ಗಂಗಾವತಿ: ಕೊರೊನಾ ಸೋಂಕು ಹರಡುವ ಭೀತಿಯಲ್ಲಿರುವ ಆರೋಗ್ಯ ಇಲಾಖೆ, ಮುಂಜಾಗ್ರತಾ ಕ್ರಮ ವಹಿಸಲು ಹಾಗೂ ಸಂಭವನೀಯ ಪರಿಸ್ಥಿತಿ ಸಮರ್ಪಕವಾಗಿ ಎದುರಿಸಲು ಸಿದ್ಧವಾಗಿದೆ. ಈ ಹಿನ್ನೆಲೆ ಬಹುತೇಕ ಎಲ್ಲಾ ಸರ್ಕಾರಿ ಆಸ್ಪತ್ರೆಗಳನ್ನು ಸಿದ್ಧವಾಗಿಡಲು ಅಗತ್ಯ ಕ್ರಮಕ್ಕೆ ಮುಂದಾಗಿದೆ. ಇದರ ಭಾಗವಾಗಿ ನಗರದ ಉಪ ವಿಭಾಗ ಆಸ್ಪತ್ರೆಗೆ ಭೇಟಿ ನೀಡಿದ ಜಿಲ್ಲಾ ಆರೋಗ್ಯಾಧಿಕಾರಿ ಡಾ. ಲಿಂಗಾರಾಜ್ ಪರಿಶೀಲನೆ ನಡೆಸಿದರು.
ಅದಕ್ಕೂ ಮುನ್ನ ಆಸ್ಪತ್ರೆಯಲ್ಲಿ ರೌಂಡ್ಸ್ ಹಾಕಿದ ಅಧಿಕಾರಿ ಕೆಲ ಬದಲಾವಣೆ ಮಾಡುವಂತೆ ಸಿಬ್ಬಂದಿಗೆ ಸೂಚನೆ ನೀಡಿದರು. ಈ ಸಂದರ್ಭದಲ್ಲಿ ಮಾಸ್ಕ್ ಹಾಕಿಕೊಂಡಿದ್ದ ಕೆಲ ಸಿಬ್ಬಂದಿಯನ್ನು ತರಾಟೆಗೆ ತೆಗೆದುಕೊಂಡ ಡಿಎಚ್ಓ, ನೀವೇ ಮಾಸ್ಕ್ ಹಾಕಿಕೊಂಡು ಜನರಲ್ಲಿ ಸಲ್ಲದ ಭೀತಿ ಉಂಟು ಮಾಡುತ್ತಿದ್ದೀರಿ. ಪ್ರತಿಯೊಬ್ಬ ಸಾರ್ವಜನಿಕರು ಮಾಸ್ಕ್ ಕೇಳಿದರೆ ಇಲಾಖೆಯಿಂದ ಹೇಗೆ ಪೂರೈಸಲು ಸಾಧ್ಯ ಎಂದು ಪ್ರಶ್ನಿಸಿದರು.
ಇನ್ಫೆಕ್ಷನ್ ವಾರ್ಡ್ಗಳಲ್ಲಿ ಕೆಲಸ ಮಾಡುವ ನರ್ಸ್ ಮಾತ್ರ ಬ್ಯಾಕ್ಟೀರಿಯಾಗಳು ಹರಡದಂತೆ ಮುಂಜಾಗ್ರತೆ ವಹಿಸುವ ಉದ್ದೇಶಕ್ಕೆ, ಮಾಸ್ಕ್ ಹಾಕಿಕೊಳ್ಳಬಹುದು. ಎಲ್ಲಾ ಕಡೆ ಅದರ ಅಗತ್ಯವಿಲ್ಲ ಎಂದು ಮಾಸ್ಕ್ ತೆಗೆಯುವಂತೆ ವಾರ್ನ್ ಮಾಡಿದರು.