ಕೊಪ್ಪಳ: ನಗರದ ಬಸ್ ನಿಲ್ದಾಣದ ಬಳಿ ಪ್ರತಿಭಟನೆ ನಡೆಸಿದ ಎಸ್ಎಫ್ಐ ಸಂಘಟನೆ ಕಾರ್ಯಕರ್ತರು ಹಾಸ್ಟೆಲ್ ವಾರ್ಡನ್ ಹಾಗೂ ಸಿಬ್ಬಂದಿಗಳ ನಿರ್ಲಕ್ಷ್ಯವೇ ಈ ದುರಂತಕ್ಕೆ ಕಾರಣ ಎಂದು ಆಕ್ರೋಶ ವ್ಯಕ್ತಪಡಿಸಿದರು.
2008 -09 ರಿಂದ ಕಾಲೇಜ್ ಹಾಸ್ಟೇಲ್ ನಡೆಸುತ್ತಿದ್ದು, ಆಗಿನಿಂದಲೂ ಇದು ಸುರಕ್ಷಿತ ಜಾಗವಲ್ಲ ಎಂದು ಸಂಬಂಧಿಸಿದವರ ಗಮನಕ್ಕೆ ತಂದರೂ ಸಹ ಬೇರೆ ಕಟ್ಟಡ ಸಿಗುತ್ತಿಲ್ಲ ಎಂಬ ನೆಪವೊಡ್ಡಿ ಮುಂದಕ್ಕೆ ಹಾಕುತ್ತಿದ್ದರು. ಕಾಲೇಜು ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಾದ ಕಾರಣ 2011ರಲ್ಲಿ ಈ ಹಾಸ್ಟೆಲ್ನ್ನು ನಮ್ಮ ಹೋರಾಟದಿಂದ ಬೇರೆಡೆ ಶಿಫ್ಟ್ ಮಾಡಿದರು.
ಇದೀಗ ಈ ದುರ್ಘಟನೆ ನಡೆದಿದೆ. ಐವರು ವಿದ್ಯಾರ್ಥಿಗಳ ಈ ಸಾವಿನ ಹೊಣೆಯನ್ನು ಸಂಬಂಧಿಸಿದ ಇಲಾಖೆಯ ಅಧಿಕಾರಿಗಳು, ಹಾಸ್ಟೆಲ್ ವಾರ್ಡನ್, ಸಿಬ್ಬಂದಿ ಹೊರಬೇಕು. ಅವರ ಮೇಲೆ ಕ್ರಮ ಕೈಗೊಳ್ಳಬೇಕು. ಮೃತ ವಿದ್ಯಾರ್ಥಿಗಳ ಕುಟುಂಬಕ್ಕೆ ತಲಾ 5 ಲಕ್ಷದ ಬದಲಾಗಿ 10 ಲಕ್ಷ ರೂಪಾಯಿ ಪರಿಹಾರ ನೀಡಬೇಕು. ಕುಟುಂಬಕ್ಕೆ ಸರ್ಕಾರಿ ಕೆಲಸ ನೀಡಬೇಕೆಂದು ಆಗ್ರಹಿಸಿದರು.
ಎಸ್ಎಫ್ಐ ಜಿಲ್ಲಾ ಕಾರ್ಯದರ್ಶಿ ಸುಬಾನ್ ಸೈಯದ್, ಕೃಷಿ ಕೂಲಿಕಾರರ ಸಂಘದ ಜಿಲ್ಲಾ ಮುಖಂಡ ಸುಂಕಪ್ಪ ಗದಗ, ಸಿಐಟಿಯು ಜಿಲ್ಲಾ ಕಾರ್ಯದರ್ಶಿ ಕಾಸಿಂಸಾಬ ಸರ್ದಾರ,
ಹುಸೇನಸಾಬ ನದಾಫ್, ಬೈಜಾನ್, ಅಮರಮ್ಮ ಗದಗ, ಗೀತಾ ಸೇರಿದಂತೆ ಮೊದಲಾದವರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.