ETV Bharat / state

ಪ್ರಧಾನಮಂತ್ರಿ ಫಸಲ್ ಭೀಮಾ ಯೋಜನೆ ಹಣ ಸಿಗದೇ ಕಂಗಲಾದ ರೈತರು

ಕೊಪ್ಪಳ ತಾಲೂಕಿನ ಬೆಟಗೇರಿ ಹಾಗೂ ಮೋರನಾಳ ಗ್ರಾಮದ ನೂರಾರು ರೈತರು ಪ್ರಧಾನಮಂತ್ರಿ ಫಸಲ್ ಭೀಮಾ‌ ಯೋಜನೆಯಲ್ಲಿ ಬೆಳೆ ವಿಮೆ ಮಾಡಿಸಿ ಪ್ರಿಮಿಯಂ ಹಣ ಪಾವತಿಸಿದ್ದರು. ಆದರೆ, ಬೇರೆ ಗ್ರಾಮದವರಿಗೆ ಬೆಳೆವಿಮೆ ಹಣ ಬಂದಿದ್ದರೆ, ಈ ರೈತರು ತಮಗೆ ಹಣ ಸಿಕ್ಕಿಲ್ಲವೆಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

author img

By

Published : Sep 5, 2019, 9:28 PM IST

ಪ್ರಧಾನಮಂತ್ರಿ ಫಸಲ್ ಭೀಮಾ ಯೋಜನೆ ಹಣ ಸಿಗದೇ ಕಂಗಲಾದ ರೈತರು..!

ಕೊಪ್ಪಳ: ಕೊಪ್ಪಳ ತಾಲೂಕಿನ ಬೆಟಗೇರಿ ಹಾಗೂ ಮೋರನಾಳ ಗ್ರಾಮದ ನೂರಾರು ರೈತರು ಪ್ರಧಾನಮಂತ್ರಿ ಫಸಲ್ ಭೀಮಾ‌ ಯೋಜನೆಯಲ್ಲಿ ಬೆಳೆ ವಿಮೆ ಮಾಡಿಸಿ ಪ್ರಿಮಿಯಂ ಹಣ ಪಾವತಿಸಿದ್ದರು. ಆದರೆ, ಬೇರೆ ಗ್ರಾಮದ ರೈತರಿಗೆ ಬೆಳೆವಿಮೆ ಹಣ ಬಂದರೂ ಈ ಗ್ರಾಮದ ರೈತರಿಗೆ ಹಣ ಬಾರದೇ ಕಂಗಲಾಗಿದ್ದಾರೆ.

ಪ್ರಧಾನಮಂತ್ರಿ ಫಸಲ್ ಭೀಮಾ ಯೋಜನೆ ಹಣ ಸಿಗದೇ ಕಂಗಲಾದ ರೈತರು..!

2018-19 ನೇ ಸಾಲಿನಲ್ಲಿ ಬೆಟಗೇರಿ ಗ್ರಾಮ ಪಂಚಾಯತ್​ ವ್ಯಾಪ್ತಿಯ ಬೆಟಗೇರಿ ಹಾಗೂ ಮೋರನಾಳ ಗ್ರಾಮದ ನೂರಾರು ರೈತರು ಪ್ರಧಾನಮಂತ್ರಿ ಫಸಲ್ ಭೀಮಾ ಯೋಜನೆಯಲ್ಲಿ ತಮ್ಮ ಬೆಳೆಗಳಿಗೆ ವಿಮೆ ಮಾಡಿಸಿದ್ದರು. ತಮ್ಮ ಜಮೀನಿನ ಬೆಳೆಗೆ ಅನುಗುಣವಾಗಿ ರೈತರು ವಿಮೆಯ ಪ್ರಿಮಿಯಂ ಹಣವನ್ನು ಪಾವತಿಸಿದ್ದರು. ಮಳೆ ಇಲ್ಲದೆ ಬೆಳೆಹಾನಿಯಾದಾಗ ಬೆಳೆವಿಮೆ ಬರುತ್ತೆ ಎಂದು ಕೊಂಚ ನಿರಾಳರಾಗಿದ್ದರು. ಆದರೆ, ಆ ಹಣ ಬಂದಿಲ್ಲ.‌ ಪಕ್ಕದ ಗ್ರಾಮಗಳ ರೈತರಿಗೆ ಬೆಳೆ ವಿಮೆ ಹಣ ಬಂದಿದೆ. ಅವರೊಂದಿಗೆ ನಾವು ಬೆಳೆ ವಿಮೆ ಮಾಡಿಸಿ ಪ್ರಿಮಿಯಂ ಹಣವನ್ನು ಪಾವತಿಸಿದ್ದೆವು. ಆದರೆ, ಬೆಟಗೇರಿ ಹಾಗೂ ಮೋರನಾಳ ಗ್ರಾಮದ ರೈತರಿಗೆ ಮಾತ್ರ ಬೆಳೆ ವಿಮೆ ಬಂದಿಲ್ಲವೆಂದು ರೈತರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

