ಗಂಗಾವತಿ/ಕೊಪ್ಪಳ: ಕೇಂದ್ರ ಸರ್ಕಾರದ ಪೌರತ್ವ ಕಾಯ್ದೆ ಸಮರ್ಥಿಸುವ ನಿಟ್ಟಿನಲ್ಲಿ ಪ್ರಚೋದನಕಾರಿಯಾಗಿ ಭಾಷಣ ಮಾಡಿದ ಬಳ್ಳಾರಿ ಶಾಸಕ ಸೋಮಶೇಖರ ರೆಡ್ಡಿ ಮೇಲೆ ಗಂಗಾವತಿ ನಗರಠಾಣೆಯಲ್ಲಿ ದೂರು ದಾಖಲಾಗಿದೆ.

ಸಿಪಿಐಎಂ ಪಕ್ಷದ ಹಿರಿಯ ಮುಖಂಡ ಹಾಗೂ ಕಾರ್ಮಿಕ ಸಂಘಟನೆಗಳ ನಾಯಕ ಜೆ. ಭಾರದ್ವಾಜ್, ಶಾಸಕ ಸೋಮಶೇಖರ ರೆಡ್ಡಿ ವಿರುದ್ದ ದೂರು ದಾಖಲಿಸಿದ್ದಾರೆ. ಎನ್ಆರ್ಸಿ ಸಮರ್ಥಿಸುವ ನಿಟ್ಟಿನಲ್ಲಿ ಮುಸ್ಲಿಂ ಜನಾಂಗವನ್ನು ಉದ್ದೇಶವಾಗಿಟ್ಟುಕೊಂಡು ಜನಾಂಗೀಯ ದ್ವೇಷದ ಭಾಷಣಮಾಡಿ, ಕೋಮುಗಲಭೆ ಸೃಷ್ಟಿಸುವ ಉದ್ದೇಶ ಬಿಜೆಪಿ ಶಾಸಕರದ್ದು ಎಂದು ದೂರಿದ್ದಾರೆ.
ಜೀವ ಬೆದರಿಕೆ ಹಾಕುವ ಭಯದ ವಾತಾವರಣ ನಿರ್ಮಾಣದ ಭಾಷಣ ಮಾಡಿದ್ದಾರೆ ಎಂದು ಭಾರದ್ವಾಜ್ ತಮ್ಮ ದೂರಿನಲ್ಲಿ ಉಲ್ಲೇಖಿಸಿದ್ದಾರೆ.