ಕುಷ್ಟಗಿ (ಕೊಪ್ಪಳ): ತಾಲೂಕಿನ ಸೌಹಾರ್ದ ಸಹಕಾರಿ ಸಂಘಗಳ ಸಹಕಾರಿಗಳಿಂದ ಸಂಗ್ರಹಿಸಿದ 1,01,500 ರೂಪಾಯಿ ಮೊತ್ತದ ಚೆಕ್ಅನ್ನ ಮುಖ್ಯಮಂತ್ರಿ ಕೋವಿಡ್-19 ಪರಿಹಾರ ನಿಧಿಗೆ ತಾಲೂಕು ಸಹಕಾರಿ ಅಧಿಕಾರಿ ಮರಿಯಪ್ಪ ಅವರ ಮೂಲಕ ಕೊಪ್ಪಳ ಜಿಲ್ಲಾಧಿಕಾರಿಗೆ ಸಲ್ಲಿಸಲಾಯಿತು.
ಒಟ್ಟು 23 ಸೌಹಾರ್ದ ಸಹಕಾರಿ ಸಂಘಗಳಿಂದ ತಲಾ 5 ಸಾವಿರ ರೂಪಾಯಿ ಸಂಗ್ರಹಿಸಿದ್ದು, ಒಟ್ಟು 1,01,500 ರೂಪಾಯಿ ಚೆಕ್ಅನ್ನ ಮುಖ್ಯಮಂತ್ರಿ ಪರಿಹಾರ ನಿಧಿಗೆ ನೀಡಲಾಗಿದೆ ಎಂದು ಜಿಲ್ಲಾ ಸಹಕಾರಿ ಒಕ್ಕೂಟದ ನಿರ್ದೇಶಕ ಶಶಿಧರ ಶೆಟ್ಟರ್ ತಿಳಿಸಿದರು.
ಈ ವೇಳೆ ತಾಲುಕು ಸಹಕಾರ ಭಾರತಿ ಅಧ್ಯಕ್ಷ ಬಸವರಾಜ್ ಪಡಿ, ತಾಲೂಕು ರಾಜ್ಯ ಸೌಹಾರ್ದ ಫೆಡರೇಶನ್ ನಿರ್ದೇಶಕ ಜಿ.ಶ್ರೀಧರ್ ಇನ್ನಿತರರು ಉಪಸ್ಥಿತರಿದ್ದರು.