ETV Bharat / state

ಕುಸಿದ ಹೂವಿನ ಬೆಲೆ:ಬೆಳೆಗೆ ಕುರಿ ಮೇಯಲು ಬಿಟ್ಟ ರೈತ - ಗಲಾಟೆ ಹೂವು

ಕೊಪ್ಪಳ ತಾಲೂಕಿನ ಬಹದ್ದೂರಬಂಡಿ ಗ್ರಾಮದ ಪಾಯಣ್ಣ ಎಂಬ ರೈತ ಹೂವಿನ ಬೆಲೆ ಮಾರುಕಟ್ಟೆಯಲ್ಲಿ ಕುಸಿದ ಹಿನ್ನೆಲೆ ಬೆಳೆಗೆ ಕುರಿ ಮೇಯಲು ಬಿಟ್ಟಿದ್ದಾರೆ.

dsdsd
ಬೆಳೆಗೆ ಕುರಿ ಮೇಯಲು ಬಿಟ್ಟ ರೈತ
author img

By

Published : Apr 15, 2021, 11:25 PM IST

ಕೊಪ್ಪಳ: ಮಾರುಕಟ್ಟೆಯಲ್ಲಿ ಹೂವಿನ ಬೆಲೆ ಕುಸಿದ ಹಿನ್ನೆಲೆ ರೈತ ಒಂದು ಎಕರೆಯಲ್ಲಿ ಬೆಳೆದಿದ್ದ ಹೂವಿನ ಬೆಳೆಯನ್ನು ಕುರಿ ಮೇಯಲು ಬಿಟ್ಟಿದ್ದಾರೆ.

ಬೆಳೆಗೆ ಕುರಿ ಮೇಯಲು ಬಿಟ್ಟ ರೈತ

ಮಾರುಕಟ್ಟೆಯಲ್ಲಿ ರೈತರು ಬೆಳೆದ ಬೆಳೆಗೆ ಸೂಕ್ತ ದರ ಸಿಗುತ್ತಿಲ್ಲ. ಟೊಮೋಟೊ, ಬಾಳೆ, ಹೂ ಸೇರಿದಂತೆ ವಿವಿಧ ಕೃಷಿ ಉತ್ಪನ್ನಗಳ ಬೆಲೆ ಪಾತಾಳಕ್ಕೆ ಕುಸಿದಿದ್ದು, ರೈತರು ಕಂಗಲಾಗಿದ್ದಾರೆ. ಸೇವಂತಿಗೆ ಹೂವಿನ ಜಾತಿಗೆ ಸೇರಿರುವ ಗಲಾಟೆ ಹೂ ಎಂದು ಕರೆಯಲ್ಪಡುವ ಹೂವಿನ ದರವೂ ಕುಸಿದಿದೆ. ಇದರಿಂದ ಬಹದ್ದೂರಬಂಡಿ ಗ್ರಾಮದ ರೈತ ಪಾಯಣ್ಣ ತಮ್ಮ ಒಂದು ಎಕರೆಯಲ್ಲಿ ಬೆಳೆಯಲಾಗಿದ್ದ ಗಲಾಟೆ ಹೂವಿನ ಬೆಳೆಯನ್ನು ಕುರಿ ಮೇಯಿಸಿದ್ದಾನೆ.

ಈಗ ಗಲಾಟೆ ಹೂವಿನ ದರ ಮಾರುಕಟ್ಟೆಯಲ್ಲಿ ಕೆಜಿಗೆ ಕೇವಲ 20 ರೂ. ಮಾತ್ರ ಇದೆ. ಹೂ ಕಟಾವು ಮಾಡಲು ಸಹ ಆದಾಯ ಬರುತ್ತಿಲ್ಲ. ಭೂಮಿಯ ಗುತ್ತಿಗೆ ಹಣ ಹಾಗೂ ಹೂವಿನ ಬೆಳೆಗೆ ಮಾಡಿರುವ ಖರ್ಚು ಸೇರಿ ಸುಮಾರು 40 ಸಾವಿರ ರೂಪಾಯಿ ಆಗುತ್ತದೆ. ಆದರೆ ಈಗ ಕೊರೊನಾ ಎರಡನೇ ಅಲೆ ಹಿನ್ನೆಲೆ ಸಭೆ ಸಮಾರಂಭಗಳು ನಡೆಯುತ್ತಿಲ್ಲ. ಹೀಗಾಗಿ ಗಲಾಟೆ ಹೂವಿನ‌ದರ ಕುಸಿತವಾಗಿದೆ. ಇದರಿಂದಾಗಿ ನಾವು ಏನು ಮಾಡಬೇಕು ಎಂದು ತೋಚುತ್ತಿಲ್ಲ ಎಂದು ರೈತರು ಅಳಲು ತೋಡಿಕೊಂಡಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.