ಗಂಗಾವತಿ(ಕೊಪ್ಪಳ): ಮೋದಿ ಯಾವ ಊರಲ್ಲಿ, ಯಾವ ಹೋಟೆಲ್, ಯಾವ ರೈಲ್ವೆ ನಿಲ್ದಾಣದಲ್ಲಿ ಚಹಾ ಮಾರಿದ್ದರು ಎಂಬುದನ್ನು ಬಿಜೆಪಿಗರು ಬಹಿರಂಗ ಪಡಿಸುತ್ತಿಲ್ಲ. ಸುಳ್ಳಿನ ಕಂತೆ ಹೆಣೆಯುವುದರಲ್ಲಿ ಬಿಜೆಪಿಗರು ನಿಸ್ಸೀಮರು. ಸುಳ್ಳಿನಿಂದಲೇ ಜನರಿಗೆ ಮಂಕುಬೂದಿ ಎರಚುತ್ತಿದ್ದಾರೆ ಎಂದು ಮಾಜಿ ಸಚಿವ ಶಿವರಾಜ ತಂಗಡಗಿ ಆರೋಪಿಸಿದರು.
ನಗರದಲ್ಲಿ ಭಾರತ್ ಜೋಡೋ ಯಾತ್ರೆಯ ಅಂಗವಾಗಿ ಹಮ್ಮಿಕೊಂಡಿದ್ದ ಕಾರ್ಯಕರ್ತರ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು, 10 ಲಕ್ಷ ರೂ. ಮೌಲ್ಯದ ಸೂಟು-ಬೂಟು ಧರಿಸುವವರು ಬಡವರೋ ಅಥವಾ ಅಗರ್ಭ ಶ್ರೀಮಂತರಾಗಿದ್ದರೂ ಇಂದು ಕೇವಲ ಜೀನ್ಸ್ ಪ್ಯಾಂಟ್, ಟಿ ಶರ್ಟ್ ಹಾಕಿಕೊಂಡು ಜನರ ಮಧ್ಯೆ ಇರುವ ರಾಹುಲ್ ಗಾಂಧಿ ಬಡವರೋ? ಎಂದು ಪ್ರಶ್ನಿಸಿದರು.
ಬಡವರ ಜೊತೆಗೆ ಇದ್ದೇನೆಂದು ಹೇಳುವ ಮೋದಿ ಎಂದಿಗೂ ಬಡವರಲ್ಲ. ರಾಹುಲ್ ಮನೆತನದ ಇತಿಹಾಸ ಗಮನಿಸಿದರೆ ದೇಶದ ಬಗ್ಗೆ ನಿಜವಾದ ಕಳಕಳಿ ಯಾರಿಗೆ ಇದೆ ಎಂದು ಗೊತ್ತಾಗುತ್ತದೆ ಎಂದರು. ಇದಕ್ಕೂ ಮೊದಲು ಮಾತನಾಡುವ ಭರದಲ್ಲಿ ತಂಗಡಗಿ, ನೆಹರು ಅವರ ತಾಯಿ ಇಂದಿರಾ ಗಾಂಧಿ ಎಂದು ತಪ್ಪಾಗಿ ಹೇಳಿದರು. ತಕ್ಷಣ ಎಚ್ಚೆತ್ತುಕೊಂಡು ತಮ್ಮ ಮಾತನ್ನು ಸರಿಪಡಿಸಿಕೊಂಡರು.
ಇದನ್ನೂ ಓದಿ: ಮೋದಿ ನಾಟಕ ಕಂಪನಿ ಲೀಡರ್: ಮಾಜಿ ಸಚಿವ ಶಿವರಾಜ ತಂಗಡಗಿ ವ್ಯಂಗ್ಯ