ETV Bharat / state

ಕುಷ್ಟಗಿಯಲ್ಲಿ ಆಹಾರ ಸಾಮಗ್ರಿಗಳ ಕಿಟ್​ಗಾಗಿ ನೂಕು ನುಗ್ಗಲು: ಪುರಸಭೆ ಸಿಬ್ಬಂದಿಗೆ ಸವಾಲು - ಕುಷ್ಟಗಿಯಲ್ಲಿ ಆಹಾರ ಸಾಮಗ್ರಿಗಳ ಕಿಟ್​ಗಾಗಿ ನೂಕು ನುಗ್ಗಲು

ತಾಲೂಕು ಆಡಳಿತಕ್ಕೆ ದಾನಿಗಳು ನೀಡಿದ ಆಹಾರ ಸಾಮಗ್ರಿಗಳನ್ನು ಕಿಟ್​ನ್ನು ಕುಷ್ಟಗಿಯಲ್ಲಿ ವಿತರಣೆ ಮಾಡಲಾಗುತ್ತಿದ್ದು, ಕಿಟ್​ ಪಡೆಯಲು ಬಂದವರನ್ನು ನಿಯಂತ್ರಿಸುವುದು ಪುರಸಭೆಗೆ ಸವಾಲಾಗಿ ಪರಿಣಮಿಸಿದೆ.

Food Kit Distribution in Kushtagi of Koppal
ಕುಷ್ಟಗಿಯಲ್ಲಿ ಆಹಾರ ಸಾಮಗ್ರಿಗಳ ಕಿಟ್​ಗಾಗಿ ನೂಕು ನುಗ್ಗಲು
author img

By

Published : May 12, 2020, 12:45 PM IST

ಕುಷ್ಟಗಿ: ದಾನಿಗಳ ಸಹಕಾರದೊಂದಿಗೆ ಪುರಸಭೆ ವಿತರಿಸುತ್ತಿರುವ ಕಿಟ್​ ಪಡೆಯಲು ನೂಕು ನುಗ್ಗಲು ಶುರುವಾಗಿದ್ದು, ಜನರನ್ನು ನಿಯಂತ್ರಿಸುವುದು ದೊಡ್ಡ ತಲೆನೋವಾಗಿ ಪರಿಣಮಿಸಿದೆ.

ತಾಲೂಕು ಆಡಳಿತಕ್ಕೆ ದಾನಿಗಳು ಆಹಾರ ಸಾಮಗ್ರಿಗಳ ಕಿಟ್​ ನೀಡಿದ್ದು, ಪಡಿತರ ಕಾರ್ಡ್​ ಇಲ್ಲದವರು ಮತ್ತು ನಿರ್ಗತಿಕರಿಗೆ ವಿತರಿಸಲು ತಿಳಿಸಿದ್ದಾರೆ. ಕುಷ್ಟಗಿಯಲ್ಲಿ ಕಿಟ್​ ವಿತರಿಸುವ ಜವಬ್ದಾರಿ ಪುರಸಭೆಗೆ ನೀಡಲಾಗಿದೆ. ಆಧಾರ್​ ಕಾರ್ಡ್​ ಪರಿಗಣಿಸಿ ಜನರಿಗೆ ಕಿಟ್​ ವಿತರಿಸಲಾಗುತ್ತಿದೆ. ಆದರೆ, ದಿನಕಳೆದಂತೆ ಕಿಟ್​ ಪಡೆಯಲು ಬರುವವರ ಸಂಖ್ಯೆ ಜಾಸ್ತಿಯಾಗುತ್ತಿದ್ದು, ನೂಕು ನುಗ್ಗಲು ಶುರುವಾಗಿದೆ. ಸಾಮಾಜಿಕ ಅಂತರ ಕಾಪಾಡುವಂತೆ ಎಷ್ಟೇ ಹೇಳಿದ್ರು ಜನ ಮಾತ್ರ ಕೇಳುತ್ತಿಲ್ಲ. ಹೀಗಾಗಿ ಜನರನ್ನು ನಿಯಂತ್ರಿಸುವುದು ಪುರಸಭೆ ಸಿಬ್ಬಂದಿಗೆ ಸವಾಲಾಗಿ ಪರಿಣಮಿಸಿದೆ.

ಈ ಮಧ್ಯೆ ಪುರಸಭೆ ಸಿಬ್ಬಂದಿ ಕೊಟ್ಟವರಿಗೇ ಮತ್ತೆ ಮತ್ತೆ ಕಿಟ್​ ಕೊಡುತ್ತಿದ್ದಾರೆ ಎಂದು ಕೆಲವರು ಆರೋಪಿಸಿದ್ದು, ಈ ಬಗ್ಗೆ ತಹಶೀಲ್ದಾರ್​ಗೆ ದೂರು ನೀಡಿದ್ದಾರೆ.

For All Latest Updates

ETV Bharat Logo

Copyright © 2025 Ushodaya Enterprises Pvt. Ltd., All Rights Reserved.