ETV Bharat / state

ವಿರುಪಾಪುರಗಡ್ಡೆಯಲ್ಲಿ ಪ್ರವಾಹ ಭೀತಿ... ಏರ್​​ಲಿಫ್ಟ್​​​​​​​​​ ಮೂಲಕ ಜನರ ರಕ್ಷಣೆ - ಅಗ್ನಿಶಾಮಕ ಸಿಬ್ಬಂದಿ

ಗಂಗಾವತಿ ತಾಲೂಕಿನ ವಿರುಪಾಪುರಗಡ್ಡೆಯಲ್ಲಿ ಪ್ರವಾಹ ಭೀತಿ ಎದುರಾಗಿದೆ. ನೆರೆ ಭೀತಿಗೆ ಸಿಕ್ಕ ಬಹುತೇಕ ಜನರನ್ನು ಎನ್‍ಡಿಆರ್​ಎಫ್​​ ತಂಡ, ಅಗ್ನಿಶಾಮಕ ಸಿಬ್ಬಂದಿ ಹಾಗೂ ಸಿವಿಲ್ ಡಿಫೆನ್ಸ್ ಸಿಬ್ಬಂದಿ ರಕ್ಷಣೆ ಮಾಡಿದರು.

ಏರ್​ಲಿಫ್ಟ್​ ಮೂಲಕ ಜನರ ರಕ್ಷಣೆ
author img

By

Published : Aug 12, 2019, 11:01 PM IST

ಕೊಪ್ಪಳ: ತುಂಗಭದ್ರಾ ಜಲಾಶಯದಿಂದ ನದಿಗೆ ಅಪಾರ ಪ್ರಮಾಣದಲ್ಲಿ ನೀರು ಬಿಟ್ಟಿದ್ದರಿಂದ ಜಿಲ್ಲೆಯ ಗಂಗಾವತಿ ತಾಲೂಕಿನ ವಿರುಪಾಪುರಗಡ್ಡೆಯಲ್ಲಿ ಪ್ರವಾಹ ಭೀತಿ ಎದುರಾಗಿದೆ. ನೆರೆ ಭೀತಿಗೆ ಸಿಕ್ಕ ಬಹುತೇಕ ಜನರನ್ನು ಎನ್‍ಡಿಆರ್​ಎಫ್​​ ತಂಡ, ಅಗ್ನಿಶಾಮಕ ಸಿಬ್ಬಂದಿ ಹಾಗೂ ಸಿವಿಲ್ ಡಿಫೆನ್ಸ್ ಸಿಬ್ಬಂದಿ ರಕ್ಷಣೆ ಮಾಡಿದರು.

ಇನ್ನೂ 195 ಜನರನ್ನು ರಕ್ಷಣೆ ಮಾಡಬೇಕಿದೆ. ಇಂದು ಬೆಳಗ್ಗೆ ರೆಸ್ಕ್ಯೂ ಕಾರ್ಯ ಆರಂಭವಾಯಿತು. ಈ ಸಂದರ್ಭಲ್ಲಿ ಬೋಟ್ ಮೂಲಕ 23 ವಿದೇಶಿ ಪ್ರವಾಸಿಗರು ಸೇರಿದಂತೆ ಸುಮಾರು 60ಕ್ಕೂ ಹೆಚ್ಚು ಜನರನ್ನು ರಕ್ಷಣೆ ಮಾಡಲಾಯಿತು. ಈ ಸಂದರ್ಭದಲ್ಲಿ ನೀರಿನ ರಭಸಕ್ಕೆ ಬೋಟ್ ಮಗುಚಿ ಬಿದ್ದು ರಕ್ಷಣಾ ಕಾರ್ಯದ ಐವರು ಸಿಬ್ಬಂದಿ ನೀರಿನಲ್ಲಿ ಕೊಚ್ಚಿಹೋಗಿ ಆತಂಕ ಎದುರಾಯಿತು. ಕೊಚ್ಚಿ ಹೋಗಿದ್ದ ಐವರು ಸಿಬ್ಬಂದಿ ಸೇಫ್ ಆಗಿದ್ದಾರೆ.

