ಕೊಪ್ಪಳ: ಜಿಲ್ಲೆಯ ಗಂಗಾವತಿ ತಾಲೂಕಿನ ಹಿರೇಬೆಣಕಲ್ ಗ್ರಾಮದ ಬಳಿಯ ಅರಣ್ಯ ಪ್ರದೇಶದಲ್ಲಿ ಚಿರತೆಯ ಕಳೇಬರವೊಂದು ಪತ್ತೆಯಾಗಿದೆ.
ಸುಮಾರು ನಾಲ್ಕೂವರೆಯಿಂದ ಐದು ವರ್ಷದ ಗಂಡು ಚಿರತೆಯ ಕಳೇಬರ ಇದಾಗಿದೆ. ಸುಮಾರು 2 ದಿನಗಳ ಹಿಂದೆ ಚಿರತೆ ಸಾವನ್ನಪ್ಪಿರುವ ಶಂಕೆ ವ್ಯಕ್ತವಾಗಿದೆ. ಘಟನೆ ಹಿನ್ನೆಲೆಯಲ್ಲಿ ಸ್ಥಳಕ್ಕೆ ಅರಣ್ಯ ಇಲಾಖೆಯ ಅಧಿಕಾರಿಗಳು ಭೇಟಿ ನೀಡಿ ಚಿರತೆ ಕಳೇಬರದ ಮರೋಣತ್ತರ ಪರೀಕ್ಷೆ ನಡೆಸಿದ್ದಾರೆ.
ಕಳೆದ ಹದಿನೈದು ದಿನಗಳಿಂದ ಚಿರತೆ ಆಹಾರ ಸೇವಿಸಿಲ್ಲ. ಕಣ್ಣು ನೋವಿನಿಂದ ಬಳಲಿ ಚಿರತೆ ಸಾವನ್ನಪ್ಪಿರುವ ಅಂಶ ಮರಣೋತ್ತರ ಪರೀಕ್ಷೆ ವೇಳೆ ತಿಳಿದು ಬಂದಿದೆ ಎಂದು ಅರಣ್ಯ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.