ETV Bharat / state

ಗಂಗಾವತಿ ತಾಲೂಕಿನಲ್ಲಿ ಭತ್ತದ ಬೆಳೆಗೆ ದುಂಡಾಣು ರೋಗದ ಬಾಧೆ - Gangavti letest news

ಗಂಗಾವತಿ ತಾಲೂಕಿನಲ್ಲಿ ರೈತರು ಬೆಳೆದಿರುವ ಭತ್ತದ ಬೆಳೆಗೆ ದುಂಡಾಣು ಮಚ್ಚೆ ರೋಗ ಕಾಣಿಸಿಕೊಂಡಿರುವುದು ರೈತರ ಆತಂಕಕ್ಕೆ ಕಾರಣವಾಗಿದೆ.

Gangavati
Gangavati
author img

By

Published : Sep 25, 2020, 8:21 PM IST

ಗಂಗಾವತಿ : ಕಾರಟಗಿ ಹಾಗೂ ತಾಲೂಕಿನ ನೀರಾವರಿ ಪ್ರದೇಶದಲ್ಲಿ ಬೆಳೆದಿರುವ ಭತ್ತ ಬೆಳೆ ಕಟಾವಿಗೆ ಬಂದಿದ್ದು, ಇದೀಗ ಭತ್ತಕ್ಕೆ ದುಂಡಾಣು ಮಚ್ಚೆ ರೋಗ ಕಾಣಿಸಿಕೊಂಡಿರುವುದು ರೈತರ ಆತಂಕಕ್ಕೆ ಕಾರಣವಾಗಿದೆ.

ಬಸವಪಟ್ಟಣ, ಸಿದ್ಧಿಕೇರಿ, ಹೇರೂರು ಸೇರಿದಂತೆ ತುಂಗಭದ್ರಾ ಅಚ್ಚುಕಟ್ಟು ಪ್ರದೇಶದಲ್ಲಿನ ಭತ್ತದ ಬೆಳೆಯಲ್ಲಿ ಈ ರೋಗದ ಬಾಧೆ ಹೆಚ್ಚಾಗಿ ಕಂಡು ಬಂದಿದೆ. ಈಗಾಗಲೆ ಕಣೆ ನೋಣದ ಬಾಧೆಯಿಂದ ಸಂತ್ರಸ್ತರಾಗಿರುವ ರೈತರಿಗೆ ಈಗ ದುಂಡಾಣು ಮಚ್ಚೆ ರೋಗ ಮತ್ತಷ್ಟು ಆತಂಕಕ್ಕೆ ದೂಡಿದೆ.

ತಾಲೂಕಿ‌ನ ಭತ್ತದ ಗದ್ದೆಗಳಿಗೆ ಕೃಷಿ ವಿಜ್ಞಾನ ಕೇಂದ್ರದ ಕೃಷಿ, ಕೀಟಶಾಸ್ತ್ರದ ವಿಜ್ಞಾನಿ ರಾಘವೇಂದ್ರ ಎಲಿಗಾರ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಬಳಿಕ ಮಾತನಾಡಿದ ಅವರು, ಕಳೆದ ಹಲವು ದಿನಗಳಿಂದ ಮೋಡ ಕವಿದ ವಾತಾವರಣ ಇರುವ ಕಾರಣಕ್ಕೆ ದುಂಡಾಣು ಮಚ್ಚೆ ರೋಗದ ಬಾಧೆ ಎದುರಾಗಿದೆ. ರೈತರಿಗೆ ತಾಂತ್ರಿಕ ಮಾಹಿತಿ ಒದಗಿಸಿ ಪರಿಹಾರಕ್ಕೆ ಸಲಹೆ ನೀಡಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.