ETV Bharat / state

ಕೊಪ್ಪಳ: ತುಂಗಭದ್ರಾ ನದಿ ತೀರದಲ್ಲೀಗ ದೇಶ-ವಿದೇಶದ ಬಾನಾಡಿಗಳದ್ದೇ ಕಲರವ - ಕರ್ನಾಟಕದಲ್ಲಿ ವಿದೇಶಿ ಪಕ್ಷಿಗಳು

ದೇಶ, ವಿದೇಶದಿಂದ ಪಕ್ಷಿಗಳು ವಲಸೆ ಬರುತ್ತಿದ್ದು ತುಂಗಭದ್ರಾ ನದಿ ತಟದಲ್ಲಿ ಪಕ್ಷಿಗಳ ಕಲರವ ಮನಸ್ಸಿಗೆ ಮುದ ನೀಡುವಂತಿದೆ.

foreign birds in koppala tungabhadra river bank
ದೇಶ ವಿದೇಶಿ ಪಕ್ಷಿಗಳ ಕಲರವ
author img

By

Published : Feb 13, 2022, 1:14 PM IST

ಕೊಪ್ಪಳ: ಸಾಮಾನ್ಯವಾಗಿ ಡಿಸೆಂಬರ್ ತಿಂಗಳಲ್ಲಿ ವಿದೇಶಗಳಿಂದ ಬರುತ್ತಿದ್ದ ಪಕ್ಷಿಗಳ ಆಗಮನ ಈ ಬಾರಿ ಸ್ವಲ್ಪ ತಡವಾಗಿ ಆಗಿದೆ.

ತುಂಗಭದ್ರಾ ಜಲಾಶಯದ ಹಿನ್ನೀರು ಪ್ರದೇಶ ಹಾಗೂ ನದಿ ತಟದ ಗ್ರಾಮಗಳಾದ ಕೊಪ್ಪಳ ತಾಲೂಕಿನ ಕಾತರಕಿ-ಗಡ್ಲಾನೂರು, ತಿಗರಿ, ಬೋಚನಹಳ್ಳ ಗ್ರಾಮದ ಬಳಿ ದೇಶ ಹಾಗೂ ವಿದೇಶಿ ಪಕ್ಷಿಗಳು ಕಾಣಸಿಗುತ್ತವೆ. ಈ ಗ್ರಾಮಗಳಿಗೆ ಹೊಂದಿಕೊಂಡಿರುವ ತುಂಗಭದ್ರಾ ನದಿಯ ದಡದಲ್ಲಿಯೂ ವಿದೇಶಿ ಬಾನಾಡಿಗಳದ್ದೇ ಸದ್ದು.

ಉತ್ತರದ ಹಿಮಾಲಯ ಸೇರಿದಂತೆ ದೇಶದ ವಿವಿಧ ಭಾಗಗಳು ಮತ್ತು ಸೈಬೀರಿಯಾ,‌ ಟಿಬೆಟ್‌ ಹಾಗು ಮಂಗೋಲಿಯಾದ ಪಕ್ಷಿಗಳು ಜಲಾಶಯದ ಹಿನ್ನೀರು ಪ್ರದೇಶಕ್ಕೆ ವಲಸೆ ಬಂದಿವೆ. ‌ಸಾಮಾನ್ಯವಾಗಿ ಡಿಸೆಂಬರ್ ತಿಂಗಳಿನಲ್ಲಿ ಇಲ್ಲಿಗೆ ಪಕ್ಷಿಗಳು ವಲಸೆ ಬರುತ್ತಿದ್ದವು. ಹೀಗೆ ಬರುವ ಪಕ್ಷಿಗಳು ತಮ್ಮ ಸಂತಾನೋತ್ಪತ್ತಿ ‌ಮಾಡಿಕೊಳ್ಳುತ್ತಿದ್ದವು. ಆದರೆ ಈ ಸಲ ಜನವರಿ ಕೊನೆ ದಿನಗಳಲ್ಲಿ ವಲಸೆ ಬಂದಿವೆ.

ಸದ್ಯ ತುಂಗಭದ್ರಾ ನದಿ ತೀರದಲ್ಲಿ ಬೆಳ್ಳಕ್ಕಿ, ಕ್ಯಾಟಲ್ ಇಗ್ರೇಟ್, ಲಿಟಲ್ ಇಗ್ರೇಟ್, ಬೂದು ಮತ್ತು ನೇರಳೆ ಬಣ್ಣದ ಬಕಪಕ್ಷಿ, ಕೊಕ್ಕರೆ ಜಾತಿಗೆ‌ ಸೇರಿದ ವೈಟ್ ಐಬೀಸ್,‌ ಐಬೀಸ್, ಓಪನ್ ಬಿಲ್ ಸ್ಟಾಕ್, ರಿವರ್ ಟರ್ನ್ ಎಂಬ ಹಕ್ಕಿಗಳು ನೋಡಲು ಸಿಗುತ್ತವೆ. ಮಾಗಿ ಚಳಿಯ ನಡುವೆ ದೇಶ ವಿದೇಶದ ಈ ಪಕ್ಷಿಗಳ ಚಿಲಿಪಿಲಿ ನದಿಯ ಸೊಬಗನ್ನು ಇನ್ನಷ್ಟು ಹೆಚ್ಚಿಸಿವೆ. ಈ ಹಕ್ಕಿಗಳು ರೆಕ್ಕೆ ಬಿಚ್ಚಿ ಹಾರುವುದನ್ನು ನೋಡಲು ಪಕ್ಷಿಪ್ರೇಮಿಗಳು ತುಂಗಭದ್ರಾ ಹಿನ್ನೀರು ಪ್ರದೇಶ ಹಾಗೂ ನದಿ ತೀರದತ್ತ ಮುಖ ಮಾಡಿದ್ದಾರೆ.

ಇದನ್ನೂ ಓದಿ: ಜಾತಿ ಜನಗಣತಿಯನ್ನು ಸುಪ್ರೀಂಕೋರ್ಟ್ ಒಪ್ಪಿಕೊಳ್ಳುವ ಭರವಸೆ ಇದೆ: ಸಿದ್ದರಾಮಯ್ಯ

ಸಾಕಷ್ಟು ಪಕ್ಷಿ ಛಾಯಾಗ್ರಾಹಕರು ಕೂಡ ಇಲ್ಲಿಗೆ ಬಂದು ಪಕ್ಷಿಗಳ ವಿವಿಧ ಭಂಗಿಗಳನ್ನು ತಮ್ಮ ಕ್ಯಾಮರಾ ಕಣ್ಣಿನಲ್ಲಿ ಸೆರೆ ಹಿಡಿಯುತ್ತಿದ್ದಾರೆ. ವಲಸಿಗ ಪಕ್ಷಿಗಳು ನದಿತೀರದ ಜಮೀನಿನಲ್ಲಿ ಬೆಳೆಗಳಲ್ಲಿನ ಕೀಟಗಳನ್ನು ಹೆಕ್ಕಿ ತಿನ್ನುತ್ತಿದ್ದು ಬೆಳೆಗೆ ಆಗುವ ಕೀಟಬಾಧೆ ನಿಯಂತ್ರಿಸುತ್ತಿವೆ ಎನ್ನುತ್ತಾರೆ ರೈತರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.