ಕುಷ್ಟಗಿ (ಕೊಪ್ಪಳ): ಶಿಕ್ಷಕರ ದಿನಾಚರಣೆ ಅಂಗವಾಗಿ ಸಾರ್ವಜನಿಕ ಶಿಕ್ಷಣ ಇಲಾಖೆ ನೀಡುವ ಜಿಲ್ಲಾಮಟ್ಟದ ಅತ್ಯುತ್ತಮ ಶಿಕ್ಷಕ ಪ್ರಶಸ್ತಿಗೆ ತಾಲೂಕಿನ ಮೂವರು ಶಿಕ್ಷಕರು ಭಾಜನರಾಗಿದ್ದಾರೆ. ಕೊಪ್ಪಳದಲ್ಲಿ ಇಂದು ಜಿಲ್ಲಾಡಳಿತದ ಜೆ.ಹೆಚ್.ಪಟೇಲ್ ಸಭಾಂಗಣದಲ್ಲಿ ನಡೆಯುವ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುತ್ತಿದೆ.
![ಜಿಲ್ಲಾಮಟ್ಟದ ಅತ್ಯುತ್ತಮ ಶಿಕ್ಷಕ ಪ್ರಶಸ್ತಿಗೆ ಆಯ್ಕೆ](https://etvbharatimages.akamaized.net/etvbharat/prod-images/kn-kst-02-07-best-teacher-district-award-kac10028_07092020080816_0709f_1599446296_358.jpg)
ಪ್ರೌಢ ಶಾಲೆ ವಿಭಾಗ : ಎಸ್ವೈ ಕಂಚಿ, ಸಹ ಶಿಕ್ಷಕರು, ಶ್ರೀ ಗವಿಸಿದ್ದೇಶ್ವರ ಪ್ರೌಢ ಶಾಲೆ ಹಿರಿಯ ಮನ್ನಾಪುರ.
ಹಿರಿಯ ಪ್ರಾಥಮಿಕ ವಿಭಾಗ: ಲಂಕೆಪ್ಪ ವಾಲೀಕಾರ, ಸಹ ಶಿಕ್ಷಕರು, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕುರುಬಗೇರ ಹನುಮಸಾಗರ.
![ಜಿಲ್ಲಾಮಟ್ಟದ ಅತ್ಯುತ್ತಮ ಶಿಕ್ಷಕ ಪ್ರಶಸ್ತಿಗೆ ಆಯ್ಕೆ](https://etvbharatimages.akamaized.net/etvbharat/prod-images/kn-kst-02-07-best-teacher-district-award-kac10028_07092020080816_0709f_1599446296_414.jpg)
ಕಿರಿಯ ಪ್ರಾಥಮಿಕ ಶಾಲಾ ವಿಭಾಗ: ಬಸವರಾಜ ರೊಡ್ಡ, ಸಹ ಶಿಕ್ಷಕರು ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಮಲಕಾಪುರ. ಸರ್ಕಾರಿ ಶಾಲೆಯ ಮಕ್ಕಳ ಕಲಿಕೆಗೆ ಪೂರಕವಾದ ವಾತಾವರಣ ನಿರ್ಮಾಣ ಮಾಡುವ ಕಾಯಕದಲ್ಲಿ ತೊಡಗಿಸಿಕೊಂಡಿದ್ದನ್ನು ಗುರುತಿಸಿ ಈ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದ್ದು, ಆಯ್ಕೆಯಾದ ಸಾಧಕ ಶಿಕ್ಷಕರಿಗೆ ಕ್ಷೇತ್ರ ಶಿಕ್ಷಣಾಧಿಕಾರಿ ಚನ್ನಬಸಪ್ಪ ಮಗ್ಗದ್ ಅಭಿನಂದಿಸಿದ್ದಾರೆ.