ಕೊಪ್ಪಳ: ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಈ ಬಾರಿ ಪ್ರತ್ಯೇಕ ಕೃಷಿ ಬಜೆಟ್ ಮಂಡಿಸಬೇಕು ಎಂದು ತಾಲೂಕಿನ ಬೆಟಗೇರಿ ಗ್ರಾಮದ ರೈತನೊಬ್ಬ ಸಿಎಂ ಹಾಗೂ ಕೃಷಿ ಸಚಿವ ಬಿ.ಸಿ. ಪಾಟೀಲ್ ಅವರಿಗೆ ಟ್ವಿಟರ್ ಮೂಲಕ ಮನವಿ ಮಾಡಿಕೊಂಡಿದ್ದಾನೆ.
-
ಮುಖ್ಯಮಂತ್ರಿಗಳಲ್ಲಿ ನನ್ನ ಮನವಿ.@BSYBJP @kourvabcpatil pic.twitter.com/AK3r2mfksK
— Ealukotesh (@Ealukotesh3) March 3, 2020 " class="align-text-top noRightClick twitterSection" data="
">ಮುಖ್ಯಮಂತ್ರಿಗಳಲ್ಲಿ ನನ್ನ ಮನವಿ.@BSYBJP @kourvabcpatil pic.twitter.com/AK3r2mfksK
— Ealukotesh (@Ealukotesh3) March 3, 2020ಮುಖ್ಯಮಂತ್ರಿಗಳಲ್ಲಿ ನನ್ನ ಮನವಿ.@BSYBJP @kourvabcpatil pic.twitter.com/AK3r2mfksK
— Ealukotesh (@Ealukotesh3) March 3, 2020
ತಾಲೂಕಿನ ಬೆಟಗೇರಿ ಗ್ರಾಮದ ಏಳುಕೋಟೇಶ ಕೋಮಲಾಪುರ ಎಂಬ ರೈತ ತನ್ನ ಬೇಡಿಕೆಗಳನ್ನು ವಿಡಿಯೋ ಮಾಡಿ ಟ್ವಿಟರ್ ನಲ್ಲಿ ಹಂಚಿಕೊಂಡಿದ್ದಾನೆ. ಕೃಷಿಕರಿಗೆ ಉತ್ತೇಜನ ನೀಡುವ ಸಲುವಾಗಿ ಪ್ರತ್ಯೇಕ ಕೃಷಿ ಬಜೆಟ್, ಸಾವಯವ ಕೃಷಿಗೆ ಉತ್ತೇಜನ, ಕಡಿಮೆ ದರದಲ್ಲಿ ಪೋಷಕಾಂಶಗಳು, ಸಾವಯವ ಗೊಬ್ಬರ ಪೂರೈಕೆ ಹಾಗೂ ಹೈನುಗಾರಿಕೆ ಸೇರಿದಂತೆ ಕೃಷಿಯ ಉಪ ಕಸುಬುಗಳಿಗೆ ಬಜೆಟ್ ನಲ್ಲಿ ಉತ್ತೇಜನ ನೀಡುವಂತೆ ಮನವಿ ಮಾಡಿದ್ದಾನೆ.
ಇನ್ನು ರೈತ ಏಳುಕೋಟೇಶ್ ಮಾಡಿರುವ ಟ್ವೀಟ್ ಅನ್ನು ಕೃಷಿ ಸಚಿವ ಬಿ.ಸಿ. ಪಾಟೀಲ್ ಇಂದು ರೀಟ್ವೀಟ್ ಮಾಡಿದ್ದಾರೆ. ಸಾವಯವ ಕೃಷಿ ಪದ್ಧತಿ ಅಳವಡಿಕೆಗೆ ಎಲ್ಲ ತಯಾರಿ ನಡೆಸಿದ್ದು ಉತ್ತೇಜನ ನೀಡಲು ಸರ್ಕಾರ ಮುಂದಾಗಿದೆ. ಬೆಂಬಲ ಬೆಲೆಯ ಬಗ್ಗೆಯೂ ಚರ್ಚೆ ನಡೆದಿದೆ. ರೈತರ ಏಳಿಗೆಗೆ ಸದಾ ಸಿದ್ಧ. ತಮ್ಮ ಅಮೂಲ್ಯ ಸಲಹೆಗೆ ಧನ್ಯವಾದಗಳು ಎಂದು ರೀಟ್ವೀಟ್ ಮಾಡಿದ್ದಾರೆ.