ETV Bharat / state

ಖುದ್ದು ಅಡುಗೆ ಉಸ್ತುವಾರಿ ವಹಿಸಿಕೊಂಡ ಇಒ..

ಬಸವಪಟ್ಟಣ, ವಡ್ಡರಹಟ್ಟಿ ಗ್ರಾಮದ ಅಡುಗೆಮನೆಗಳಿಗೆ ಭೇಟಿ ನೀಡಿದ ಇಒ, ಪರಿಶೀಲನೆ ನಡೆಸಿದರು. ಬಳಿಕ ಅಡುಗೆ ಕಾರ್ಯಕ್ಕೆ ನಿಯೋಜಿತ ಸಿಬ್ಬಂದಿಗೆ ಸ್ವಚ್ಛತೆ ಹಾಗೂ ಮುಂಜಾಗ್ರತೆ ಕಾಪಾಡುವಂತೆ ಸಲಹೆ ನೀಡಿದರು..

gangavathi
ಅಡುಗೆ ಉಸ್ತುವಾರಿ ವಹಿಸಿಕೊಂಡ ಇಒ
author img

By

Published : Dec 27, 2020, 6:54 AM IST

ಗಂಗಾವತಿ : ಕೊರೊನಾ ವೈರಸ್‌ನ 2ನೇ ಅಲೆಯ ಆತಂಕ ಜಿಲ್ಲೆಯ ಜನರಲ್ಲಿದೆ. ಈ ಹಿನ್ನೆಲೆಯಲ್ಲಿ ಹೆಚ್ಚಿನ ಸುರಕ್ಷತೆ ಹಾಗೂ ಸ್ವಚ್ಛತೆಗೆ ಆದ್ಯತೆ ನೀಡಲು ಗ್ರಾಪಂ ಚುನಾವಣಾ ಕಾರ್ಯಕ್ಕೆ‌ ನಿಯೋಜಿತರಾದ ಸಿಬ್ಬಂದಿಗೆ ಊಟ, ಉಪಹಾರದಂತಹ ವ್ಯವಸ್ಥೆಯ ಬಗ್ಗೆ ಖುದ್ದು ತಾಲೂಕು ಪಂಚಾಯತ್‌ ಇಒ ಡಾ.ಡಿ ಮೋಹನ್ ಅವರು ಉಸ್ತುವಾರಿ ವಹಿಸಿಕೊಂಡು ವೀಕ್ಷಣೆ‌ ಮಾಡಿದರು.

ಇಂದು ತಾಲೂಕಿನ ಹದಿನೆಂಟು ಮತಗಟ್ಟೆಗಳಲ್ಲಿ ಚುನಾವಣೆ ನಡೆಯಲಿದೆ. ಇದಕ್ಕಾಗಿ ಆರು ಜನ ಸಿಬ್ಬಂದಿ ಸೇರಿ ಪೊಲೀಸರು, ಸಹಾಯಕರು ಹೀಗೆ ಇಪ್ಪತ್ತಕ್ಕೂ ಹೆಚ್ಚು ಜನ ಕಾರ್ಯ ನಿರ್ವಹಿಸುತ್ತಿದ್ದಾರೆ. ಅವರಿಗೆಲ್ಲ ರಾತ್ರಿ ಊಟ, ಬೆಳಗಿನ ಉಪಹಾರ, ಮಧ್ಯಾಹ್ನದ ಊಟ, ಸಂಜೆ ಉಪಹಾರ ಹಾಗೂ ಚಹಾದಂತಹ ವ್ಯವಸ್ಥೆ ಮಾಡಲಾಗಿದೆ.

ಓದಿ: ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಬೆಂಕಿ; ಸುಟ್ಟು ಕರಕಲಾದ ಅರಣ್ಯ ಪ್ರದೇಶ

ಈ ಹಿನ್ನೆಲೆ ಬಸವಪಟ್ಟಣ, ವಡ್ಡರಹಟ್ಟಿ ಗ್ರಾಮದ ಅಡುಗೆಮನೆಗಳಿಗೆ ಭೇಟಿ ನೀಡಿದ ಇಒ, ಪರಿಶೀಲನೆ ನಡೆಸಿದರು. ಬಳಿಕ ಅಡುಗೆ ಕಾರ್ಯಕ್ಕೆ ನಿಯೋಜಿತ ಸಿಬ್ಬಂದಿಗೆ ಸ್ವಚ್ಛತೆ ಹಾಗೂ ಮುಂಜಾಗ್ರತೆ ಕಾಪಾಡುವಂತೆ ಸಲಹೆ ನೀಡಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.