ETV Bharat / state

ಸದ್ಯದಲ್ಲೇ ಸಿದ್ದರಾಮಯ್ಯ ಜೀವನಾಧಾರಿತ ಬಯೋಪಿಕ್ ತೆರೆಗೆ? - siddaramaiah biopic

ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಜೀವನ ಆಧಾರಿತ ಚಿತ್ರವೊಂದನ್ನು ತೆರೆಗೆ ತರಲು ಸದ್ದಿಲ್ಲದೆ ಸಿದ್ಧತೆ ನಡೆಯುತ್ತಿದೆ ಎನ್ನಲಾಗಿದೆ.

siddaramaiah
ಸಿದ್ದರಾಮಯ್ಯ
author img

By

Published : Nov 30, 2022, 10:40 AM IST

ಕೊಪ್ಪಳ: ಚಿತ್ರರಂಗದಲ್ಲಿ ರಾಜಕಾರಣಿಗಳ ಜೀವನ ಆಧಾರಿತ ಸಿನಿಮಾಗಳು ಬಂದಿವೆ. ಆದರೆ, ಇದೇ ಮೊದಲ ಬಾರಿಗೆ ಕರ್ನಾಟಕದ ಮಾಜಿ ಮುಖ್ಯಮಂತ್ರಿಯ ಜೀವನಾಧಾರಿತ ಸಿನಿಮಾವನ್ನು ತೆರೆಗೆ ತರಲು ಸಿದ್ಧತೆ ನಡೆಯುತ್ತಿದೆ ಎಂಬ ಮಾಹಿತಿ ದೊರೆತಿದೆ.

ಕೊಪ್ಪಳದ ಕನಕಗಿರಿ ಕ್ಷೇತ್ರದ ಯುವ ಸಿದ್ದು ಅಭಿಮಾನಿಗಳು ನೂತನ ಪ್ರಯತ್ನಕ್ಕೆ ಕೈ ಹಾಕಿದ್ದಾರೆ. ಗಂಗಾವತಿ ತಾಲೂಕಿನ ಕನಕಗಿರಿಯ ಹೆಬ್ಬಾಳ ಗ್ರಾಮದ ಯುವ ನಿರ್ಮಾಪಕ ಹಯಾತ್ ಪೀರ್ ಮತ್ತು ಅಭಿಮಾನಿಗಳು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಜೀವನಾಧಾರಿತ ಬಯೋಪಿಕ್ ಅನ್ನು ತೆರೆಗೆ ತರುವ ಪ್ರಯತ್ನಕ್ಕೆ ಮುನ್ನುಡಿ ಇಟ್ಟಿದ್ದಾರೆ.

ಸಿದ್ದರಾಮಯ್ಯ ಜೀವನಾಧಾರಿತ ಬಯೋಪಿಕ್ ತೆರೆಗೆ ತರಲು ಸಿದ್ಧತೆ

ಇದನ್ನೂ ಓದಿ: ಚುನಾವಣೆಗೂ ಮೊದಲೇ ಕಾಂಗ್ರೆಸ್​ನಲ್ಲಿ ಸಿಎಂ ಕುರ್ಚಿಗಾಗಿ ಮ್ಯೂಸಿಕಲ್ ಚೇರ್ ಆರಂಭ: ಬಿಜೆಪಿ ಟೀಕೆ

ಈ ಕುರಿತಂತೆ ಕೊಪ್ಪಳ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಹಾಗೂ ಮಾಜಿ ಸಚಿವ ಶಿವರಾಜ್ ತಂಗಡಗಿ ಮತ್ತು ಜಮೀರ್ ಅಹ್ಮದ್ ಅವರು ಸಿದ್ದರಾಮಯ್ಯರನ್ನು ಭೇಟಿ ಮಾಡಿ ಮೊದಲ ಸುತ್ತಿನ ಮಾತುಕತೆ ನಡೆಸಿದ್ದಾರೆ. ಆದ್ರೆ, ತಮ್ಮ ಅಭಿಪ್ರಾಯ ತಿಳಿಸಲು ಸಿದ್ದು ಕಾಲಾವಕಾಶ ತೆಗೆದುಕೊಂಡಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಅವರು ಒಪ್ಪಿಗೆ ನೀಡಿದ ತಕ್ಷಣವೇ ಕನಕಗಿರಿಯಲ್ಲಿ ಸಿನಿಮಾಕ್ಕೆ ಮುಹೂರ್ತ ಫಿಕ್ಸ್ ಮಾಡಲಾಗುವುದೆಂದು ಹೇಳಲಾಗುತ್ತಿದೆ.

ಸುಮಾರು 50 ಕೋಟಿ ರೂ. ಬಜೆಟ್​ನಲ್ಲಿ ಚಿತ್ರ ನಿರ್ಮಾಣಕ್ಕೆ ಯೋಜನೆ ನಡೆಯುತ್ತಿದ್ದು, ಎಂಎಸ್ ಕ್ರಿಯೇಟಿವ್ ವರ್ಕ್ಸ್ ಬ್ಯಾನರ್ ಅಡಿಯಲ್ಲಿ ನಿರ್ಮಾಣವಾಗಲಿದೆ. ತಮಿಳಿನ ಖ್ಯಾತ ನಟ ವಿಜಯ ಸೇತುಪತಿ ಚಿತ್ರದಲ್ಲಿ ನಟಿಸಲಿದ್ದಾರೆ ಎಂದು ತಿಳಿದುಬಂದಿದೆ. ಸತ್ಯರತ್ನಂ ಎನ್ನುವ ಯುವ ನಿರ್ದೇಶಕ ನಿರ್ದೇಶನ ಮಾಡಲಿದ್ದಾರೆ.

ಇದನ್ನೂ ಓದಿ: ಸಿದ್ದರಾಮಯ್ಯ ವಿರುದ್ಧ ಶಾಸಕ ಸಿ ಟಿ ರವಿ ಅವಹೇಳನಕಾರಿ ಹೇಳಿಕೆ ಆರೋಪ: ಯುವ ಕಾಂಗ್ರೆಸ್​ನಿಂದ ದೂರು

ETV Bharat Logo

Copyright © 2025 Ushodaya Enterprises Pvt. Ltd., All Rights Reserved.