ETV Bharat / state

ತುಂಗಭದ್ರಾ ಎಡದಂಡೆ ನಾಲೆಯಲ್ಲಿ ಅಕ್ರಮ ಪಂಪ್​ಸೆಟ್​ ಅಳವಡಿಕೆ: ತೆರವಿಗೆ ಆಗ್ರಹಿಸಿ ರೈತರಿಂದ ಬೃಹತ್​ ಪ್ರತಿಭಟನೆ

author img

By

Published : Aug 6, 2020, 4:03 PM IST

ತುಂಗಭದ್ರಾ ಎಡದಂಡೆ ಮೇಲ್ಭಾಗದಲ್ಲಿ ಅಕ್ರಮವಾಗಿ ಪಂಪ್​ಸೆಟ್ ಅಳವಡಿಸಿ ನೀರು ಕಳ್ಳತನ ಮಾಡಲಾಗುತ್ತಿದೆ.‌ ಇದರಿಂದ ಕೆಳಭಾಗದ ರೈತರಿಗೆ ನೀರು ಬರುತ್ತಿಲ್ಲ. ಈ ಹಿನ್ನೆಲೆಯಲ್ಲಿ ಪಂಪ್​ಸೆಟ್​ ತೆರವು ಮಾಡಬೇಕೆಂದು ಆಗ್ರಹಿಸಿ ತುಂಗಭದ್ರಾ ಎಡದಂಡೆ ನಾಲೆಯ ಕೆಳಭಾಗದ ಜಿಲ್ಲೆಯ ರೈತರು ಬೃಹತ್​ ಪ್ರತಿಭಟನೆ ‌ನಡೆಸಿದರು.

ಅಕ್ರಮ ಪಂಪ್​ಸೆಟ್​ ತೆರವಿಗೆ ರೈತರ ಆಗ್ರಹ
ಅಕ್ರಮ ಪಂಪ್​ಸೆಟ್​ ತೆರವಿಗೆ ರೈತರ ಆಗ್ರಹ

ಕೊಪ್ಪಳ: ತುಂಗಭದ್ರಾ ಎಡದಂಡೆ ಕಾಲುವೆಯಲ್ಲಿ ಅಕ್ರಮವಾಗಿ ಅಳವಡಿಸಿರುವ ಪಂಪ್​ಸೆಟ್ ತೆರವಿಗೆ ಒತ್ತಾಯಿಸಿ ಕಾರಟಗಿ ತಾಲೂಕಿನ ಮೈಲಾಪುರ ಕಾಲುವೆ ಬಳಿ ನಾಲೆಯ ಕೆಳಭಾಗದ ಜಿಲ್ಲೆಯ ರೈತರು ಪ್ರತಿಭಟನೆ ‌ನಡೆಸಿದರು.

ತುಂಗಭದ್ರಾ ಎಡದಂಡೆಯ ಮೇಲ್ಭಾಗದಲ್ಲಿ ಅಕ್ರಮವಾಗಿ ಪಂಪಸೆಟ್ ಅಳವಡಿಸಿ ನೀರು ಕಳ್ಳತನ ಮಾಡಲಾಗುತ್ತಿದೆ.‌ ಇದರಿಂದ ಕೆಳಭಾಗದ ರೈತರಿಗೆ ನೀರು ಬರುತ್ತಿಲ್ಲ. ಪ್ರತಿಬಾರಿಯೂ ನಮಗೆ ಈ ಸಮಸ್ಯೆ ಎದುರಾಗುತ್ತದೆ.‌ ಇದರಿಂದಾಗಿ ನಾವು ಬೆಳೆ ಬೆಳೆಯೋದು ಹೇಗೆ ಎಂದು ಪ್ರಶ್ನಿಸಿದರು.

ಅಕ್ರಮ ಪಂಪ್​ಸೆಟ್​ ತೆರವಿಗೆ ರೈತರ ಆಗ್ರಹ

ಅಷ್ಟೇ ಅಲ್ಲದೆ ನಾಲೆಗೆ ಅಳವಡಿಸಲಾಗಿರುವ ಅಕ್ರಮ ಪಂಪ್​ಸೆಟ್​ಗಳನ್ನು ತೆರವುಗೊಳಿಸುವಂತೆ ಅಧಿಕಾರಿಗಳಿಗೆ ಆಗ್ರಹಿಸಿದರು. ನಾಲೆಗೆ ಅಳವಡಿಸಿರುವ ಅಕ್ರಮ ಪಂಪ್‌ಸೆಟ್​ಗಳನ್ನು ತೆರವುಗೊಳಿಸುವಂತೆ ಜಲಸಂಪನ್ಮೂಲ ಸಚಿವ ರಮೇಶ್​ ಜಾರಕಿಹೊಳಿ ಅಧಿಕಾರಿಗಳಿಗೆ ಈಗಾಗಲೇ ಸೂಚನೆ ನೀಡಿದ್ದಾರೆ. ಆದರೂ ಸಹ ಅಧಿಕಾರಿಗಳು ಬೇಜವಾಬ್ದಾರಿ ತೋರುತ್ತಿದ್ದಾರೆ ಎಂದು ರೈತರು ಆಕ್ರೋಶ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ರೈತರ ಹಾಗೂ ಪೊಲೀಸರ ನಡುವೆ ಕೆಲಕಾಲ ಮಾತಿನ ಚಕಮಕಿ‌ ನಡೆಯಿತು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.