ETV Bharat / state

ಪೊಲೀಸ್​ ಸಮವಸ್ತ್ರ ಧರಿಸಿಯೇ ರಕ್ತದಾನ ಮಾಡಿದ ಡಿವೈಎಸ್​​ಪಿ! - ಡಿವೈಎಸ್​​ಪಿ ರುದ್ರೇಶ ಉಜ್ಜನಕೊಪ್ಪ

ಪೊಲೀಸ್​ ಸಮವಸ್ತ್ರ ಧರಿಸಿಯೇ ರಕ್ತದಾನ ಮಾಡುವ ಮೂಲಕ ಡಿವೈಎಸ್​​ಪಿ ರುದ್ರೇಶ ಉಜ್ಜನಕೊಪ್ಪ ಗಮನ ಸೆಳೆದಿದ್ದಾರೆ.

DYSP  blood donated by Uniform
ಡಿವೈಎಸ್​​ಪಿ ರುದ್ರೇಶ ಉಜ್ಜನಕೊಪ್ಪ
author img

By

Published : Jan 13, 2021, 12:15 AM IST

ಗಂಗಾವತಿ: ಪೊಲೀಸ್ ಅಧಿಕಾರಿಯೊಬ್ಬರು ಯುನಿಫಾರಂ ಧರಿಸಿಯೇ ರಕ್ತದಾನ ಮಾಡುವ ಮೂಲಕ ಗಮನ ಸೆಳೆದಿದ್ದಾರೆ. ಅಲ್ಲದೇ ರಕ್ತದಾನದ ಬಗ್ಗೆ ಯುವಕರಲ್ಲಿ ಜಾಗೃತಿ ಮೂಡಿಸಿ ರಕ್ತದ ಅವಶಕ್ಯತೆಯ ಬಗ್ಗೆ ಸಂದೇಶ ಸಾರಿದ್ದಾರೆ.

ಉತ್ತಮ ಸೇವೆಗಾಗಿ ಇತ್ತೀಚೆಗಷ್ಟೆ ಇಲಾಖೆಯಿಂದ ರಾಷ್ಟ್ರಪತಿ ಗೌರವದ ಪದಕ ಪಡೆದಿರುವ ಗಂಗಾವತಿ ಉಪ ವಿಭಾಗದ ಡಿವೈಎಸ್​​ಪಿ ರುದ್ರೇಶ ಉಜ್ಜನಕೊಪ್ಪ, ನ್ಯಾಯಾಲಯದ ಆವರಣದಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಅತಿಥಿಯಾಗಿ ಪಾಲ್ಗೊಂಡು ರಕ್ತದಾನ ಮಾಡಿ ಗಮನ ಸೆಳೆದರು.

ಯುನಿಫಾರಂ ಧರಿಸಿಯೇ ರಕ್ತದಾನ ಮಾಡಿದ ಡಿವೈಎಸ್​​ಪಿ

ಬಳಿಕ ಮಾತನಾಡಿ ಅವರು, ರಕ್ತದಾನ ಕುರಿತು ಸಾಕಷ್ಟು ಸಂಶಯಗಳಿವೆ. ರಕ್ತದಾನ ಮಾಡಿದರೆ ದೇಹದಲ್ಲಿ ರಕ್ತದ ಪ್ರಮಾಣ ಕಡಿಮೆಯಾಗಿ ಜೀವ ಹೋಗುತ್ತದೆ ಎಂಬ ಸಂಶಯ ಹಲವರಲ್ಲಿದೆ. ಜನರಲ್ಲಿ ಇರುವ ಅಪನಂಬಿಕೆಗಳನ್ನು ಹೋಗಲಾಡಿಸಬೇಕಾದ ಕೆಲಸ ಸಂಘಟನೆಗಳು ಮಾಡಬೇಕು ಎಂದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.