ETV Bharat / state

ಗಂಗಾವತಿ ನಗರಸಭೆಗೆ ಎಂಟು ತ್ಯಾಜ್ಯ ವಿಲೇವಾರಿ ವಾಹನಗಳ ರವಾನೆ - ಗಂಗಾವತಿ ನಗರದ ಒಣ ಮತ್ತು ಹಸಿ ಕಸ ವಿಲೇವಾರಿ ಸಮಸ್ಯೆ

ಘನತ್ಯಾಜ್ಯ ವಿಲೇವಾರಿಗಾಗಿ ಮನೆ ಮನೆಯ ಕಸ ಸಂಗ್ರಹಕ್ಕಾಗಿ, ಗಂಗಾವತಿಯ ನಗರಸಭೆಗೆ ಎಂಟು ಮಿನಿ ಟಿಪ್ಪರ್ ವಾಹನಗಳು ಸೇರ್ಪಡೆಯಾಗಿವೆ. ಹೊಸ ಮಾದರಿಯ ಈ ವಾಹನಗಳಲ್ಲಿ ಕಸ ಸಂಗ್ರಹಿಸಿದ ಬಳಿಕ ಮುಚ್ಚುವ ಹಾಗೂ ಸುರಕ್ಷಿತವಾಗಿ ತ್ಯಾಜ್ಯ ವಿಲೇವಾರಿ ಘಟಕಕ್ಕೆ ರವಾನಿಸುವ ವ್ಯವಸ್ಥೆಯಿದೆ.

Eight disposal vehicles dispatched to Gangawati Municipality
ಗಂಗಾವತಿ ನಗರಸಭೆಗೆ ಎಂಟು ತ್ಯಾಜ್ಯ ವಿಲೇವಾರಿ ವಾಹನಗಳ ರವಾನೆ
author img

By

Published : Mar 17, 2020, 10:20 AM IST

ಗಂಗಾವತಿ: ನಗರದ ಒಣ ಮತ್ತು ಹಸಿ ಕಸ ವಿಲೇವಾರಿ ಸಮಸ್ಯೆಯಾಗುತ್ತಿರುವ ಹಿನ್ನೆಲೆ, ಘನತ್ಯಾಜ್ಯ ವಿಲೇವಾರಿಗಾಗಿಯೇ ಮನೆ ಮನೆಯ ಕಸ ಸಂಗ್ರಹಕ್ಕಾಗಿ ನಗರಸಭೆಗೆ ಎಂಟು ಮಿನಿ ಟಿಪ್ಪರ್ ವಾಹನಗಳು ಸೇರ್ಪಡೆಯಾಗಿವೆ.

ಘನತ್ಯಾಜ್ಯ ವಿಲೇವಾರಿ ಯೋಜನೆಯಡಿ 14ನೇ ಹಣಕಾಸು ಯೋಜನೆಯಲ್ಲಿ, ಸುಮಾರು ₹50 ಲಕ್ಷ ಮೊತ್ತದಲ್ಲಿ ಎಂಟು ಟಿಪ್ಪರ್ ಖರೀದಿಸಲಾಗಿದೆ. ಒಣ ಮತ್ತು ಹಸಿ ಕಸ ಸಂಗ್ರಹಿಸಲು ಪ್ರತ್ಯೇಕ ಕಂಟೇನರ್​​ಗಳಿರುವುದು ಈ ವಾಹನಗಳ ವಿಶೇಷತೆಯಾಗಿದೆ.

ಗಂಗಾವತಿ ನಗರಸಭೆಗೆ ಎಂಟು ತ್ಯಾಜ್ಯ ವಿಲೇವಾರಿ ವಾಹನಗಳ ರವಾನೆ

ಸದ್ಯ ಇರುವ ಟಿಪ್ಪರ್​​ಗಳು ತೆರೆದ ವಾಹನಗಳಾಗಿದ್ದು, ಕಸ ಸಂಗ್ರಹಿಸಿ ಸಾಗಿಸುವಾಗ ರಸ್ತೆಯಲ್ಲಿ ಬೀಳುವುದು ಸಹಜವಾಗಿತ್ತು. ಹೊಸ ಮಾದರಿಯ ವಾಹನಗಳಲ್ಲಿ ಕಸ ಸಂಗ್ರಹಿಸಿದ ಬಳಿಕ ಮುಚ್ಚುವ ಹಾಗೂ ಸುರಕ್ಷಿತವಾಗಿ ತ್ಯಾಜ್ಯ ವಿಲೇವಾರಿ ಘಟಕಕ್ಕೆ ರವಾನಿಸುವ ವ್ಯವಸ್ಥೆಯಿದೆ.

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.