ಕುಷ್ಟಗಿ (ಕೊಪ್ಪಳ): ಕುಷ್ಟಗಿ ಪಟ್ಟಣದ ಹಳೆ ಕುರಬನಾಳ ರಸ್ತೆಯ ಗುಂಡಿಗಳನ್ನು ಮುಚ್ಚಿಸಲು ಪುರಸಭೆ ಕ್ರಮ ಕೈಗೊಂಡಿದ್ದು, ತಾತ್ಕಾಲಿಕ ಪರಿಹಾರ ಸಿಕ್ಕಂತಾಗಿದೆ.
ಕಾರ್ಗಿಲ್ ವೃತ್ತದಿಂದ ರಾಷ್ಟ್ರೀಯ ಹೆದ್ದಾರಿ ಸಂಪರ್ಕಿಸುವ ಹಳೆ ಕುರಬನಾಳ ರಸ್ತೆಯಲ್ಲಿ ಡಾಂಬರ್ ಕಿತ್ತು, ಗುಂಡಿಗಳು ಸೃಷ್ಟಿಯಾಗಿದ್ದವು. ಇತ್ತೀಚೆಗೆ ನಿರಂತರ ಮಳೆಯಿಂದ ಗುಂಡಿಗಳಲ್ಲಿ ನೀರು ಜಮೆಯಾಗಿದ್ದರಿಂದ ರಸ್ತೆ, ಗುಂಡಿಗಳ ವ್ಯತ್ಯಾಸವಿಲ್ಲದೇ ಬೈಕ್ ಸವಾರರು ಮುಗ್ಗರಿಸಿ ಬೀಳುವಂತಾಗಿದೆ.
ಕಳೆದ ಗುರುವಾರ ಈ ಟಿವಿ ಭಾರತದಲ್ಲಿ ರಸ್ತೆಯ ದುಸ್ಥಿತಿ ಬಗ್ಗೆ ಸುದ್ದಿಯನ್ನು ಶಾಸಕ ಅಮರೇಗೌಡ ಪಾಟೀಲ ಬಯ್ಯಾಪೂರ ಗಮನಿಸಿ ಅವರು, ಈ ರಸ್ತೆಯನ್ನು ಮರು ಡಾಂಬರೀಕರಣಕ್ಕಾಗಿ ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ದಿಯ ಮೈಕ್ರೋ ನಿಧಿಯಲ್ಲಿ 15 ಲಕ್ಷ ರೂ. ವೆಚ್ಚದಲ್ಲಿ ಸುಧಾರಿಸಲಾಗುವುದು. ಅಲ್ಲಿಯವರೆಗೂ ಸುಗಮ ಸಂಚಾರಕ್ಕಾಗಿ ಮರಂ ಮಣ್ಣು ಹಾಕಿ ಸಮತಟ್ಟು ಮಾಡಲು ಪುರಸಭೆ ಸೂಚಿಸಲಾಗಿದೆ.
ಈ ಕುರಿತು ವರದಿ ಪ್ರಸಾರದಿಂದ ಜನಪ್ರತಿನಿಧಿ ಹಾಗೂ ಅಧಿಕಾರಿಗಳ ಸ್ಪಂಧನೆಗೆ ಜನ ಮೆಚ್ಚುಗೆ ವ್ಯಕ್ತವಾಗಿದೆ.