ETV Bharat / state

ಅಳುತ್ತಿದ್ದ ಮಗು ಎತ್ತಿಕೊಂಡು ಸಂತೈಸಿದ ಸಿಇಒ ಫೌಜಿಯಾ ತರುನ್ನುಮ್‌.. ತಾಯಿ ಲಸಿಕೆ ಪಡೆಯಲು ನೆರವು.. - ಕೊಪ್ಪಳ

ಮಗುವಿನ ಗಮನ ಬೇರೆಡೆ ಸೆಳೆದ ಜಿಪಂ ಸಿಇಒ ಫೌಜೀಯಾ ತರುನ್ನುಮ್, ಅದೇ ಮಗುವನ್ನ ಎತ್ತಿ ಕೆಲಕಾಲ ಆಟವಾಡಿಸಿದರು. ಅಲ್ಲದೆ ತಾಯಿ ಲಸಿಕೆ ಪಡೆಯಲು ಸಹಕಾರ ನೀಡಿದ್ದಾರೆ. ಜಿಲ್ಲಾ ಪಂಚಾಯತ್ ಸಿಇಒ ಅವರ ಈ ನಡೆ ಎಲ್ಲರ ಮೆಚ್ಚುಗೆಗೆ ಪಾತ್ರವಾಯಿತು..

District Panchayat CEO Fouzia Taranum picking up a crying baby in koppal district
ಕೊಪ್ಪಳ: ಅಳುತ್ತಿದ್ದ ಮಗುವಿಗೆ ಎತ್ತಿಕೊಂಡು ಸಂತೈಸಿದ ಸಿಇಒ ಫೌಜಿಯಾ ತರುನ್ನುಮ್‌
author img

By

Published : Sep 18, 2021, 6:55 PM IST

Updated : Sep 18, 2021, 8:30 PM IST

ಕೊಪ್ಪಳ(ಗಂಗಾವತಿ) : ಮಕ್ಕಳೆಂದರೆ ಯಾರಿಗೆ ಇಷ್ಟವಿಲ್ಲ ಹೇಳಿ? ಹಾಲುಗಲ್ಲದ ಕಂದಮ್ಮ,‌ ಮುಗ್ಧವಾಗಿ ಮಾತನಾಡುವ, ತುಂಟಾಟದ ಮಕ್ಕಳು ಎಂಥಾ ಮನಸ್ಸಿನವರನ್ನಾದರೂ ಸೂಜಿಗಲ್ಲಿನಂತೆ ಸೆಳೆದು ಬಿಡುತ್ತವೆ.

ಆದರೆ, ಅಳುತ್ತಿದ್ದ ಮಗುವೊಂದು ಜಿಲ್ಲಾ ಪಂಚಾಯತ್ ಸಿಇಒ ಅವರ ಗಮನ ಸೆಳೆದಿದೆ. ಮಾತ್ರವಲ್ಲದೆ, ಅಧಿಕಾರಿ ಆ ಮಗುವನ್ನು ಎತ್ತಿ ಕೆಲಕಾಲ ಸಂತೈಸಿ ಅದರೊಂದಿಗೆ ಆಟವಾಡಿದ ಘಟನೆ ಕನಕಗಿರಿ ತಾಲೂಕಿನ ಚಿಕ್ಕಮಾದಿನಾಳ ಗ್ರಾಮದಲ್ಲಿ ನಡೆದಿದೆ.

ಅಳುತ್ತಿದ್ದ ಮಗು ಎತ್ತಿಕೊಂಡು ಸಂತೈಸಿದ ಸಿಇಒ ಫೌಜಿಯಾ ತರುನ್ನುಮ್‌.. ತಾಯಿ ಲಸಿಕೆ ಪಡೆಯಲು ನೆರವು..

ಚಿಕ್ಕಮಾದಿನಾಳ ಗ್ರಾಮದಲ್ಲಿ ಹಮ್ಮಿಕೊಂಡಿದ್ದ ಕೋವಿಡ್‌ ಲಸಿಕಾ ಶಿಬಿರದಲ್ಲಿ ಲಸಿಕೆ ಪಡೆಯಲು ಮಗುವಿನೊಂದಿಗೆ ಮಹಿಳೆಯೊಬ್ಬರು ಬಂದಿದ್ದರು. ಈ ವೇಳೆ ತಾಯಿಯಿಂದ ಕೆಳಕ್ಕೆ ಇಳಿಯದೆ ಮಗು ಅಳುತ್ತಿತ್ತು.

ಮಗುವಿನ ಗಮನ ಬೇರೆಡೆ ಸೆಳೆದ ಜಿಪಂ ಸಿಇಒ ಫೌಜೀಯಾ ತರುನ್ನುಮ್, ಅದೇ ಮಗುವನ್ನ ಎತ್ತಿ ಕೆಲಕಾಲ ಆಟವಾಡಿಸಿದರು. ಅಲ್ಲದೆ ತಾಯಿ ಲಸಿಕೆ ಪಡೆಯಲು ಸಹಕಾರ ನೀಡಿದ್ದಾರೆ. ಜಿಲ್ಲಾ ಪಂಚಾಯತ್ ಸಿಇಒ ಅವರ ಈ ನಡೆ ಎಲ್ಲರ ಮೆಚ್ಚುಗೆಗೆ ಪಾತ್ರವಾಯಿತು.

Last Updated : Sep 18, 2021, 8:30 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.