ETV Bharat / state

ಸಿದ್ದರಾಮಯ್ಯ, ಹೆಚ್​ಡಿಕೆಗೆ ಕಾಮನ್​ ಸೆನ್ಸ್​ ಇರಬೇಕಿತ್ತು: ಸಂಗಣ್ಣ ಕರಡಿ

ಮಾಜಿ ಸಿಎಂಗಳಾದ ಸಿದ್ದರಾಮಯ್ಯ, ಹೆಚ್​ಡಿಕೆ ಗಲಭೆಗೆ ಕುಮ್ಮಕ್ಕು ನೀಡುತ್ತಿದ್ದಾರೆ. ಹೇಳಿಕೆ ನೀಡುವ ಮುನ್ನ ಕಾಮನ್​ ಸೆನ್ಸ್​ ಇರಬೇಕು ಎಂದು ಸಂಸದ ಕರಡಿ ಸಂಗಣ್ಣ ಆರೋಪಿಸಿದರು.

mp karadi sanganna
ಸಂಸದ ಕರಡಿ ಸಂಗಣ್ಣ
author img

By

Published : Dec 24, 2019, 6:57 PM IST

ಕೊಪ್ಪಳ: ಮಾಜಿ ಸಿಎಂ ಸಿದ್ದರಾಮಯ್ಯ ಹಾಗೂ ಹೆಚ್.ಡಿ.ಕುಮಾರಸ್ವಾಮಿ ಅವರಿಗೆ ಕಾಮನ್​ ಸೆನ್ಸ್ ಇರಬೇಕಿತ್ತು. ಅವರಿಂದಲೇ ಗಲಭೆಗಳು ಹೆಚ್ಚಾಗುತ್ತಿದೆ ಎಂದು ಸಂಸದ ಸಂಗಣ್ಣ ಕರಡಿ ಆರೋಪಿಸಿದ್ದಾರೆ.

ಸಂಸದ ಕರಡಿ ಸಂಗಣ್ಣ

ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ಮಂಗಳೂರ ಗಲಭೆ ಪ್ರಕರಣವನ್ನು ಈ ಇಬ್ಬರು ನಾಯಕರು ಬಿಜೆಪಿ ಸರ್ಕಾರದ ಮೇಲೆ ಎತ್ತುಕಟ್ಟಲು ಪ್ರಯತ್ನಿಸುತ್ತಿದ್ದಾರೆ. ಮಂಗಳೂರು ಗಲಭೆಗೆ ಯಾರು ಕಾರಣವೆಂಬುದಕ್ಕೆ ಇಂದು ಪೊಲೀಸರು ವಿಡಿಯೋ ಬಿಡುಗಡೆ ಮಾಡಿದ್ದಾರೆ. ಇಬ್ಬರು ನಾಯಕರಿಗೆ ತಾವು ಏನು ಮಾತಾಡುತ್ತೇವೆ ಎಂಬುದು ಗೊತ್ತಿರಬೇಕು ಎಂದು ಕಿಡಿಕಾರಿದರು.

ಇಂತಹ ನಾಯಕರಿಂದಲೇ ದೇಶ ದುಸ್ಥಿತಿಗೆ ಬಂದಿದೆ. ಜನತೆ ಹಾಗೂ ಕಾಯ್ದೆ ಬಗ್ಗೆ ಈ ನಾಯಕರಿಗೆ ಕಾಳಜಿ ಇಲ್ಲ. ನಾವು ಮುಸ್ಲಿಂ ಸಮಾಜದ ವಿರೋಧಿಗಳಲ್ಲ ಎಂದು ಕೇಂದ್ರ ಸರ್ಕಾರದ ಮಸೂದೆಗಳನ್ನು ಸಮರ್ಥಿಸಿಕೊಂಡಿದ್ದಾರೆ.

