ETV Bharat / state

ಬಿಜೆಪಿಯವರು ಹಿಂಬಾಗಿಲ ಮೂಲಕ ದೇವಾಲಯಗಳನ್ನು ಒಡೆಯುತ್ತಿದ್ದಾರೆ: ಶಿವರಾಜ ತಂಗಡಗಿ - ಸಿಟಿ ರವಿ

ಮೈಸೂರು ದೇವಾಲಯ ತೆರವು ವಿಚಾರವಾಗಿ ಮಾತನಾಡಿರುವ ಶಿವರಾಜ ತಂಗಡಗಿ, ಬಿಜೆಪಿ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ. ಬಿಜೆಪಿಗೆ ಹಿಂದೂಗಳ ಮತ ಮಾತ್ರ ಬೇಕಿದೆ. ಹಿಂದೂ ದೇವಾಲಯ ತೆರವು ಕುರಿತು ನಿಮಗೆ ಮಾಹಿತಿ ಇಲ್ಲ ಎಂದರೆ ಇದೆಂಥ ಆಡಳಿತ ಎಂದು ಪ್ರಶ್ನಿಸಿದ್ದಾರೆ.

former-minister-shivaraj-tangadagi-
ಮಾಜಿ ಸಚಿವ ಶಿವರಾಜ ತಂಗಡಗಿ
author img

By

Published : Sep 18, 2021, 7:19 AM IST

ಕೊಪ್ಪಳ: ನಾವು ಹಿಂದೂಗಳು, ದೇವಾಲಯಗಳಿಗೆ ನೇರವಾಗಿ ಹೋಗುತ್ತೇವೆ. ಆದರೆ ಬಿಜೆಪಿಯವರು ಹಿಂಬಾಗಿಲ ಮೂಲಕ ದೇವಾಲಯಗಳನ್ನು ಒಡೆಯುತ್ತಿದ್ದಾರೆ ಎಂದು ಮಾಜಿ ಸಚಿವ ಶಿವರಾಜ ತಂಗಡಗಿ ಆರೋಪಿಸಿದ್ದಾರೆ.

ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಮೈಸೂರಿನಲ್ಲಿ ದೇವಾಲಯ ತೆರವು ಪ್ರಕರಣ ಕುರಿತಂತೆ ಬಿಜೆಪಿ ನಾಯಕರು ತಮ್ಮ ತಪ್ಪು ಮುಚ್ಚಿಕೊಳ್ಳಲು ತಹಶೀಲ್ದಾರ್ ವಿಚಾರಣೆಗಾಗಿ ನೋಟಿಸ್ ನೀಡುತ್ತಾರೆ. ಹಿರಿಯ ಅಧಿಕಾರಿಗಳಿಗೆ, ಸಚಿವರಿಗೆ ಈ ಬಗ್ಗೆ ಮಾಹಿತಿ ಇಲ್ಲ ಎನ್ನುತ್ತಾರೆ. ಹಾಗಾದರೆ ಇವರ ಆಡಳಿತ ಹೇಗೆ ನಡೆದಿದೆ ಎಂದು ಪ್ರಶ್ನಿಸಿದ್ದಾರೆ.

ಬಿಜೆಪಿಗರು ಹಿಂಬಾಗಿಲ ಮೂಲಕ ದೇವಾಲಯಗಳನ್ನು ಒಡೆಯುತ್ತಿದ್ದಾರೆ: ಮಾಜಿ ಸಚಿವ ಶಿವರಾಜ ತಂಗಡಗಿ

ಮೋದಿಯನ್ನು ಹೊಗಳುತ್ತಿದ್ದ ಸಿ.ಟಿ. ರವಿ, ತೇಜಸ್ವಿ ಸೂರ್ಯ, ಚಕ್ರವರ್ತಿ ಸೂಲಿಬೆಲೆ ಎಲ್ಲಿ ಮಾಯವಾಗಿದ್ದಾರೆ. ಜನರಿಗೆ ಇವರು ಡೋಂಗಿ ಹಿಂದೂಗಳು ಎಂಬುದು ಗೊತ್ತಾಗಿದೆ. ಇವರ ಆಟ ನಡೆಯುವುದಿಲ್ಲ ಎಂದು ತಂಗಡಗಿ ವಾಗ್ದಾಳಿ ನಡೆಸಿದರು.

