ಕೊಪ್ಪಳ: ಸೋಮವಾರವಷ್ಟೇ ಕೋಟ್ಯಂತರ ರೂಪಾಯಿ ಮೌಲ್ಯದ ನಗದು ಮತ್ತು ಕೆಜಿಗಟ್ಟಲೆ ಬಂಗಾರದಿಂದ ಅಲಂಕಾರಗೊಂಡಿದ್ದ ಹಿರೇಜಂತಕಲ್ ಕನ್ನಿಕಾ ಪರಮೇಶ್ವರಿ ದೇವಿಗೆ ಇಂದು ವಿಜಯದಶಮಿ ಹಿನ್ನೆಲೆ 105 ಕೆಜಿ ಹೂವು ಬಳಸಿ ಅಲಂಕಾರ ಮಾಡಲಾಗಿದೆ.
ಅಮ್ಮನವರ ಸಿಂಹ ಮುಖದ ಪೀಠದ ಅಲಂಕಾರಕ್ಕೆ ಸುಗಂಧಿ, ಚೆಂಡು ಹೂ, ಗುಲಾಬಿ, ಸೇವಂತಿ ಹೂಗಳಿಂದ ಸಿಂಗರಿಸಲಾಗಿದೆ. ದೇವಿಯ ವಿಗ್ರಹಕ್ಕೆ ತುಳಸಿ, ಮಲ್ಲಿಗೆ, ಸುಗಂಧಿ, ಗುಲಾಬಿ, ಅಡಿಕೆ ಹೂವಿನ ಜೊತೆಗೆ ಪಾರಿಜಾತ ಹೂವಿನಿಂದ ಮಾಡಿದ ಮಾಲೆಯಲ್ಲಿ ಅಲಂಕಾರಿಸಲಾಗಿದೆ.