ಗಂಗಾವತಿ : ತಾಲೂಕಿನ ಅರಳಿಹಳ್ಳಿ ಗ್ರಾಮದಲ್ಲಿ ಕೋವಿಡ್ ಸೋಂಕಿನಿಂದ ಸಾವನ್ನಪ್ಪಿದ ವ್ಯಕ್ತಿಯ ಅಂತ್ಯ ಸಂಸ್ಕಾರಕ್ಕೆ ಆರೋಗ್ಯ ಇಲಾಖೆಯ ಸಿಬ್ಬಂದಿ ಹಿಂದೇಟು ಹಾಕಿ ಹೋಗಿದ್ದ ಪ್ರಕರಣ, 'ಈಟಿವಿ ಭಾರತ'ದಲ್ಲಿ ವರದಿ ಪ್ರಸಾರವಾಗುತ್ತಿದ್ದಂತೆಯೇ ಎಚ್ಚೆತ್ತ ಆಡಳಿತ ಮಂಡಳಿ ಅಂತ್ಯಸಂಸ್ಕಾರಕ್ಕೆ ಮುಂದಾದ ಘಟನೆ ನಡೆದಿದೆ.
ಗ್ರಾಮದ 55 ವರ್ಷ ವಯಸ್ಸಿನ ವ್ಯಕ್ತಿ ಸಾವನ್ನಪ್ಪಿದ್ದರು. ಇವರಿಗೆ ಎರಡು ವಾರದ ಹಿಂದೆ ಕೊರೊನಾ ಪಾಸಿಟಿವ್ ಸೋಂಕು ದೃಢಪಟ್ಟಿತ್ತು. ಅಂತ್ಯ ಸಂಸ್ಕಾರಕ್ಕೆ ಬಂದಿದ್ದ ಆರೋಗ್ಯ ಇಲಾಖೆ ಸಿಬ್ಬಂದಿಯ ಅಮಾನವೀಯ ವರ್ತನೆಗೆ ಗ್ರಾಮಸ್ಥರು ವಿರೋಧ ವ್ಯಕ್ತವಪಡಿಸಿದ ಹಿನ್ನೆಲೆ ಸಿಬ್ಬಂದಿ ಕೈಚೆಲ್ಲಿ ಮೃತೇಹವನ್ನು ಬಿಟ್ಟು ಹೋಗಿದ್ದರು.
ಇದನ್ನು ಓದಿ: ಕೊರೊನಾದಿಂದ ವ್ಯಕ್ತಿ ಸಾವು: ಶವ ಸಂಸ್ಕಾರ ಮಾಡದೆ ತೆರಳಿದ್ರಾ ಆರೋಗ್ಯ ಸಿಬ್ಬಂದಿ?
ಈ ಬಗ್ಗೆ ಈಟಿವಿ ಭಾರತದಲ್ಲಿ ಸುದ್ದಿ ಪ್ರಸಾರವಾಗುತ್ತಿದ್ದಂತಯೇ ಸ್ಥಳಕ್ಕೆ ಆಗಮಿಸಿದ ಕೇಸರಹಟ್ಟಿ ಗ್ರಾಮ ಪಂಚಾಯತ್ ಪಿಡಿಒ, ಹೊಸಕೇರಾ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಸಮ್ಮುಖದಲ್ಲಿ ನಾಲ್ವರು ಸಿಬ್ಬಂದಿ ಮೂಲಕ ಮೃತನ ಅಂತ್ಯ ಸಂಸ್ಕಾರ ನೆರವೇರಿಸಲಾಗಿದೆ.