ಗಂಗಾವತಿ: ಕೃಷಿ ಕ್ಷೇತ್ರದಿಂದ ಕೂಲಿಕಾರರು ವಿಮುಖರಾಗುತ್ತಿರುವ ಹಿನ್ನೆಲೆ ಉದ್ಭವಿಸುತ್ತಿರುವ ನಾನಾ ಸಮಸ್ಯೆಗಳಿಗೆ ಪರಿಹಾರ ಕಲ್ಪಿಸಲು ಇದೀಗ ಧರ್ಮಸ್ಥಳದ ಶ್ರೀಕ್ಷೇತ್ರ ಗ್ರಾಮೀಣಾಭಿವೃದ್ಧಿ ಸಂಸ್ಥೆ ಮುಂದಾಗಿದ್ದು, ಇದೀಗ ರೈತರಿಗೆ ಭತ್ತದ ಸಸಿ ನಾಟಿ ಯಂತ್ರಗಳನ್ನು ನೀಡುತ್ತಿದೆ.
ಗಂಗಾವತಿಯಂತ ನೀರಾವರಿ ಪ್ರದೇಶದಲ್ಲಿ ಭತ್ತದ ಕೃಷಿ ಚಟುವಟಿಕೆ ಹೆಚ್ಚಾಗಿದೆ. ಆದರೆ ಇತ್ತೀಚಿನ ದಿನಗಳಲ್ಲಿ ಸಕಾಲಕ್ಕೆ ಕೂಲಿಕಾರರು ಸಿಗದ ಹಿನ್ನೆಲೆ ರೈತರು ಸಾಕಷ್ಟು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಕೃಷಿ ಸಹವಾಸವೇ ಬೇಡ ಎಂಬಂತ ಸ್ಥಿತಿ ನಿರ್ಮಾಣವಾಗುತ್ತದೆ.
ಈ ಹಿನ್ನೆಲೆ ಈಗ ಸಂಸ್ಥೆ ರೈತರಿಗೆ ನೆರವಾಗುವ ಉದ್ದೇಶಕ್ಕೆ ಸ್ವಯಂ ಚಾಲಿತವಾಗಿ ಭತ್ತದ ಸಸಿ ನಾಟಿ ಮಾಡಬಲ್ಲ ಯಂತ್ರದ ಪ್ರಾಯೋಗಿಕ ಕಾರ್ಯವನ್ನು ತಾಲೂಕಿನ ಹೇರೂರು ಗ್ರಾಮದ ರೈತ ಶಿವರಾಮ ಪ್ರಸಾದ್ ಅವರ ಹೊಲದಲ್ಲಿ ಮಾಡಲಾಯಿತು.