ಹಿಂದೆ ಕಾರ್ಯಕ್ರಮಗಳಲ್ಲಿ ಜನ ಮೋದಿ ಮೋದಿ ಎನ್ನುತ್ತಿದ್ದರು. ಈಗ ಮೋದಿ ಎಂದರೆ ಹೊಡೆಯುತ್ತಾರೆ.‌ ಗ್ರಾಮೀಣ ಭಾಗದಲ್ಲಿ ಬಿಜೆಪಿ ಹೆಸರು ಹೇಳಿದರೆ ಮಹಿಳೆಯರೇ ಓಡಾಡಿಸಿ ಹೊಡೆಯುತ್ತಾರೆ ಎಂದು ಟೀಕಿಸಿದರು. ಮೋದಿ ಹುಟ್ಟುಹಬ್ಬದಂದು ಬಿಜೆಪಿಯವರು ಲಸಿಕೆ ಅಭಿಯಾನ ಮಾಡುವುದಕ್ಕೆ ನಾಚಿಕೆಯಾಗಬೇಕು. ಲಸಿಕೆ ಹಾಕುವುದರಲ್ಲಿ ರಾಜಕಾರಣ ಮಾಡುತ್ತಿದ್ದಾರೆ. ಲಸಿಕೆ ಹಾಕಿಸಿಕೊಳ್ಳುವುದು ಸಾರ್ವಜನಿಕರ ಹಕ್ಕು. ಆದರೆ ಬಿಜೆಪಿಯವರು ಅಲ್ಲಿಯೂ ಪ್ರಚಾರ ತೆಗೆದುಕೊಳ್ಳುತ್ತಿದ್ದಾರೆ ಎಂದು ಆಕ್ರೋಶ ಹೊರಹಾಕಿದ್ದಾರೆ.

ಪ್ರಧಾನಿ ಮೋದಿ ಮತ್ತು ಬಿಜೆಪಿಗರು ಸುಳ್ಳು ಹೇಳುವುದು ಜನರಿಗೆ ಈಗ ಅರ್ಥವಾಗಿದೆ. ದೇಶದಲ್ಲಿ ಪ್ರತಿ ವರ್ಷ 2 ಕೋಟಿ ಉದ್ಯೋಗ ಸೃಷ್ಟಿಸುವುದಾಗಿ ಹೇಳಿದ್ದರು. ಈಗ 14 ಕೋಟಿ ಉದ್ಯೋಗ ನೀಡಬೇಕಾಗಿತ್ತು. ಆದರೆ ಯುವಕರಿಗೆ ಉದ್ಯೋಗವಿಲ್ಲದೆ ನಿರುದ್ಯೋಗಿಗಳಾಗಿದ್ದಾರೆ. ಅದಕ್ಕಾಗಿಯೇ ಕಾಂಗ್ರೆಸ್​ನಿಂದ ನಿರುದ್ಯೋಗಿ ದಿನಾಚರಣೆ ಆಚರಿಸಲಾಗಿದೆ ಎಂದು ತಂಗಡಗಿ ಹೇಳಿದ್ರು.

ಓದಿ: ದೇಗುಲ ಧ್ವಂಸದ ವಿರುದ್ಧ ಪ್ರತಿಭಟಿಸುವವರು ಹಿಂದೂ ತಾಲಿಬಾನಿಗಳು : ಪ್ರೊ. ಮಹೇಶ್ ಚಂದ್ರ ಗುರು

ETV Bharat Logo

Copyright © 2024 Ushodaya Enterprises Pvt. Ltd., All Rights Reserved.