕಾಲೇಜು
author img

By

Published : Jul 14, 2021, 2:14 PM IST

ಗಂಗಾವತಿ: ಶೈಕ್ಷಣಿಕ ವರ್ಷ ಆರಂಭವಾದಂತೆ ಶಾಲಾ - ಕಾಲೇಜುಗಳಲ್ಲಿ ಪ್ರಚಾರದ ಭರಾಟೆ ಹೆಚ್ಚಾಗುತ್ತದೆ. ಮುಖ್ಯವಾಗಿ ಖಾಸಗಿ ಶಿಕ್ಷಣ ಸಂಸ್ಥೆಗಳ ಶಾಲೆ - ಕಾಲೇಜುಗಳು ಅಬ್ಬರದ ಪ್ರಚಾರಕ್ಕೆ ಇಳಿಯುತ್ತವೆ. ಇದೀಗ ನಗರದ ಸರ್ಕಾರಿ ಕಾಲೇಜು ಕೂಡ ವಿದ್ಯಾರ್ಥಿಗಳನ್ನು ಸೆಳೆಯಲು ಮುಂದಾಗಿದೆ.

ವಿದ್ಯಾರ್ಥಿಗಳನ್ನು ಸೆಳೆಯಲು ಮುಂದಾಯ್ತು ಗಂಗಾವತಿ ಸರ್ಕಾರಿ ಕಾಲೇಜು

ಐದು ದಶಕ ಪೂರೈಸಿರುವ ಗಂಗಾವತಿ ನಗರದ ಏಕೈಕ ಪಿಯು ಕಾಲೇಜು ಎಂದು ಹೆಗ್ಗಳಿಕೆ ಹೊಂದಿರುವ ಇಲ್ಲಿನ ಬಾಲಕರ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಸಿಬ್ಬಂದಿ ಈಗ, ಶೈಕ್ಷಣಿಕ ವರ್ಷದ ಪ್ರವೇಶಕ್ಕೆ ಮಕ್ಕಳನ್ನು ಸೆಳೆಯಲು ಪ್ರಚಾರದ ಮೊರೆ ಹೋಗಿದ್ದಾರೆ.

ಅರ್ಧ ಶತಮಾನ ಪೂರೈಸಿರುವ ಈ ಪಿಯು ಕಾಲೇಜಿನಲ್ಲಿ ಕಲಿತ ವಿದ್ಯಾರ್ಥಿಗಳು ಇಂದು ನಾನಾ ಕ್ಷೇತ್ರದಲ್ಲಿ ಸಾಧನೆ ಮಾಡಿದ್ದಾರೆ. ಇನ್ನು ಕೆಲವರು ವಿದೇಶಗಳಲ್ಲಿದ್ದಾರೆ. ಉತ್ತಮ ಸುಸಜ್ಜಿತ ಪ್ರಯೋಗಾಲಯ, ನುರಿತ ಸಿಬ್ಬಂದಿ, ಆಟದ ಮೈದಾನ, ಪ್ರಶಾಂತ ಪರಿಸರದಂತಹ ಇತರ ಅಂಶಗಳನ್ನು ಮುಂದಿಟ್ಟುಕೊಂಡು ವಿದ್ಯಾರ್ಥಿಗಳನ್ನು ಸೆಳೆಯಲು ಮುಂದಾಗಿದೆ ಕಾಲೇಜು ಆಡಳಿತ ಮಂಡಳಿ.

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.