ಗಂಗಾವತಿ(ಕೊಪ್ಪಳ): ಚಾಕು ಇರಿತದಿಂದ ತೀವ್ರ ಗಾಯಗೊಂಡಿದ್ದ ವಕೀಲರೊಬ್ಬರನ್ನು ಪೊಲೀಸರು ಇಲ್ಲಿನ ಸರ್ಕಾರಿ ಉಪ ವಿಭಾಗ ಆಸ್ಪತ್ರೆಗೆ ಮಧ್ಯರಾತ್ರಿ ದಾಖಲಿಸಿದ್ದಾರೆ. ಘಟನೆಯ ಕುರಿತು ಗಾಯಾಳುವನ್ನು ವಿಚಾರಣೆಗೊಳಪಡಿಸಿದಾಗ ಜೋಡಿ ಕೊಲೆಯ ಸಂಚು ಬಯಲಾಗಿದೆ.
ಗಾಯಗೊಂಡ ವಕೀಲನನ್ನು ಬೆಂಗಳೂರಿನ ಯಶವಂತಪುರದ ನಿವಾಸಿ ಯೋಗೇಶ್ ಮನೋಹರ ದೇಸಾಯಿ ಎಂದು ಗುರುತಿಸಲಾಗಿದೆ. ಈತನನ್ನು ತೀವ್ರ ವಿಚಾರಣೆಗೆ ಒಳಪಡಿಸಿದಾಗ ಜಯನಗರದ ಸತ್ಯನಾರಾಯನ ಪೇಟೆಯ ನಿವಾಸಿ ಮನೋಹರ ದೇಸಾಯಿ ಮತ್ತು ಕರ್ಣಂ ಕಲಾವತಿ ಎಂಬುವರನ್ನು ಕೊಲೆ ಮಾಡುವ ಉದ್ದೇಶದಿಂದ ಬಂದಿರುವುದಾಗಿ ಒಪ್ಪಿಕೊಂಡಿದ್ದಾರೆ ಎನ್ನಲಾಗ್ತಿದೆ.
ಇದನ್ನೂ ಓದಿ: ಮಕ್ಕಳಾಗಲಿಲ್ಲವೆಂದು ಮಹಿಳೆಗೆ ರುಬ್ಬುವ ಗುಂಡಿನಿಂದ ಜಜ್ಜಿ ಕೊಲೆ.. ವಿಜಯನಗರದಲ್ಲಿ ರಾಕ್ಷಸಿ ಕೃತ್ಯ
ಪ್ರಕರಣದ ವಿವರ: ಯೋಗೇಶ್ ವೃತ್ತಿಯಲ್ಲಿ ವಕೀಲರಾಗಿದ್ದು, ಪ್ರಕರಣದ ಹಿನ್ನೆಲೆ ಕೊಪ್ಪಳಕ್ಕೆ ಬರಬೇಕಿತ್ತು. ಈ ಸಂದರ್ಭದಲ್ಲಿ ನನ್ನ ಕಾರಿನ ಚಾಲಕ ಸೊಹನಾ ಹಾಗೂ ಅವರ ಸ್ನೇಹಿತ ಪಯಾಜ್ ಜೊತೆಗೂಡಿ ಬೆಂಗಳೂರಿನಿಂದ ಹೊರಟಿದ್ದೇವೆ. ನನ್ನ ಬಳಿ 3 ಲಕ್ಷ ನಗದು ಇತ್ತು. ಗಂಗಾವತಿಯ ಜಯ ನಗರಕ್ಕೆ ಬಂದಾಗ ಮಧ್ಯರಾತ್ರಿ ಕಾರಿನಲ್ಲಿ ನನ್ನ ಕಟ್ಟಿಹಾಕಿ ಚೂರಿ ಇರಿದು, ಹಣ ಸಮೇತ ಆರೊಪಿಗಳು ಪರಾರಿಯಾಗಿದ್ದಾರೆ ಎಂದು ಆರೋಪಿ ಆರಂಭದಲ್ಲಿ ಕತೆ ಕಟ್ಟಿದ್ದಾರೆ. ಈ ಬಗ್ಗೆ ಸಂಶಯಗೊಂಡ ಪೊಲೀಸರು, ಗಾಯಾಳುವನ್ನು ತೀವ್ರ ವಿಚಾರಣೆ ನಡೆಸುತ್ತಿರುವಾಗ ಮೊಬೈಲ್ ಕರೆ ಬಂದಿದೆ.
ಇದನ್ನೂ ಓದಿ: ಶ್ರದ್ಧಾ ಶವದ ಪಕ್ಕ ಕುಳಿತು ಗಾಂಜಾ ಸೇದಿದ್ದ ಅಫ್ತಾಬ್: ಮತ್ತೊಂದು ಬ್ಯಾಗ್ ಪತ್ತೆ, ಸ್ನೇಹಿತರ ಚಾಟಿಂಗ್ ಪರಿಶೀಲನೆ
ಸ್ಥಳದಲ್ಲಿದ್ದ ಪೊಲೀಸರು ಲೌಡ್ ಸ್ಪೀಕರ್ ಆನ್ ಮಾಡುವಂತೆ ಹೇಳಿದ್ದಾರೆ. ಈ ವೇಳೆ ಕರೆ ಮಾಡಿದ ವ್ಯಕ್ತಿಗಳು, ಕಾರಿನಲ್ಲಿ ಕೇವಲ 1.5 ಲಕ್ಷ ಹಣವಿದೆ. ನೀನು ಕೊಲೆ ಮಾಡಲು ಬಂದಿರುವ ಸಂಗತಿಯನ್ನು ಪೊಲೀಸರಿಗೆ ತಿಳಿಸುತ್ತೇವೆ ಎಂದಿದ್ದಾರೆ. ಅದುವರೆಗೂ ಕಟ್ಟು ಕತೆ ಹೇಳಿದ್ದರೆನ್ನಲಾದ ವಕೀಲ, ಬಳಿಕ ಪೊಲೀಸರ ಮುಂದೆ ವಾಸ್ತವ ಬಾಯಿಬಿಟ್ಟಿದ್ದಾರೆ. ಆಸ್ತಿ ವ್ಯಾಜ್ಯದ ವಿಚಾರವಾಗಿ ನನ್ನ ತಂದೆ ಮನೋಹರ ದೇಸಾಯಿ ಹಾಗೂ ಮಲತಾಯಿ ಕರ್ಣಂ ಕಲಾವತಿಯನ್ನು ಕೊಲ್ಲಲು ಬಂದಿದ್ದಾಗಿ ಒಪ್ಪಿಕೊಂಡಿದ್ದಾರಂತೆ. ಈ ಕುರಿತು ಪಿಎಸ್ಐ ವೆಂಕಟೇಶ ಚೌವ್ಹಾಣ್ ನೀಡಿದ ದೂರಿನ ಮೇರೆಗೆ ಗಂಗಾವತಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.