ETV Bharat / state

ಕುಷ್ಟಗಿಯಾದ್ಯಂತ 1 ಲಕ್ಷ ಗಿಡ ನೆಡಲು ಸಜ್ಜಾದ ಅರಣ್ಯ ಇಲಾಖೆ

author img

By

Published : Jun 4, 2020, 9:18 PM IST

ಕರ್ನಾಟಕದಲ್ಲಿಅರಣ್ಯ ಸಂಪತ್ತು ಹೆಚ್ಚಿಸಲು ಪಣತೊಟ್ಟಿರುವ ಅರಣ್ಯ ಇಲಾಖೆ, ಇದೀಗ ಕುಷ್ಟಗಿಯಾದ್ಯಂತ ಸುಮಾರು 1 ಲಕ್ಷ ಸಸಿಗಳನ್ನು ನೆಡಲು ತಯಾರಿ ನಡೆಸಿದೆ. ಮಳೆಯಾಗಿರುವ ಕೆಲವು ಭಾಗಗಳಲ್ಲಿ ಅರಣ್ಯ ಸಸಿ ನೆಡಲು ಸಿದ್ಧತೆ ನಡೆಸಿದ್ದು, ತಾಲೂಕಿನ ಗುಡ್ಡಗಾಡು ಪ್ರದೇಶದಲ್ಲಿ ಅರಣ್ಯ ಬೆಳೆಸಲು ಇಲಾಖೆ ಮುಂದಾಗಿದೆ.

Forest department decided to plant 1 lakh tree plant in Taluk
ಕುಷ್ಟಗಿಯಾದ್ಯಂತ 1 ಲಕ್ಷ ಗಿಡ ನೆಡಲು ಸಜ್ಜಾದ ಅರಣ್ಯ ಇಲಾಖೆ

ಕುಷ್ಟಗಿ (ಕೊಪ್ಪಳ): ಪ್ರಸಕ್ತ ವರ್ಷದಲ್ಲಿ 1ಲಕ್ಷ ಗಿಡಗಳನ್ನು ನೆಡಲು ಪ್ರಾದೇಶಿಕ ಅರಣ್ಯ ಇಲಾಖೆ ಕುಷ್ಟಗಿ ವಲಯ ಸರ್ವ ಸಿದ್ಧತೆ ಮಾಡಿಕೊಂಡಿದೆ. ಸದ್ಯ ಅಲ್ಲಲ್ಲಿ ಮಳೆಯಾದ ಪ್ರದೇಶಗಳಲ್ಲಿ ಸಸಿಗಳನ್ನು ನೆಡುವ ಕಾರ್ಯದಲ್ಲಿ ತಲ್ಲೀನವಾಗಿದೆ.

ಪ್ರಾದೇಶಿಕ ಅರಣ್ಯ ಇಲಾಖೆಯ ಕಲಕೇರಿ ಸಸ್ಯ ಕ್ಷೇತ್ರದಲ್ಲಿ ವಿವಿಧ ಜಾತಿಯ ಒಟ್ಟು 97,965 ಗಿಡಗಳನ್ನು ಬೆಳೆಸಲಾಗಿದೆ. ಪ್ರಸಕ್ತ ಅವಧಿಯಲ್ಲಿ ಮಳೆಯಾಗಿರುವ ಪ್ರದೇಶ ಗುರುತಿಸಿ, ಗಿಡಗಳನ್ನು ಸಾಗಿಸಿ ನಾಟಿ ಮಾಡಲಾಗುತ್ತಿದೆ.

ಈ ಬಾರಿ ಗುಡ್ಡಗಾಡು ಪ್ರದೇಶದಲ್ಲಿ ಅರಣ್ಯೀಕರಣಕ್ಕೆ ಒತ್ತು ನೀಡಲಾಗಿದೆ. ಬೆಳೆಸಿದ ಗಿಡಗಳಲ್ಲಿ ರೈತರಿಗೆ 30 ಸಾವಿರ ಸಸಿಗಳನ್ನು ನೀಡಲಾಗಿದೆ. ಹಸಿರು ಕರ್ನಾಟಕ ಯೋಜನೆಯಲ್ಲಿ 18 ಸಾವಿರ, ಶಾಲೆಗಳಿಗೆ 1ಸಾವಿರ, ಶ್ರೀ ಚಂದನವನಕ್ಕೆ 1,500 ಸಸಿಗಳು, ನರಸಾಪೂರ-ಮಾಲಗಿತ್ತಿ, ನಿಡಶೇಸಿ ಕೆರೆ ಪ್ರದೇಶದಲ್ಲಿ ಸಸಿಗಳನ್ನು ಹಾಗೂ ಸರ್ಕಾರ ಆದೇಶ ನೀಡಿದರೆ 6 ಕಿ.ಮೀನಲ್ಲಿ 2 ಸಾವಿರ ಸಸಿಗಳನ್ನು ನೆಡುವ ಉದ್ದೇಶ ಹೊಂದಲಾಗಿದೆ.

ಕೊರೊನಾ ಹಿನ್ನೆಲೆಯಲ್ಲಿ ಅನುದಾನ ಕಡಿಮೆ ಇರುವ ಕಾರಣ ಈ ಬಾರಿ ಕುಷ್ಟಗಿಯಲ್ಲಿ ಸಸಿಗಳನ್ನು ನೆಡುತ್ತಿಲ್ಲ. ತಾಲೂಕಿನ ಗುಡ್ಡಗಾಡು ಪ್ರದೇಶಗಳಾದ ಮ್ಯಾದರಡೊಕ್ಕಿ, ಮುದ್ದಲಗುಂದಿ, ಕಿಲ್ಲಾರಹಟ್ಟಿ, ಬೀಳಗಿ, ಮೆಣಸಗೇರಾ ತಾಂಡ ಪ್ರದೇಶಗಳ ಗುಡ್ಡಗಾಡು ಪ್ರದೇಶದಲ್ಲಿ ಒಟ್ಟು, 42,465 ಸಸಿಗಳನ್ನು ನೆಡಲು ಉದ್ದೇಶಿಸಲಾಗಿದೆ ಎಂದು ಪ್ರಾದೇಶಿಕ ಅರಣ್ಯ ಇಲಾಖೆ ಉಪ ವಲಯ ಸಂರಕ್ಷಣಾಧಿಕಾರಿ ಶಿವಶಂಕರ ರ್ಯಾವಣಕಿ ಮಾಹಿತಿ ನೀಡಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.