Intro:

Body:ಕೊಪ್ಪಳ:-ಎಲ್ಲರಂತೆ ಆ ಗ್ರಾಮದ ರೈತರು ಸಹ ಪ್ರಧಾನಮಂತ್ರಿ ಫಸಲ್ ಭಿಮಾ‌ ಯೋಜನೆಯಲ್ಲಿ ಬೆಳೆವಿಮೆ ಮಾಡಿಸಿ ಪ್ರಿಮಿಯಂ ಹಣ ಪಾವತಿಸಿದ್ದರು. ಆದರೆ, ಬೇರೆ ಗ್ರಾಮದ ರೈತರಿಗೆ ಬೆಳೆವಿಮೆ ಹಣ ಬಂದರೂ ಈ ಗ್ರಾಮದ ರೈತರಿಗೆ ಹಣ ಬಂದಿಲ್ಲ. ಇದರಿಂದಾಗಿ ಆ ರೈತರು ಸಂಕಷ್ಟಕ್ಕೆ ಸಿಲುಕುವಂತೆ ಮಾಡಿದೆ.

ಹೌದು...., ಕೊಪ್ಪಳ ತಾಲೂಕಿನ ಬೆಟಗೇರಿ ಹಾಗೂ ಮೋರನಾಳ ಗ್ರಾಮದ ನೂರಾರು ರೈತರು ಈಗ ಬೆಳೆ ವಿಮೆ ಹಣ ಬಾರದೆ ಕಂಗಾಲಾಗಿದ್ದಾರೆ. 2018-19 ನೇ ಸಾಲಿನಲ್ಲಿ ಬೆಟಗೇರಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಬೆಟಗೇರಿ ಹಾಗೂ ಮೋರನಾಳ ಗ್ರಾಮದ ನೂರಾರು ರೈತರು ಪ್ತಧಾನಮಂತ್ರಿ ಫಸಲ್ ಭಿಮಾ‌ ಯೋಜನೆಯಲ್ಲಿ ತಮ್ಮ ಬೆಳೆಗಳಿಗೆ ವಿಮೆ ಮಾಡಿಸಿದ್ದರು. ತಮ್ಮ ತಮ್ಮ ಜಮೀನಿನ ಬೆಳೆಗೆ ಅನುಗುಣವಾಗಿ ರೈತರು ವಿಮೆಯ ಪ್ರಿಮಿಯಂ ಹಣವನ್ನು ಪಾವತಿಸಿದ್ದರು. ಮಳೆ ಇಲ್ಲದೆ ಬೆಳೆಹಾನಿಯಾಗಿ ರೈತರು ಕಂಗಾಲಾಗಿದ್ದರು. ಪ್ರಧಾನಮಂತ್ರಿ ಫಸಲ್ ಭಿಮಾ ಯೋಜನೆಯ ಬೆಳೆವಿಮೆ ಬರುತ್ತದೆಯಲ್ಲ ಎಂದು ಕೊಂಚ ನಿರಾಳರಾಗಿದ್ದರು. ಆದರೆ, ಬೆಳೆವಿಮೆ ಹಣ ಬಂದಿಲ್ಲ.‌ ತಮ್ಮೂರ ಪಕ್ಕದ ಗ್ರಾಮಗಳ ರೈತರಿಗೆ ಬೆಳೆ ವಿಮೆ ಹಣ ಬಂದಿದೆ. ಅವರೊಂದಿಗೆ ನಾವು ಬೆಳೆ ವಿಮೆ ಮಾಡಿಸಿ ಪ್ರಿಮಿಯಂ ಹಣ ಪಾವತಿಸಿದ್ದೇವೆ. ಆದರೆ, ಬೆಟಗೇರಿ ಹಾಗೂ ಮೋರನಾಳ ಗ್ರಾಮದ ರೈತರಿಗೆ ಮಾತ್ರ ಬೆಳೆ ವಿಮೆ ಬಂದಿಲ್ಲ ಎಂದು ರೈತರು ಹೇಳುತ್ತಿದ್ದಾರೆ.

