ಗಂಗಾವತಿ: ಭತ್ತದ ನಗರಿ ಗಂಗಾವತಿಗೆ ರೈಲ್ವೆ ಸೇವೆ ಆರಂಭವಾಗಿ ಒಂದು ವರ್ಷವಾದ ಬಳಿಕ, ಇದೇ ಮೊದಲ ಬಾರಿಗೆ ಭಾನುವಾರ ಗೂಡ್ಸ್ (ಸರಕು ಸಾಗಾಣಿಕೆ) ಸೇವೆ ಆರಂಭವಾಯಿತು. ಮೊದಲ ದಿನವೇ ನಗರದಿಂದ ಒರಿಸ್ಸಾಕ್ಕೆ 1300 ಟನ್ ಅಕ್ಕಿ ಕಳುಹಿಸಲಾಯಿತು.
ನಗರದ ಎನ್ಆರ್ ಇಂಡಸ್ಟ್ರೀಜ್ ಮತ್ತು ಎಂ.ವಿ. ಕೃಷ್ಣಮೂರ್ತಿ ಎಂಬ ಉದ್ಯಮ ಘಟಕಗಳಿಂದ ಮೊದಲ ದಿನವೇ ಒಂದೂ ಕಾಲು ಸಾವಿರ ಟನ್ ಅಕ್ಕಿಯನ್ನು ಈಶಾನ್ಯ ಭಾರತಕ್ಕೆ ಕಳಿಸಲಾಯಿತು. ಶಾಸಕ ಪರಣ್ಣ ಮುನವಳ್ಳಿ ಗೂಡ್ಸ್ ಬೋಗಿಗಳಿಗೆ ಪೂಜೆ ಸಲ್ಲಿಸುವ ಮೂಲಕ ಚಾಲನೆ ನೀಡಿದರು.
ಓದಿ: ರಸ್ತೆ ನಿರ್ಮಾಣಕ್ಕೆ 300 ರೂಪಾಯಿ ದೇಣಿಗೆ ನೀಡಿದ ಅಜ್ಜಿ: ಕಾಲು ಮುಟ್ಟಿ ನಮಸ್ಕರಿಸಿದ ಶಾಸಕ ಹಾಲಪ್ಪ!
ಗಂಗಾವತಿಯಿಂದ ಸರಕು ಹೊತ್ತು ಸಾಗಲಿರುವ ಬೋಗಿಗಳು ಹುಬ್ಬಳ್ಳಿಯಲ್ಲಿ ವಿಭಜನೆಯಾಗಿ ಉದ್ದೇಶಿತ ಸ್ಥಳಕ್ಕೆ ಮತ್ತೊಂದು ವಾಹನದ ಮೂಲಕ ಸಾಗುತ್ತವೆ. ಇಲ್ಲಿನ ಬೇಡಿಕೆ ಪರಿಶೀಲಿಸಿ ಮುಂದಿನ ದಿನಗಳಲ್ಲಿ ಹೆಚ್ಚುವರಿ ಬೋಗಿಗಳ ವ್ಯವಸ್ಥೆ ಮಾಡಲಾಗುವುದು ಎಂದು ರೈಲ್ವೆ ಇಲಾಖೆ ಅಧಿಕಾರಿಗಳು ತಿಳಿಸಿದರು.