ಕೊಪ್ಪಳ: ಬಾಳೆ ದರ ಕುಸಿತವಾದ ಹಿನ್ನೆಲೆಯಲ್ಲಿ ಮನನೊಂದ ರೈತನೋರ್ವ ತಾನೇ ಬೆಳೆದ ಗೊನೆಯುಕ್ತ ಬಾಳೆ ಬೆಳೆಯನ್ನು ಜೆಸಿಬಿ ಮೂಲಕ ನಾಶ ಮಾಡಿರುವ ಘಟನೆ ಕೊಪ್ಪಳ ತಾಲೂಕಿನ ಡೊಂಬರಳ್ಳಿ ಗ್ರಾಮದಲ್ಲಿ ನಡೆದಿದೆ.
ಗ್ರಾಮದ ಸಿದ್ದರಡ್ಡಿ ದುರ್ಗದ ಎಂಬ ರೈತ ತನ್ನ ಜಮೀನಿನಲ್ಲಿನ ಲಕ್ಷಾಂತರ ರೂ. ಖರ್ಚು ಮಾಡಿ ಬಾಳೆ ಬೆಳೆದಿದ್ದರು. ಆದರೆ ಮಾರುಕಟ್ಟೆಯಲ್ಲಿ ಬೆಲೆ ಕುಸಿತವಾಗಿದೆ. ಗಿಡದಲ್ಲಿಯೇ ಹಣ್ಣಾಗಿದ್ದರೂ, ಮಾರುಕಟ್ಟೆಯಲ್ಲಿ ಸಗಟು ಖರೀದಿದಾರರು ಪ್ರತಿ ಕೆ.ಜಿಗೆ ಕೇವಲ 2 ರೂ.ಗೆ ಕೇಳುತ್ತಿದ್ದಾರೆ. ಇದರಿಂದಾಗಿ ಕಟಾವು ಮಾಡಿದ ವೆಚ್ಚವೂ ಸಹ ಬಾರದ ಕಾರಣ ಆಳೆತ್ತರದ ಗೊನೆಯುಕ್ತ ಬಾಳೆ ಬೆಳೆ ನಾಶ ಮಾಡಿದರು.
ಕೊಪ್ಪಳ ಜಿಲ್ಲೆಯಲ್ಲಿ ಸುಮಾರು 2,000 ಹೆಕ್ಟೇರ್ ಪ್ರದೇಶದಲ್ಲಿ ಬಾಳೆ ಬೆಳೆಯಲಾಗಿದೆ. ದರ ಕುಸಿತದಿಂದಾಗಿ ರೈತರು ಕಂಗಾಲಾಗಿದ್ದಾರೆ. ಕೂಡಲೇ ಸರ್ಕಾರ ನೆರವಿಗೆ ಧಾವಿಸಬೇಕೆಂದು ರೈತರು ಆಗ್ರಹಿಸಿದ್ದಾರೆ.
ಇದನ್ನೂ ಓದಿ: ಕಾಡಿಗೆ ಬಿಟ್ಟಿದ್ದ ಕುಶ ಮತ್ತೆ ತವರಿಗೆ: ಬಂಡೀಪುರದಲ್ಲಿ ಇರಲಾಗದೆ ದುಬಾರೆಗೆ ಗಜ ಪಯಣ