ETV Bharat / state

ಹೆದರಿಕೆ ಬಿಟ್ಟು ಲಸಿಕೆ ಹಾಕಿಸಿಕೊಳ್ಳಿ: ವೈದ್ಯಾಧಿಕಾರಿ ಡಾ.ಕೆ.ಎಸ್. ರೆಡ್ಡಿ

ನಿನ್ನೆಯಿಂದ ದೇಶಾದ್ಯಂತ ಕೊರೊನಾ ಲಸಿಕೆ ಹಾಕುವ ಕಾರ್ಯ ನಡೆಯುತ್ತಿದೆ. ಅದರಂತೆ ತಾಲೂಕು ಆಸ್ಪತ್ರೆ ಹಿರಿಯ ವೈದ್ಯಾಧಿಕಾರಿ ಡಾ.ಕೆ.ಎಸ್. ರೆಡ್ಡಿ ಅವರು ಕೂಡ ಲಸಿಕೆ ಹಾಕಿಕೊಂಡಿದ್ದು, ಕೊವಿಶೀಲ್ಡ್​​ ಲಸಿಕೆಯಿಂದ ಯಾವುದೇ ಅಪಾಯವಿಲ್ಲ. ಯಾರೂ ಆತಂಕ ಪಡದೆ ವ್ಯಾಕ್ಸಿನ್​ ಪಡೆಯುವಂತೆ ಮನವಿ ಮಾಡಿದರು.

ವೈದ್ಯಾಧಿಕಾರಿ ಡಾ.ಕೆ.ಎಸ್.ರೆಡ್ಡಿ
Doctor Reddy
author img

By

Published : Jan 17, 2021, 6:45 PM IST

ಕುಷ್ಟಗಿ (ಕೊಪ್ಪಳ): ಕೊರೊನಾ ವ್ಯಾಕ್ಸಿನ್​ ಬಗ್ಗೆ ನಮ್ಮ ಸಿಬ್ಬಂದಿಯಲ್ಲಿ ಹೆದರಿಕೆ ಇತ್ತು. ಅವರ ಹೆದರಿಕೆ ದೂರ ಮಾಡಲು ನಾನೇ ಸ್ವತಃ ಲಸಿಕೆ ಹಾಕಿಸಿಕೊಂಡಿರುವೆ. ಲಸಿಕೆಯಿಂದ ಯಾವುದೇ ಸಮಸ್ಯೆ ಆಗಿಲ್ಲ. ನಾನು ಆರೋಗ್ಯದಿಂದ ಇರುವೆ ಎಂದು ತಾಲೂಕು​​ ಆಸ್ಪತ್ರೆ ಹಿರಿಯ ವೈದ್ಯಾಧಿಕಾರಿ ಡಾ.ಕೆ.ಎಸ್. ರೆಡ್ಡಿ ಹೇಳಿದರು.

ಈಟಿವಿಯೊಂದಿಗೆ ಅನುಭವ ಹಂಚಿಕೊಂಡ ತಾಲೂಕ್​​ ಆಸ್ಪತ್ರೆ ಹಿರಿಯ ವೈದ್ಯಾಧಿಕಾರಿ ಡಾ.ಕೆ.ಎಸ್.ರೆಡ್ಡಿ

ತಾಲೂಕು ಆಸ್ಪತ್ರೆ ಹಿರಿಯ ವೈದ್ಯಾಧಿಕಾರಿ ಡಾ.ಕೆ.ಎಸ್. ರೆಡ್ಡಿ ಅವರು ಕೊವಿಶೀಲ್ಡ್ ಮೊದಲ​​ ಲಸಿಕೆ ಪಡೆದಿದ್ದು, ಈ ಕುರಿತಂತೆ ಅವರು ಈಟಿವಿ ಭಾರತದೊಂದಿಗೆ ತಮ್ಮ ಅನುಭವವನ್ನು ಹಂಚಿಕೊಂಡರು.

ಲಸಿಕೆ ನೀಡಿಕೆಯ ಆರಂಭದ ದಿನ 60 ಜನ ಆರೋಗ್ಯ ಸಿಬ್ಬಂದಿ ಮತ್ತು ಆಶಾ ಸಿಬ್ಬಂದಿ ಲಸಿಕೆ ತೆಗೆದುಕೊಂಡಿದ್ದಾರೆ. ಈ ವೇಳೆ ಮಂಜುಳಾ ಎನ್ನುವ ಆಶಾ ಕಾರ್ಯಕರ್ತೆಗೆ ಸ್ವಲ್ಪ ಸುಸ್ತು ಆಗಿತ್ತು. ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಿದ್ದು, ಅವರು ಚೇತರಿಸಿಕೊಂಡಿದ್ದರು. ಈ ಲಸಿಕೆ ಬಗ್ಗೆ ಆತಂಕ ಸಲ್ಲದು. ಯಾವುದೇ ಅಡ್ಡ ಪರಿಣಾಮಗಳಿಲ್ಲ. ಎಲ್ಲರೂ ಸಹಕರಿಸಿದರೆ ಕೊರೊನಾ ವೈರಸ್ ವಿರುದ್ಧ ಗೆಲ್ಲಲು ಸಾಧ್ಯವಿದೆ ಎಂದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.