ಗಂಗಾವತಿ: ಕಳೆದ ಎರಡು ತಿಂಗಳಿಂದ ರಸ್ತೆಗೆ ಇಳಿಯದ ಹಾಗೂ ಜನರಿಗೆ ಮುಖ ತೋರಿಸದಂತಾಗಿದ್ದ ಸಾರಿಗೆ ಇಲಾಖೆಯ ವಾಹನಗಳು ಸೋಮವಾರದಿಂದ ಮತ್ತೆ ಬೀದಿಗೆ ಇಳಿಯಲಿವೆ. ಇದಕ್ಕಾಗಿ ಇಲಾಖೆ ಇಲ್ಲಿನ ಘಟಕದಲ್ಲಿ ಸಕಲ ಸಿದ್ಧತೆ ಮಾಡಿಕೊಂಡಿದೆ.
ಸಾರಿಗೆ ಘಟಕದ ಕಚೇರಿಯಲ್ಲಿ ಸಿಬ್ಬಂದಿ ಸಭೆ ನಡೆಸಿದ ಘಟಕ ವ್ಯವಸ್ಥಾಪಕ ಸಂಜೀವಮೂರ್ತಿ, ಸೋಮವಾರದಿಂದ ಮತ್ತೆ ರಸ್ತೆಗೆ ಇಳಿಯಲಿರುವ ವಾಹನಗಳನ್ನು ಯಾವ ರಸ್ತೆ ಹಾಗೂ ಮಾರ್ಗದಲ್ಲಿ ಓಡಿಸಬೇಕು, ಎಷ್ಟು ಪ್ರಮಾಣದ ವಾಹನಗಳನ್ನು ಸಂಚಾರಕ್ಕೆ ಬಿಡಬೇಕು ಎಂಬುವುದರ ಬಗ್ಗೆ ಸಭೆ ನಡೆಸಿದರು. ನಂತರ ಈ ಬಗ್ಗೆ`ಈಟಿವಿ ಭಾರತ'ದೊಂದಿಗೆ ಮಾತನಾಡಿದ ಅವರು, ಸರ್ಕಾರದ ಆದೇಶದ ಪ್ರಕಾರ, ಕೇವಲ ಗ್ರೀನ್ ಝೋನ್ ಜಿಲ್ಲೆಗಳಲ್ಲಿ ಮಾತ್ರ ವಾಹನ ಸಂಚಾರಕ್ಕೆ ಮುಕ್ತಗೊಳಿಸಲಾಗುವುದು. ಮುಖ್ಯವಾಗಿ ಕೋವಿಡ್ ಲಸಿಕೆ ಹಾಕಿಸಿಕೊಂಡವರಿಗೆ ಮಾತ್ರ ಡ್ಯೂಟಿಗೆ ಅವಕಾಶ ನೀಡಲಾಗುವುದು ಎಂದರು.
ಓದಿ: ಸಿಎಂ ಭೇಟಿಯಾದ ಅವಧೂತ: 3ನೇ ಅಲೆ ಬಗ್ಗೆ ಎಚ್ಚರ ಎಂದ ವಿನಯ್ ಗುರೂಜಿ