ETV Bharat / state

ಗೊಂದಲದಲ್ಲಿ ಮತಪತ್ರ ಹರಿದು, ಫಜೀತಿ ಅನುಭವಿಸಿದ ನಾಲ್ವರು ಯುವ ಮತದಾರರು

ತಾಲೂಕಿನ ಅಡವಿಬಾವಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹುಲ್ಸಗೇರಿ ಗ್ರಾಮದ ಹನುಮಗೌಡ ಯಲ್ಲನಗೌಡ ಪೊಲೀಸ ಪಾಟೀಲ ಎಂಬ ವ್ಯಕ್ತಿ, ಮತ ಚಲಾಯಿಸುವ ಸಂದರ್ಭ ಗೊಂದಲಕ್ಕೀಡಾಗಿ ಮತಪತ್ರಕ್ಕೆ ಮುದ್ರೆ ಒತ್ತದೇ ಮತಪತ್ರ ಹರಿದು ಹಾಕಿದ್ದಾನೆ.

four-young-voters-tearing-ballot-papers-in-koppala
ಗೊಂದಲದಲ್ಲಿ ಮತಪತ್ರ ಹರಿದು, ಫಜೀತಿ ಅನುಭವಿಸಿದ ನಾಲ್ವರು ಯುವ ಮತದಾರರು
author img

By

Published : Dec 27, 2020, 9:29 PM IST

ಕುಷ್ಟಗಿ: ಗ್ರಾಮ ಪಂಚಾಯತಿ ಚುನಾವಣೆಯಲ್ಲಿ ನಾಲ್ವರು ಯುವ ಮತದಾರರು ವಿವಿಧ ಮತಗಟ್ಟೆಯಲ್ಲಿ ಮತಪತ್ರ ಹರಿದು ಹಾಕಿ, ಕೆಲ ಹೊತ್ತು ಪೊಲೀಸರ ವಶದಲ್ಲಿದ್ದು ಪಜೀತಿ ಅನುಭವಿಸಿರುವ ಘಟನೆ ನಡೆದಿದೆ.

ತಾಲೂಕಿನ ಅಡವಿಬಾವಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹುಲ್ಸಗೇರಿ ಗ್ರಾಮದ ಹನುಮಗೌಡ ಯಲ್ಲನಗೌಡ ಪೊಲೀಸ ಪಾಟೀಲ ಎಂಬ ವ್ಯಕ್ತಿ, ಮತ ಚಲಾಯಿಸುವ ಸಂದರ್ಭ ಗೊಂದಲಕ್ಕೀಡಾಗಿ ಮತಪತ್ರಕ್ಕೆ ಮುದ್ರೆ ಒತ್ತದೇ ಮತಪತ್ರ ಹರಿದು ಹಾಕಿದ್ದಾನೆ.

ನಂತರ ಮತಗಟ್ಟೆಯಲ್ಲಿ ಹಾಕಲು ಯತ್ನಿಸಿದಾಗ, ಅಧಿಕಾರಿಗಳು ತಡೆದು, ಹರಿದ ಮತಪತ್ರ ವಶಕ್ಕೆ ತೆಗೆದುಕೊಂಡರು. ಈತ ಕುಷ್ಟಗಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಬಿಎ ತೃತೀಯ ಸೆಮಿಸ್ಟರ್ ವಿದ್ಯಾರ್ಥಿ ಎನ್ನುವುದು ತಿಳಿದು ಬಂದಿದೆ.

ಓದಿ: 'ನನ್‌ ವಯಸ್ಸು 115, ನಡ್ಕೊಂಡು ಹೋಗಿ ಓಟ್ ಮಾಡ್ಬಿಟ್ಟು ಬಂದೆನಪ್ಪಾ'

ಚಳಗೇರಾದಲ್ಲಿ ಮತಗಟ್ಟೆ ಸಂಖ್ಯೆ 76 ರಲ್ಲಿ ಶರಣಪ್ಪ ಕನಕಪ್ಪ ಜಾಲಿ ಎಂಬಾತ, ಮತಪತ್ರ ಹರಿದು ಮತಪೆಟ್ಟಿಗೆಯಲ್ಲಿ ಹಾಕಲು ಯತ್ನಿಸಿದ್ದ. ಅದೇ ರೀತಿ ಕಲಾಲಬಂಡಿ ಗ್ರಾಮದಲ್ಲಿ ನಾಗರಾಜ ನಂದಿಹಳ್ಳಿ ಎಂಬ ವ್ಯಕ್ತಿ ಗೊಂದಲಕ್ಕೀಡಾಗಿ ಮತಪತ್ರ ಹರಿದು ಹಾಕಿದ್ದಾನೆ. ಜೂಲಕಟ್ಟಿ ಗ್ರಾಮದಲ್ಲಿಯೂ ಸಹ ಪರಶುರಾಮ್ ಹೊಸಮನಿ ಸಹ ಇದೇ ರೀತಿ ಮಾಡಿ ಕೆಲಹೊತ್ತು ಪೊಲೀಸರ ವಶದಲ್ಲಿದ್ದರು.

ಮತಪತ್ರಗಳನ್ನು ಮತಗಟ್ಟೆ ಅಧಿಕಾರಿಗಳು ವಶಕ್ಕೆ ತೆಗೆದುಕೊಂಡಿದ್ದು, ಈ ಪ್ರಕರಣ ಉದ್ದೇಶ ಪೂರಕವಾಗಿ ಅಲ್ಲದಿರುವುದು ಮೇಲ್ನೊಟಕ್ಕೆ ತಿಳಿದು ಬಂದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.