ಏರ್​ಲಿಫ್ಟ್​ ಮೂಲಕ ಜನರ ರಕ್ಷಣೆ

ಬಳಿಕ ಘಟನೆಯಿಂದ ಬೋಟ್ ಮೂಲಕ ಜನರನ್ನು ರಕ್ಷಿಸುವ ಕಾರ್ಯವನ್ನು ಕೈಬಿಟ್ಟು, ಏರ್​ಲಿಫ್ಟ್​ ಮೂಲಕ ಜನರ ರಕ್ಷಣಾ ಕಾರ್ಯ ಆರಂಭಗೊಂಡಿತು. ಸೇನೆಯ 2 ಹೆಲಿಕಾಪ್ಟರ್​ಗಳ ಮೂಲಕ ವಿರುಪಾಪುರಗಡ್ಡೆಯಲ್ಲಿದ್ದ ಜನರನ್ನು ರಕ್ಷಿಸಲಾಯಿತು. ಸಂಜೆಯಾಗಿದ್ದರಿಂದ ರಕ್ಷಣಾ ಕಾರ್ಯ ಇಂದು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ. ಇಂದು ಸುಮಾರು 300ಕ್ಕೂ ಹೆಚ್ಚು ಜನರನ್ನು ಹೆಲಿಕಾಪ್ಟರ್ ಮೂಲಕ ರಕ್ಷಣೆ ಮಾಡಲಾಗಿದೆ. ವಿರುಪಾಪುರಗಡ್ಡೆಯಲ್ಲಿ ಇನ್ನೂ 195 ಜನರಿದ್ದು, ಅವರನ್ನು ನಾಳೆ ಬೆಳಗ್ಗೆ ಮತ್ತೆ ಏರ್​ಲಿಫ್ಟ್​ ಮೂಲಕ ಸ್ಥಳಾಂತರ ಮಾಡಲಾಗುತ್ತದೆ ಎಂದು ತಿಳಿದು ಬಂದಿದೆ.

ರಕ್ಷಣಾ ಕಾರ್ಯದ ಸಂದರ್ಭದಲ್ಲಿ ಸಂಸದ ಸಂಗಣ್ಣ ಕರಡಿ, ಗಂಗಾವತಿ ಶಾಸಕ ಪರಣ್ಣ ಮುನವಳ್ಳಿ ಸ್ಥಳದಲ್ಲಿ ಹಾಜರಿದ್ದರು. ಅಲ್ಲದೆ, ಜಿಲ್ಲಾಧಿಕಾರಿ ಪಿ.ಸುನೀಲಕುಮಾರ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರೇಣುಕಾ ಸುಕುಮಾರ್, ಉಪ ವಿಭಾಗಾಧಿಕಾರಿ ಸಿ.ಡಿ.ಗೀತಾ ಸೇರಿದಂತೆ ಅನೇಕ ಅಧಿಕಾರಿಗಳು ಸ್ಥಳದಲ್ಲಿಯೇ ಮೊಕ್ಕಾಂ ಹೂಡಿದ್ದರು. ಮಳೆಯಾಗದಿದ್ದರೂ ಸಹ ಜಿಲ್ಲೆಯ ತುಂಗಭದ್ರಾ ನದಿ ಪಾತ್ರದ ಗ್ರಾಮಗಳು ಪ್ರವಾಹದ ಭೀತಿಗೊಳಗಾಗಿವೆ.

