ETV Bharat / state

ಮಾಜಿ ಸಚಿವ ತಂಗಡಗಿ ಹುಟ್ಟುಹಬ್ಬಕ್ಕೆ ಬ್ರೇಕ್, ಅಭಿಮಾನಿಗಳಿಂದ ಸಹಾಯಹಸ್ತ

ಮಾಜಿ ಸಚಿವ ಶಿವರಾಜ ತಂಗಡಗಿ ಹುಟ್ಟುಹಬ್ಬದ ಪ್ರಯುಕ್ತ ಅವರ ಅಭಿಮಾನಿಗಳು, ಕೊಪ್ಪಳದ ಶ್ರೀ ಗವಿಮಠದಲ್ಲಿ ಆರಂಭಿಸಿರುವ ಕೋವಿಡ್ ಕೇರ್ ಸೆಂಟರ್​​ಗೆ ತರಕಾರಿ, ಆಹಾರಧಾನ್ಯ, ಹಣ್ಣು-ಹಂಪಲನ್ನು ಕಳುಹಿಸಿ ಕೊಡುವ ಮೂಲಕ ಅದ್ದೂರಿ ಆಚರಣೆಗೆ ಬ್ರೇಕ್ ಹಾಕಿದ್ದಾರೆ.

fans-give-food-kit-to-covid-centre
ಅಭಿಮಾನಿಗಳಿಂದ ಸಹಾಯಸ್ತ
author img

By

Published : Jun 10, 2021, 2:45 PM IST

ಕೊಪ್ಪಳ: ಮಾಜಿ ಸಚಿವ ಶಿವರಾಜ ತಂಗಡಗಿ ಅವರ ಅದ್ದೂರಿ ಜನ್ಮ ದಿನಾಚರಣೆಗೆ ಬ್ರೇಕ್ ಹಾಕಿರುವ ಅಭಿಮಾನಿಗಳು, ಅದರ ಬದಲಾಗಿ ಕೊಪ್ಪಳದ ಶ್ರೀ ಗವಿಸಿದ್ದೇಶ್ವರ ಮಠಕ್ಕೆ ಆಹಾರ ಪದಾರ್ಥ ಹಾಗೂ ಹಣ್ಣು ಹಂಪಲು ದೇಣಿಗೆ ಕಳಿಸಿಕೊಡುತ್ತಿದ್ದಾರೆ. ಜಿಲ್ಲಾಡಳಿತದ ಸಹಯೋಗದಲ್ಲಿ ಗವಿಮಠದಲ್ಲಿ ಆರಂಭಿಸಿರುವ ಕೋವಿಡ್ ಕೇರ್ ಸೆಂಟರ್ ಹಾಗೂ ಆಸ್ಪತ್ರೆಗೆ ತರಕಾರಿ, ಆಹಾರಧಾನ್ಯ, ಹಣ್ಣು-ಹಂಪಲನ್ನು ಕಾರಟಗಿಯಲ್ಲಿ ಸಂಗ್ರಹಿಸಿ ಕೊಪ್ಪಳಕ್ಕೆ ಕಳುಹಿಸಲಾಯಿತು.

ಅಭಿಮಾನಿಗಳಿಂದ ಸಹಾಯಸ್ತ

ಓದಿ: ಯಾರಿಗೂ ತಿಳಿಯದಂತೆ 10 ವರ್ಷ ಪ್ರೇಯಸಿಯನ್ನು ಮನೆಯಲ್ಲೇ ಅಡಗಿಸಿಟ್ಟಿದ್ದ!

ತಂಗಡಗಿ ಅಭಿಮಾನಿಗಳು 11 ಕ್ವಿಂಟಲ್ ಅಕ್ಕಿ, 50 ಕೆಜಿ ಪೈನಾಪಲ್, 50 ಕೆಜಿ ಮಾವು, 10 ಕೆಜಿ ಮೊಸಂಬಿ, 10 ಕೆಜಿ ಸೇಬು ಹಾಗೂ 10 ಸಾವಿರ ರೂಪಾಯಿ ಬೆಲೆಯ ತರಕಾರಿಯನ್ನು ಕಾರಟಗಿಯಿಂದ ವಾಹನದಲ್ಲಿ ಕಳಿಸಲು ಸಜ್ಜು ಮಾಡಿದ್ದಾರೆ.

ತಮ್ಮ ಜನ್ಮದಿನಾಚರಣೆಯಂದು ಯಾರೂ ಕೇಕ್ ಕಟ್ ಮಾಡದೇ ಅದೇ ಹಣದಲ್ಲಿ ಕೋವಿಡ್ ಸೋಂಕಿತರಿಗೆ ಸಹಾಯ ಮಾಡಿ ಎಂದು ಮಾಜಿ ಸಚಿವ ಶಿವರಾಜ ತಂಗಡಗಿ ಅಭಿಮಾನಿಗಳಿಗೆ ಕರೆ ನೀಡಿದ್ದರು. ಈ ಹಿನ್ನೆಲೆ, ಅವರ ಅಭಿಮಾನಿಗಳು ಕಾರಟಗಿಯ ತಂಗಡಗಿ ನಿವಾಸದಲ್ಲಿ ಆಹಾರದ ಕಿಟ್ ತಂದು ಗವಿಮಠಕ್ಕೆ ಕಳಿಸಲು ಸಿದ್ದರಾಗಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.