ETV Bharat / state

ಇನ್ನೂ ಜನರ ಕೈ ಸೇರಿಲ್ಲ ದಾನಿಗಳು ಕೊಟ್ಟ ಆಹಾರ ಕಿಟ್‌ಗಳು.. - ಇನ್ನೂ ಜನರ ಕೈ ಸೇರಿಲ್ಲ ದಾನಿಗಳು ಕೊಟ್ಟ ಆಹಾರ ಕಿಟ್

ತಾಲೂಕಿನ 36 ಗ್ರಾಮ ಪಂಚಾಯತ್‌ಗಳ ಪೈಕಿ ಇನ್ನೂ 11 ಗ್ರಾಮ ಪಂಚಾಯತ್‌ಗಳಿಗೆ ಆಹಾರ ಧಾನ್ಯಗಳ ಕಿಟ್​ ವಿತರಿಸಲಾಗಿಲ್ಲ. ಈ ಬಗ್ಗೆ ತಾಪಂ ಸಿಬ್ಬಂದಿ ವಿಚಾರಿಸಿದಾಗ ಗುರುವಾರ ವಿತರಿಸುವುದಾಗಿ ತಿಳಿಸಿದ್ದಾರೆ.

Donors donated food kits that still don't belong in people's hands
ಇನ್ನೂ ಜನರ ಕೈ ಸೇರಿಲ್ಲ ದಾನಿಗಳು ಕೊಟ್ಟ ಆಹಾರ ಕಿಟ್
author img

By

Published : Jun 3, 2020, 9:24 PM IST

ಕುಷ್ಟಗಿ (ಕೊಪ್ಪಳ): ಲಾಕ್​​ಡೌನ್​​ ಸಂದರ್ಭದಲ್ಲಿ ದಾನಿಗಳು ನೀಡಿದ ಆಹಾರ ಸಾಮಾಗ್ರಿಗಳನ್ನು ಗ್ರಾಮ ಪಂಚಾಯತ್‌ವಾರು ವಿತರಿಸದೇ ಉಳಿಸಿಕೊಂಡಿರುವ ಸುದ್ದಿ ತಾಲೂಕಿನಲ್ಲಿ ಬೆಳಕಿಗೆ ಬಂದಿದೆ.

ಗ್ರಾನೈಟ್ ಮಾಲೀಕರು ತಾಲೂಕು ಆಡಳಿತಕ್ಕೆ 700ಕ್ಕೂ ಅಧಿಕ ಆಹಾರ ​ ಕಿಟ್ ವಿತರಿಸಿದ್ದರು. ಈ ಕಿಟ್​​ಗಳನ್ನು ಗ್ರಾಮ ಪಂಚಾಯತ್‌ವಾರು ಹಂಚಿಕೆ ಮಾಡಲು ತಾಲೂಕು ಪಂಚಾಯತ್‌ಗೆ ಕಳುಹಿಸಲಾಗಿದೆ. ತಾಲೂಕಿನ 36 ಗ್ರಾಮ ಪಂಚಾಯತ್‌ಗಳ ಪೈಕಿ ಇನ್ನೂ 11 ಗ್ರಾಮ ಪಂಚಾಯತ್‌ಗಳಿಗೆ ಆಹಾರ ಧಾನ್ಯಗಳ ಕಿಟ್​ ವಿತರಿಸಲಾಗಿಲ್ಲ. ಈ ಬಗ್ಗೆ ತಾಪಂ ಸಿಬ್ಬಂದಿ ವಿಚಾರಿಸಿದಾಗ ಗುರುವಾರ ವಿತರಿಸುವುದಾಗಿ ತಿಳಿಸಿದ್ದಾರೆ.

ಈ ಕುರಿತು ಮುದೇನೂರು ಗ್ರಾಮದ ಹುಸೇನಪ್ಪ ಮುದೇನೂರು, ದಾನಿಗಳು ನೀಡಿದ ಆಹಾರದ ಕಿಟ್​​ಗಳನ್ನು ಸಕಾಲದಲ್ಲಿ ಮುಟ್ಟಿಸಬೇಕಿತ್ತು. ಹಾಗೆಯೇ ಇಟ್ಟಿರುವುದು ಆಹಾರ ಸಾಮಾಗ್ರಿ ಇಲಿ, ಹೆಗ್ಗಣ ಪಾಲಾಗುವ ಸಾಧ್ಯತೆಗಳಿವೆ ಎಂದು ಆತಂಕ ತೋಡಿಕೊಂಡಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.