Intro:Body:ಕೊಪ್ಪಳ:- ತುಂಗಭದ್ರಾ ಜಲಾಶಯದಿಂದ ನದಿಗೆ ಅಪಾರ ಪ್ರಮಾಣದಲ್ಲಿ ನೀರು ಬಿಟ್ಟಿದ್ದರಿಂದ ಜಿಲ್ಲೆಯ ಗಂಗಾವತಿ ತಾಲೂಕಿನ ವಿರುಪಾಪುರಗಡ್ಡೆಯಲ್ಲಿ ಪ್ರವಾಹ ಭೀತಿ ಎದುರಿಸುತ್ತಿದ್ದ ಜನರನ್ನು ಇಂದು ಎನ್‍ಡಿಆರ್‍ಎಫ್ ತಂಡ, ಅಗ್ನಿಶಾಮಕ ಸಿಬ್ಬಂದಿ ಹಾಗೂ ಸಿವಿಲ್ ಡಿಫೆನ್ಸ್ ಸಿಬ್ಬಂದಿಗಳು ಬಹುತೇಕ ಜನರನ್ನು ರಕ್ಷಣೆ ಮಾಡಿದ್ದು ಇನ್ನೂ 195 ಜನರನ್ನು ರಕ್ಷಣೆ ಮಾಡಬೇಕಿದೆ. ಇಂದು ಬೆಳಗ್ಗೆ ರೆಸ್ಕ್ಯೂ ಕಾರ್ಯ ಆರಂಭವಾಯಿತು. ಈ ಸಂದರ್ಭಲ್ಲಿ ಬೋಟ್ ಮೂಲಕ 23 ವಿದೇಶಿ ಪ್ರವಾಸಿಗರು ಸೇರಿದಂತೆ ಸುಮಾರು 60 ಕ್ಕೂ ಹೆಚ್ಚು ಜನರನ್ನು ರಕ್ಷಣೆ ಮಾಡಲಾಯಿತು. ಈ ಸಂದರ್ಭದಲ್ಲಿ ನೀರಿನ ರಭಸಕ್ಕೆ ಬೋಟ್ ಮಗುಚಿಬಿದ್ದು ರಕ್ಷಣಾ ಕಾರ್ಯದ ಐವರು ಸಿಬ್ಬಂದಿಗಳೇ ನೀರಿನಲ್ಲಿ ಕೊಚ್ಚಿಹೋಗಿದ್ದರಿಂದ ಆತಂಕ ಎದುರಾಯಿತು. ಈ ಸಂದರ್ಭದಲ್ಲಿ ಜಿಲ್ಲಾಡಳಿತ ಹಾಗೂ ಜಿಲ್ಲಾ ಪೊಲೀಸ್ ಇಲಾಖೆಗೆ ಮತ್ತೊಂದು ಚಿಂತೆಗೆ ಒಳಗಾಗುವಂತಾಯಿತು. ಈ ನಡುವೆ ಕೊಚ್ಚಿ ಹೋಗಿದ್ದ ಆ ಐವರು ಸಿಬ್ಬಂದಿಗಳು ಸೇಫ್ ಆಗಿರೋದು ಕನ್ಫರ್ಮ್ ಆದ ಬಳಿಕ ಎಲ್ಲರೂ ನೆಮ್ಮದಿಯ ನಿಟ್ಟುಸಿರು ಬಿಡುವಂತಾಯಿತು. ಈ ಘಟನೆಯಿಂದ ಬೋಟ್ ಮೂಲಕ ಜನರನ್ನು ರಕ್ಷಿಸುವ ಕಾರ್ಯವನ್ನು ಕೈಬಿಟ್ಟು ಅಲ್ಲಿಂದ ಜನರನ್ನು ಏರ್‍ಲಿಫ್ಟ್ ಮಾಡುವ ಕಾರ್ಯ ಆರಂಭಗೊಂಡಿತು. ಸೇನೆಯ ಎರಡು ಹೆಲಿಕ್ಯಾಫ್ಟರ್‍ಗಳ ಮೂಲಕ ವಿರುಪಾಪುರಗಡ್ಡೆಯಲ್ಲಿದ್ದ ಜನರನ್ನು ಏರ್‍ಲಿಫ್ಟ್ ಮಾಡಲಾಯಿತು. ಸಂಜೆಯಾಗಿದ್ದರಿಂದ ರಕ್ಷಣಾ ಕಾರ್ಯ ಇಂದು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ. ಇಂದು ಸುಮಾರು 300 ಕ್ಕೂ ಹೆಚ್ಚು ಜನರನ್ನು ಹೆಲಿಕ್ಯಾಫ್ಟರ್ ಮೂಲಕ ರಕ್ಷಣೆ ಮಾಡಲಾಗಿದೆ. ಇನ್ನೂ ವಿರುಪಾಪುರಗಡ್ಡೆಯಲ್ಲಿ 195 ಜನರು ಇದ್ದು ಅವರನ್ನು ನಾಳೆ ಬೆಳಗ್ಗೆ ಹೆಲಿಕಾಫ್ಟರ್ ಮೂಲಕ ಸ್ಥಳಾಂತರ ಮಾಡಲಾಗುತ್ತದೆ ಎಂಬ ಮಾಹಿತಿ ತಿಳಿದು ಬಂದಿದೆ. ರಕ್ಷಣಾ ಕಾರ್ಯದ ಸಂದರ್ಭದಲ್ಲಿ ಸಂಸದ ಸಂಗಣ್ಣ ಕರಡಿ, ಗಂಗಾವತಿ ಶಾಸಕ ಪರಣ್ಣ ಮುನವಳ್ಳಿ ಸ್ಥಳದಲ್ಲಿ ಹಾಜರಿದ್ದರು. ಅಲ್ಲದೆ, ಜಿಲ್ಲಾಧಿಕಾರಿ ಪಿ. ಸುನೀಲಕುಮಾರ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರೇಣುಕಾ ಸುಕುಮಾರ್, ಉಪವಿಭಾಗಾಧಿಕಾರಿ ಸಿ.ಡಿ. ಗೀತಾ ಸೇರಿದಂತೆ ಅನೇಕ ಅಧಿಕಾರಿಗಳು ಸ್ಥಳದಲ್ಲಿಯೇ ಮೊಕ್ಕಾ ಹೂಡಿದ್ದರು. ಮಳೆಯಾಗದಿದ್ದರೂ ಸಹ ಜಿಲ್ಲೆಯ ತುಂಗಭದ್ರಾ ನದಿ ಪಾತ್ರದ ಗ್ರಾಮಗಳು ಪ್ರವಾಹದ ಭೀತಿಗೊಳಗಾಗಿವೆ.
------------Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.