ಬೈಟ್1:- ನಾರಾಯಣಗೌಡ ಪೊಲೀಸ್ ಪಾಟೀಲ್, ಬೆಟಗೇರಿ ಗ್ರಾಮದ ರೈತ. (ವಯಸ್ಸಾಗಿರುವ ಹಿರಿಯ ವ್ಯಕ್ತಿ)

ಇನ್ನು ಬೆಳೆಗಳು ಹಾನಿಗೊಳಗಾದ ಸಂದರ್ಭದಲ್ಲಿ ಸರ್ವೆ ಸಹ ಮಾಡಿದ್ದಾರೆ. ಈ ಸಂದರ್ಭದಲ್ಲಿ ಸ್ಥಳೀಯ ಗ್ರಾಮ ಪಂಚಾಯ್ತಿಯ ಸಿಬ್ಬಂದಿ ಯಡವಟ್ಟು ಮಾಡಿದ್ದಾರೆ ಎಂದು ಸ್ಥಳೀಯರು ಆರೋಪಿಸುತ್ತಾರೆ. 500 ರುಪಾಯಿಯಿಂದ 10 ಸಾವಿರ ರುಪಾಯಿಯವರೆಗೂ ರೈತರು ಪ್ರಿಮಿಯಂ ಹಣ ಪಾವತಿಸಿದ್ದಾರೆ. ಆದರೆ, ಬೆಳೆ ವಿಮೆ‌ಮಾತ್ರ ಬಂದಿಲ್ಲ. ಈ ಬಗ್ಗೆ ಸಂಬಂಧಿಸಿದ ಅಧಿಕಾರಿಗಳಿಗೆ ಭೇಟಿ ಮಾಡಿದ್ದೇವೆ. ಆದಷ್ಟು ಬೇಗ ರೈತರಿಗೆ ವಿಮೆಹಣ ಪಾವತಿಸಬೇಕು ಎಂದು ಬೆಟಗೇರಿ ಗ್ರಾಮದ ರೈತರು ಆಗ್ರಹಿಸಿದ್ದಾರೆ.

ಬೈಟ್2:- ವೀರೇಶ್ ಸಜ್ಜನ್, ತಾಲೂಕ ಪಂಚಾಯ್ತಿ ಮಾಜಿ ಸದಸ್ಯ. (ಯುವಕ)

ಒಟ್ನಲ್ಲಿ ಬೆಳೆವಿಮೆಗಾಗಿ ಪ್ರಿಮಿಯಂ ಪಾವತಿಸಿ ಬೆಳೆ ಹಾನಿಗೊಳಗಾದ ಮೇಲೆ ವಿಮೆಹಣವಾದರೂ ಬರುತ್ತದೆ ಎಂದು ಕಾಯುತ್ತಿದ್ದ ರೈತರಿಗೆ ಆಸೆ ಇನ್ನೂ ಆಸೆಯಾಗಿಯೇ ಉಳಿದಿದೆ. ಆಗಿರುವ ಸಮಸ್ಯೆಯನ್ನು ಪತ್ತೆಮಾಡಿ ಅರ್ಹ ರೈತರಿಗೆ ನ್ಯಾಯ ಒದಗಿಸುವ ಕೆಲಸವನ್ನು ಸಂಬಂಧಿಸಿದ ಇಲಾಖೆ ಅಧಿಕಾರಿಗಳು ಮುಂದಾಗಬೇಕಿದೆ.

Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.