ಗಂಗಾವತಿ: ಶಾಲೆಗಳು ಆರಂಭವಾಗಲಿರುವ ಹಿನ್ನೆಲೆ ಮಕ್ಕಳನ್ನು ಶಾಲೆಯತ್ತ ಸೆಳೆಯುವ ಉದ್ದೇಶಕ್ಕೆ ತಾಲೂಕಿನ ಆನೆಗೊಂದಿ ಗ್ರಾಮದ ಸರ್ಕಾರಿ ಶಾಲೆಯ 150ಕ್ಕೂ ಹೆಚ್ಚು ಮಕ್ಕಳಿಗೆ ತಲಾ ಎರಡು ಸಾವಿರ ರೂಪಾಯಿ ಮೌಲ್ಯದ ಆಹಾರದ ಕಿಟ್ಗಳನ್ನು ವಿತರಿಸಲಾಯಿತು.
ಬೆಂಗಳೂರಿನ ಫೋರ್ಥ್ ವೇವ್ ಫೌಂಡೇಷನ್ ಸಂಸ್ಥೆಯ ಪ್ರಾಯೋಜಕತ್ವದಲ್ಲಿ ಬೆಂಗಳೂರು ಮೂಲದ ಶಿಕ್ಷಣ ಪ್ರೇಮಿ ಶಿಬುಲಾಲ್ ಎಂಬುವವರ ಸರೋಜಿನಿ ದಾಮೋದರ ಫೌಂಡೇಷನ್ ಹಾಗೂ ವಿದ್ಯಾಧನ್ ತಂಡದಿಂದ 'ನನಗೂ ಶಾಲೆ' ಎಂಬ ಯೋಜನೆಯಡಿ ವಿಶೇಷ ಅಗತ್ಯಯುಳ್ಳ ಮಕ್ಕಳಿಗೆ ಕಿಟ್ ನೀಡಲಾಯಿತು.
ಪೇಸ್ಟ್, ಬ್ರಶ್, ಟಂಗ್ಲರ್, ಸೋಪು, ಸ್ಯಾನಿಟರಿ ಪ್ಯಾಡ್, ಹ್ಯಾಂಡ್ ವಾಶ್, ಕೊಬ್ಬರಿ ಎಣ್ಣೆ ಹಾಗೂ ಪೌಷ್ಠಿಕ ಆಹಾರ ಧಾನ್ಯಗಳನ್ನು ಒಳಗೊಂಡ ಕಿಟ್ಅನ್ನು ಪಾಲಕರು ಹಾಗೂ ಶಾಲೆಯ ಶಿಕ್ಷಕರ ಸಮ್ಮುಖದಲ್ಲಿ ನೀಡಲಾಯಿತು.