ETV Bharat / state

ಬಿಜೆಪಿ ಹೈಕಮಾಂಡ್ ಹಾಗೂ ಕಟೀಲ್​ಗೆ ಸಾವಾಲ್​ ಹಾಕಿದ ಮಾಜಿ ಸಚಿವ ಶಿವರಾಜ ತಂಗಡಗಿ

ಕಾಂಗ್ರೆಸ್ ವಿರೋಧ ಪಕ್ಷವಾಗಿ ತನ್ನ ಕೆಲಸ ಮಾಡುತ್ತಿದೆ. ಬಿಜೆಪಿಯವರು ಸುಳ್ಳು ಹೇಳಿರೋದು ಜನರಿಗೆ ತಿಳಿಯಲಿ. ಕೊರೊನಾ ಕಾರಣದಿಂದ ಕಾಂಗ್ರೆಸ್ ಪಕ್ಷ ಸ್ವಲ್ಪ ಸುಮ್ಮನಿದೆ. ಇನ್ಮುಂದೆ ನಮ್ಮ ಪಕ್ಷ ಸರ್ಕಾರದ ವಿರುದ್ಧ ಹೋರಾಟ ಮತ್ತೆ ಪ್ರಾರಂಭಿಸುತ್ತದೆ. ಯತ್ನಾಳ್ ಅವರು ಕಾಂಗ್ರೆಸ್ ಪಕ್ಷದ ಬಗ್ಗೆ ಮಾತನಾಡುವುದು ಸರಿಯಲ್ಲ..

Shivaraja Tangadagi
ಶಿವರಾಜ ತಂಗಡಗಿ
author img

By

Published : Jul 5, 2021, 7:34 PM IST

ಕೊಪ್ಪಳ : ಕಾಂಗ್ರೆಸ್ ಬಗ್ಗೆ ಮಾತನಾಡುವ ಯೋಗ್ಯತೆ, ನೈತಿಕತೆ ಬಿಜೆಪಿಯವರಿಗಿಲ್ಲ. ಬಿಜೆಪಿ ಹೈಕಮಾಂಡ್​​​ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ​​ಕುಮಾರ್ ಕಟೀಲ್​​ಗೆ ತಾಕತ್ತಿದ್ದರೆ ಯಡಿಯೂರಪ್ಪರನ್ನು ಸಿಎಂ ಸ್ಥಾನದಿಂದ‌ ಕೆಳಗಿಳಿಸಲಿ ಅಥವಾ ಬಸನಗೌಡ ಪಾಟೀಲ್ ಯತ್ನಾಳರನ್ನು ಪಕ್ಷದಿಂದ ಹೊರ ಹಾಕಲಿ ಎಂದು ಮಾಜಿ ಸಚಿವ ಶಿವರಾಜ ತಂಗಡಗಿ ಸವಾಲ್​ ಹಾಕಿದರು.

ನಗರದಲ್ಲಿ ಮಾತನಾಡಿದ ಅವರು, ಯತ್ನಾಳ್ ಅವರು ತಮ್ಮದನ್ನು ತಾವು ಮೊದಲು ನೋಡಿಕೊಳ್ಳಲಿ,ಎಂಜಲು ತಿನ್ನುವ ಅವಶ್ಯಕತೆ ಕಾಂಗ್ರೆಸ್ಸಿಗೆ ಇಲ್ಲ. ನಮ್ಮಲ್ಲಿ ಹೈಕಮಾಂಡ್ ದುರ್ಬಲವಾಗಿದೆ ಎಂಬ ಪ್ರಶ್ನೆಯೇ ಇಲ್ಲ. ಅವರ ಪಕ್ಷದ ಹೈಕಮಾಂಡ್ ವೀಕ್​​​ ಇದೆ. ಏಕೆಂದರೆ, ಅವರ ಪಕ್ಷದವರೇ ಸಿಎಂ ಭ್ರಷ್ಟಾಚಾರದ ಬಗ್ಗೆ ಮಾತನಾಡುತ್ತಾರೆ.

ಮಾಜಿ ಸಚಿವ ಶಿವರಾಜ ತಂಗಡಗಿ ಸವಾಲು

ಬಿಜೆಪಿ ಹೈಕಮಾಂಡ್ ಮೊದಲು ಎರಡರಲ್ಲಿ ಒಂದು ಕೆಲಸ ಮಾಡಲಿ, ಒಂದೋ ಯಡಿಯೂರಪ್ಪರನ್ನು ಸಿಎಂ ಸ್ಥಾನದಿಂದ‌ ಕೆಳಗಿಳಿಸಲಿ ಅಥವಾ ಬಸನಗೌಡ ಪಾಟೀಲ್​​​ ಯತ್ನಾಳ್‌ರನ್ನು ಪಕ್ಷದಿಂದ ಹೊರ ಹಾಕಲಿ ಎಂದರು.

ಕಾಂಗ್ರೆಸ್ ವಿರೋಧ ಪಕ್ಷವಾಗಿ ತನ್ನ ಕೆಲಸ ಮಾಡುತ್ತಿದೆ. ಬಿಜೆಪಿಯವರು ಸುಳ್ಳು ಹೇಳಿರೋದು ಜನರಿಗೆ ತಿಳಿಯಲಿ. ಕೊರೊನಾ ಕಾರಣದಿಂದ ಕಾಂಗ್ರೆಸ್ ಪಕ್ಷ ಸ್ವಲ್ಪ ಸುಮ್ಮನಿದೆ. ಇನ್ಮುಂದೆ ನಮ್ಮ ಪಕ್ಷ ಸರ್ಕಾರದ ವಿರುದ್ಧ ಹೋರಾಟ ಮತ್ತೆ ಪ್ರಾರಂಭಿಸುತ್ತದೆ. ಯತ್ನಾಳ್ ಅವರು ಕಾಂಗ್ರೆಸ್ ಪಕ್ಷದ ಬಗ್ಗೆ ಮಾತನಾಡುವುದು ಸರಿಯಲ್ಲ ಎಂದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.