ETV Bharat / state

ಮಾರುಕಟ್ಟೆ ಮಾಹಿತಿ ತಿಳಿದುಕೊಂಡು ರೈತರು ಬೆಳೆ ಬೆಳೆಯಬೇಕು: ಸಚಿವ ಆರ್. ಶಂಕರ್ - ಒಂದು ಜಿಲ್ಲೆ ಒಂದು ಬೆಳೆ ಯೋಜನೆ

ಒಂದು ಜಿಲ್ಲೆ ಒಂದು ಬೆಳೆ ಯೋಜನೆಯಡಿ ಕೊಪ್ಪಳ ಜಿಲ್ಲೆಗೆ ಪೇರಲ ಆಯ್ಕೆಯಾಗಿದೆ. ಜಿಲ್ಲೆಯಲ್ಲಿ ಪೇರಲ ಬೆಳೆಯುವ ಕ್ಷೇತ್ರವನ್ನಾಧರಿಸಿ ಬೆಳೆಯನ್ನು ನಿರ್ಧರಿಸಲಾಗಿದೆ. ರೈತರಿಗೆ ಆಯೋಜಿಸಿರುವ ಈ ಕಾರ್ಯಾಗಾರವನ್ನು ರೈತರು ಸದುಪಯೋಗ ಪಡಿಸಿಕೊಳ್ಳಬೇಕು.

Minister R. Shankar said
ಸಚಿವ ಆರ್. ಶಂಕರ್
author img

By

Published : Mar 2, 2021, 7:49 AM IST

ಕೊಪ್ಪಳ: ರೈತರೆಲ್ಲರೂ ಒಂದೇ ರೀತಿಯ ಬೆಳೆ ಬೆಳೆಯದೇ, ಮಾರುಕಟ್ಟೆ ಮಾಹಿತಿ ತಿಳಿದುಕೊಂಡು ಬೆಳೆಗಳನ್ನು ಬೆಳೆಯಬೇಕು ಎಂದು ತೋಟಗಾರಿಕೆ ಇಲಾಖೆ ಸಚಿವ ಆರ್. ಶಂಕರ್ ರೈತರಿಗೆ ಕರೆ‌ ನೀಡಿದರು.

ಸಚಿವ ಆರ್. ಶಂಕರ್

ಓದಿ: ಕೇರಳದಲ್ಲಿ ರಾಜಕೀಯ ಬದಲಾವಣೆಗೆ ಇದು ಸಕಾಲ: ಡಿಸಿಎಂ ಅಶ್ವತ್ಥ​ ನಾರಾಯಣ

ನಗರದ ಜಿಲ್ಲಾಡಳಿತ ಭವನದ ಆಡಿಟೋರಿಯಂ ಹಾಲ್​​​​ನಲ್ಲಿ ನಡೆದ ಒಂದು ಜಿಲ್ಲೆ, ಒಂದು ಬೆಳೆ ಯೋಜನೆಯಡಿ ಆಯ್ಕೆಯಾದ ಪೇರಲ ಹಣ್ಣಿನ ಕುರಿತ ತಾಂತ್ರಿಕ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು. ನಮ್ಮ ರೈತರು ಯಾರಾದರೊಬ್ಬರು ಒಂದು ಬೆಳೆಯನ್ನು ಬೆಳೆಯಲು ಆರಂಭಿಸಿದರೆ ಅದೇ ಬೆಳೆಯನ್ನು ಎಲ್ಲ ರೈತರು ಬೆಳೆಯಲಾರಂಭಿಸುತ್ತಾರೆ. ಇದು ಸರಿಯಾದ ಕ್ರಮವಲ್ಲ. ಯಾವುದೇ ಬೆಳೆ ಬೆಳೆಯುವ ಮುನ್ನ ರೈತರು ಮಾರುಕಟ್ಟೆಯ ಮುಂದಿನ ಆಗು - ಹೋಗುಗಳನ್ನು ಗಮನದಲ್ಲಿಟ್ಟುಕೊಂಡು ಬೆಳೆಗಳನ್ನು ಬೆಳೆಯಬೇಕು ಎಂದು ಕಿವಿಮಾತು ಹೇಳಿದರು.

ಒಂದು ಜಿಲ್ಲೆ ಒಂದು ಬೆಳೆ ಯೋಜನೆಯಡಿ ಕೊಪ್ಪಳ ಜಿಲ್ಲೆಗೆ ಪೇರಲ ಆಯ್ಕೆಯಾಗಿದೆ. ಜಿಲ್ಲೆಯಲ್ಲಿ ಪೇರಲ ಬೆಳೆಯುವ ಕ್ಷೇತ್ರವನ್ನಾಧರಿಸಿ ಬೆಳೆಯನ್ನು ನಿರ್ಧರಿಸಲಾಗಿದೆ. ರೈತರಿಗೆ ಆಯೋಜಿಸಿರುವ ಈ ಕಾರ್ಯಾಗಾರವನ್ನು ರೈತರು ಸದುಪಯೋಗ ಪಡಿಸಿಕೊಳ್ಳಬೇಕು. ಒಂದು ಜಿಲ್ಲೆ ಒಂದು ಬೆಳೆ ಯೋಜನೆಯಡಿ ಆಯ್ಕೆಯಾದ ಬೆಳೆಯಲ್ಲದೇ ಕ್ರಮಬದ್ದವಾಗಿ ಬೆಳೆಯುವ ಇತರ ತೋಟಗಾರಿಕೆ ಹಾಗೂ ಕೃಷಿ ಬೆಳೆಗಳಿಗೆ ಸಹ ಸಂಸ್ಕರಣೆ, ಮೌಲ್ಯವರ್ಧಿತ ಉತ್ಪನ್ನ ಮುಂತಾದ ಸೌಲಭ್ಯ ಪಡೆಯಬಹುದು.

ಬೆಳೆಯನ್ನು ಬೆಳೆಯುವುದರೊಂದಿಗೆ ಅದರ ಮೌಲ್ಯವರ್ಧನೆಗೂ ಯೋಜನೆ ರೂಪಿಸಿ ನೇತ ಮಾರುಕಟ್ಟೆಯ ಲಾಭ ಪಡೆಯಬೇಕು ಎಂದು ಹೇಳಿದರು. ರೈತರು ಬೆಳೆಯುವ ಯಾವುದೇ ಬೆಳೆಗಳಿಗೆ ಸಂಬಂಧಿಸಿದ ಮಾಹಿತಿ ಒದಗಿಸಲು ರಾಜ್ಯದಲ್ಲಿ 715 ಕೃಷಿ ಕೇಂದ್ರಗಳನ್ನು ತೆರೆಯಲಾಗಿದೆ. ಈ ಕೇಂದ್ರಗಳಲ್ಲಿ ರೈತರು ತಮಗೆ ಬೇಕಾದ ಬೆಳೆ, ಸಹಾಯಧನ, ಬ್ಯಾಂಕ್ ಸಹಾಯ, ಸರ್ಕಾರದ ಸೌಲಭ್ಯಗಳ ಬಗ್ಗೆ ಮಾಹಿತಿ ಪಡೆಯಬಹುದು ಎಂದು ಸಚಿವ ಆರ್. ಶಂಕರ್ ಹೇಳಿದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.