ಗಂಗಾವತಿ: ಶ್ರಾವಣ ಮಾಸದ ನಂತರ ಹಬ್ಬಗಳು ಸಾಲಾಗಿ ಬರುತ್ತವೆ. ಎಲ್ಲೆಲ್ಲೂ ಸಂಭ್ರಮ, ಸಂತಸ, ಹೊಸ ದಿರಿಸು ತೊಟ್ಟು ಜನರು ಸಂಭ್ರಮಿಸುತ್ತಾರೆ. ಆದರೆ, ಈ ಬಾರಿ ಎಲ್ಲದಕ್ಕೂ ಕೊರೊನಾ ಸೋಂಕು ಕಡಿವಾಣ ಹಾಕಿದೆ.
ಕುಗ್ಗಿದ ಹೂ, ಹಣ್ಣು ವ್ಯಾಪಾರ:
ಪ್ರತೀ ವರ್ಷದಂತೆ ಈ ವರ್ಷದ ಆಚರಣೆ ಇಲ್ಲದ ಕಾರಣ ನೂರಾರು ಅಂಗಡಿ ವ್ಯಾಪಾರಸ್ಥರು, ಸಾವಿರಾರು ಕಾರ್ಮಿಕರ ಆದಾಯ ಕುಸಿದಿದೆ.
ನಗರದ ಸುಮಾರು 700ಕ್ಕೂ ಹೆಚ್ಚು ಮಳಿಗೆಗಳು ನಷ್ಟದ ಭೀತಿ ಎದುರಿಸುತ್ತಿದ್ದಾರೆ. ಲಾಭಾಂಶವಲ್ಲ, ಹಾಕಿದ ಬಂಡವಾಳವೂ ವಾಪಸ್ ಬಾರದ ಸ್ಥಿತಿಯಿದೆ ಅನ್ನೋದು ವರ್ತಕರ ಅಳಲು.
ಗಣೇಶ ಮೂರ್ತಿ ಮಾರಾಟ ಇಳಿಮುಖ:
ಮಾರುಕಟ್ಟೆಯಲ್ಲಿ ಗಣೇಶ ಮೂರ್ತಿಗಳ ವಹಿವಾಟು ಕುಂಠಿತವಾಗಿದೆ. ಪ್ರತಿ ವರ್ಷ ಅಂದಾಜು 8 ರಿಂದ 10 ಲಕ್ಷ ರೂ ವ್ಯಾಪಾರ ಮಾಡುತ್ತಿದ್ದ ತಯಾರಕರು ಈ ಸಲ ಕೇವಲ 20 ರಿಂದ 30 ಸಾವಿರ ರೂ ವಹಿವಾಟು ನಡೆಸಿದ್ದಾರೆ.
ನಗರದಲ್ಲಿ ಸುಮಾರು 20 ಕುಟುಂಬಗಳು ಮೂರ್ತಿ ತಯಾರಿಸಿ, ಮಾರಾಟದ ಮೂಲಕ ಬದುಕು ಸಾಗಿಸುತ್ತಿವೆ.