Intro:Body:ಕೊಪ್ಪಳ:- ಮಾಜಿ ಸಿಎಂ ಗಳಾದ ಸಿದ್ದರಾಮಯ್ಯ ಹಾಗೂ ಎಚ್.ಎಡಿ. ಕುಮಾರಸ್ವಾಮಿ ಅವರಿಗೆ ಕಾಮನಸೆನ್ಸ್ ಇರಬೇಕಿತ್ತು ಎಂದು ಸಂಸದ ಸಂಗಣ್ಣ ಕರಡಿ ಹೇಳಿದ್ದಾರೆ. ಕೊಪ್ಪಳದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಮಂಗಳೂರ ಗಲಭೆ ಪ್ರಕರಣವನ್ನು ಈ ಇಬ್ಬರು ನಾಯಕರು ಬಿಜೆಪಿ ಸರ್ಕಾರದ ಮೇಲೆ ಹೊರಿಸುವ ಪ್ರಯತ್ನ ಮಾಡಿದ್ದರು. ಮಂಗಳೂರು ಗಲಭೆಗೆ ಯಾರು ಕಾರಣವೆಂಬುದಕ್ಕೆ ಇಂದು ಪೊಲೀಸರು ವಿಡಿಯೋ ಬಿಡುಗಡೆ ಮಾಡಿದ್ದಾರೆ.
ಈ ಇಬ್ಬರು ನಾಯಕರಿಗೆ ತಾವು ಏನು ಮಾತಾಡುತ್ತೇವೆ ಎಂಬ ಕಾಮನ್ ಸೆನ್ಸ್ ಇರಬೇಕಿತ್ತು ಎಂದು ಕಿಡಿಕಾರಿದರು. ಸಿಎಂ ಆಗಿ ಕೆಲಸ ಮಾಡಿದವರಿಗೆ ಕಾಮನ್ಸೆನ್ಸ್ ಇರಬೇಕಿತ್ತು. ಗಲಭೆ ಮಾಡುವ ಇಂತಹ ಜನರಿಗೆ ಪ್ರಚೋದನೆ ನೀಡುವ ಸಿದ್ದರಾಮಯ್ಯ ಹಾಗೂ ಎಚ್.ಡಿ‌. ಕುಮಾರಸ್ವಾಮಿ ಅವರಿಗೆ ನಾಚಿಕೆಯಾಗಬೇಕು.
ಇಂತಹವರಿಂದಲೇ ದೇಶ ದುಸ್ಥಿತಿಗೆ ಬಂದಿದೆ ಎಂದು ವಾಗ್ದಾಳಿ ನಡೆಸಿದರು‌. ದೇಶದ ಜನತೆ ಹಾಗೂ ಕಾಯ್ದೆ ಬಗ್ಗೆ ಈ ಇಬ್ಬರು ನಾಯಕರಿಗೆ ಕಾಳಜಿ ಇಲ್ಲ. ನಾವು ಮುಸ್ಲಿಂ ಸಮಾಜದ ವಿರೋಧಿಗಳಲ್ಲ. ಕುಮಾರಸ್ವಾಮಿ, ಸಿದ್ದರಾಮಯ್ಯ ಕಿಡಗೇಡಿಗಳಿಗೆ ಸಪೋರ್ಟ್ ಮಾಡುತ್ತಿದ್ದಾರೆ ಎಂದು ಸಂಗಣ್ಣ ಕರಡಿ ಬಲವಾಗಿ ಆಪಾದಿಸಿದರು‌. ಕಾಂಗ್ರೆಸ್ ನವರೇ ಗಲಭೆ ಸೃಷ್ಟಿ ಮಾಡುತ್ತಿದ್ದಾರೆ. ಅಧಿಕಾರ ಕಳೆದುಕೊಂಡ ಮೇಲೆ ಕಾಂಗ್ರೆಸ್ ಪ್ರತಿಭಟನೆಗೆ ಪ್ರಚೋದಿಸುತ್ತಿದೆ. ಸಿದ್ದರಾಮಯ್ಯ, ಕುಮಾರಸ್ವಾಮಿ ಕ್ಷಮೆ ಕೇಳಬೇಕು ಎಂದು ಆಗ್ರಹಿಸಿದರು‌. ಅಲ್ಲದೆ ಮಾಜಿ ಸಚಿವ ಯು.ಟಿ. ಖಾದರ್ ಅವರ ಹೇಳಿಕೆ ಗಲಭೆಗೆ ಕಾರಣ ಎಂದ ಸಂಸದ ಸಂಗಣ್ಣ ಕರಡಿ ಇದೇ ಸಂದರ್ಭದಲ್ಲಿ ಆರೋಪಿಸಿದರು.

ಬೈಟ್1:- ಸಂಗಣ್ಣ ಕರಡಿ, ಸಂಸದ.Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.