ಕುಷ್ಟಗಿ(ಕೊಪ್ಪಳ): ತಾಲೂಕಿನ ಕೇಸೂರು ಕಂಟೇನ್ಮೆಂಟ್ ವ್ಯಾಪ್ತಿಯ ನಿವಾಸಿಗಳಿಗೆ ಆಹಾರ ಸಾಮಗ್ರಿಗಳ ಕಿಟ್ ವಿತರಿಸುವಂತೆ ದಾನಿಗಳಿಗೆ ತಾಲೂಕಾಡಳಿತ ಮನವಿ ಮಾಡಿದ್ದು, ಇದಕ್ಕೆ ಶ್ರೀ ಶರಣಬಸವೇಶ್ವರ ಗ್ರಾಮೀಣಾಭಿವೃಧ್ಧಿ ಸಂಸ್ಥೆ ಸ್ಪಂದಿಸಿ 70 ಕಿಟ್ಗಳನ್ನು ವಿತರಿಸಿತು.
ಸಂಸ್ಥೆಯ ಪ್ರಧಾನ ಕಾರ್ಯದರ್ಶಿ , ಜಿ.ಪಂ. ಸದಸ್ಯ ಕೆ.ಮಹೇಶ, ಇಂದು ಕೇಸೂರು ಕಂಟೇನ್ಮೆಂಟ್ ಪ್ರದೇಶದ ಎಲ್ಲಾ ಮನೆಗಳಿಗೆ ತೆರಳಿ ಸಂಸ್ಥೆ ವತಿಯಿಂದ ದಿನಸಿ ಪದಾರ್ಥಗಳ ಕಿಟ್ ವಿತರಣೆ ಮಾಡಿದರು. ಬಳಿಕ ನಿವಾಸಿಗಳಿಗೆ ನಿಮ್ಮೊಂದಿಗೆ ನಾವಿದ್ದೇವೆ. ಯಾಾವುದೇ ಕಾರಣಕ್ಕೂ ಭೀತಿಗೆ ಒಳಗಾಗಬೇಡಿ. ಕಂಟೇನ್ಮೆಂಟ್ ಅವಧಿ ಮುಗಿಯುವರೆಗೂ ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕಡ್ಡಾಯವಾಗಿ ಮಾಸ್ಕ್ ಧರಿಸಿರಿ ಎಂದು ಸಲಹೆ ನೀಡಿದರು.
ಕೊರೊನಾ ಸೋಂಕಿತ ವ್ಯಕ್ತಿ (ಪಿ-2254) ಗೆ ಚಿಕಿತ್ಸೆ ನೀಡಲಾಗಿತ್ತಿದ್ದು, ಗುಣಮುಖರಾಗಲಿದ್ದಾರೆ. ಆತನ ಮನೆಯವರನ್ನು ತುಚ್ಯವಾಗಿ ಕಾಣದೆ ಮಾನವೀಯತೆ ಮರೆಯಿರಿ ಎಂದು ಮನವಿ ಮಾಡಿದರು.
ಈ ವೇಳೆ ತಾ.ಪಂ. ಸದಸ್ಯ ಮಹಾಂತೇಶ ಬದಾಮಿ, ಪಿಡಿಓ ನಾಗರತ್ನ, ಎಎಸೈ ತಾಯಪ್ಪ ಮತ್ತಿತರರು ಉಪಸ್ಥಿತರಿದ್ದರು.