ಕೊಪ್ಪಳ: ಶಾರ್ಟ್ ಸರ್ಕ್ಯೂಟ್ನಿಂದ ಅಂಗಡಿಗಳಿಗೆ ಬೆಂಕಿ ಹತ್ತಿಕೊಂಡ ಘಟನೆಯಲ್ಲಿ ಯುವಕನೊಬ್ಬ ಸುಟ್ಟು ಕರಕಲಾಗಿರುವ ವಿಷಯ ತಡವಾಗಿ ಬೆಳಕಿಗೆ ಬಂದಿದೆ.
ಘಟನೆಯಲ್ಲಿ ಹಣ್ಣಿನ ಅಂಗಡಿ, ವಾಚ್ ರಿಪೇರಿ ಅಂಗಡಿ ಹಾಗೂ ಚಪ್ಪಲಿ ಅಂಗಡಿ ಹೊತ್ತಿ ಉರಿದಿದ್ದವು. ಘಟನೆಯಲ್ಲಿ ಹಣ್ಣಿನ ಅಂಗಡಿ ಮಾಲೀಕನ ಅಣ್ಣನ ಮಗ ವೀರೇಶ (18) ಮೃತಪಟ್ಟಿದ್ದಾನೆ. ನಿನ್ನೆ ಯುವಕ ಹಣ್ಣಿನ ಅಂಗಡಿಯಲ್ಲಿ ಮಲಗಲು ತೆರಳಿದ್ದ ಸಂಗತಿ ಮನೆಯವರಿಗೆ ತಿಳಿದಿರಲಿಲ್ಲ. ಯುವಕ ಕಾಣೆಯಾಗಿದ್ದಾನೆ ಎಂದು ದೂರು ದಾಖಲಿಸಲು ಪೊಲೀಸ್ ಠಾಣೆಗೆ ಹೋಗಿದ್ದಾರೆ.
ಈಗ ಸುಟ್ಟು ಕರಕಲಾಗಿದ್ದ ಅಂಗಡಿಯಲ್ಲಿ ಹುಡುಕಾಟ ನಡೆಸಿದಾಗ ಯುವಕ ಶವವಾಗಿ ಪತ್ತೆಯಾಗಿದ್ದಾನೆ. ಮೃತ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದ್ದು, ಘಟನಾ ಸ್ಥಳಕ್ಕೆ ಶಾಸಕ ಕೆ.ರಾಘವೇಂದ್ರ ಹಿಟ್ನಾಳ್ ಭೇಟಿ ನೀಡಿ ಸಾಂತ್ವನ ಹೇಳಿದರು.