ಗಂಗಾವತಿ: ಗ್ರಾಮೀಣ ಭಾಗದಲ್ಲಿ ಆಗಾಗ ಕೈಕೊಡುವ ವಿದ್ಯುತ್ನಿಂದಾಗಿ ಮಕ್ಕಳ ವಿದ್ಯಾಭ್ಯಾಸದ ಮೇಲೆ ಅಡ್ಡಪರಿಣಾಮ ಬೀರುತ್ತಿದ್ದ ಕಾರಣ ಶಿಕ್ಷಣ ಇಲಾಖೆ ಹೊಸದೊಂದು ಐಡಿಯಾ ಹುಡುಕಿದೆ. ಮುಖ್ಯವಾಗಿ ಪರೀಕ್ಷೆ ಸಂದರ್ಭದಲ್ಲಿ ಎದುರಿಸುವ ವಿದ್ಯುತ್ ಕೊರತೆಯನ್ನು ನೀಗಿಸಲು ಶಾಲೆಗಳಲ್ಲಿ ಕರೆಂಟ್ ಸೌಲಭ್ಯ ಕಲ್ಪಿಸುತ್ತಿದೆ.
ಇದಕ್ಕಾಗಿಯೇ ಶಿಕ್ಷಣ ಇಲಾಖೆ ಈ ಬಾರಿ ಪರ್ಯಾಯ ಬೆಳಕು ನೀಡುವ ಸಾಧನ, ಸಲಕರಣೆಗಳನ್ನು ಬಳಸಿಕೊಂಡು ಮಕ್ಕಳ ವಿದ್ಯಾಭ್ಯಾಸಕ್ಕೆ ನೆರವಾಗುವ ಉಪಾಯ ಹುಡುಕಿದೆ.
ಗ್ರಾಮೀಣ ಭಾಗದ ಯಾವ ಶಾಲೆಗಳಲ್ಲಿ ಯುಪಿಎಸ್ ಮತ್ತು ಸೋಲಾರ್ ಸೌಲಭ್ಯವಿದೆಯೋ, ಆ ಶಾಲೆಗಳಲ್ಲಿ ಮಕ್ಕಳಿಗೆ ರಾತ್ರಿ ವಿದ್ಯಾಭ್ಯಾಸಕ್ಕೆ ಅನುಕೂಲವಾಗುವಂತೆ ಅಲ್ಲಿನ ಶಿಕ್ಷಕರಿಗೆ ಈಗಾಗಲೇ ಬಿಇಒ ಸೂಚನೆ ನೀಡಿದ್ದಾರೆ. ಬೆಳಗ್ಗೆ10 ರಿಂದ ಸಂಜೆ 7ವರೆಗೆ ಶಾಲೆಗಳಲ್ಲಿ ವಿದ್ಯುತ್ ಬಳಸಿಕೊಳ್ಳಬಹುದು. ರಾತ್ರಿ ವೇಳೆಯಲ್ಲಿ ಸೌಲಭ್ಯ ಕಲ್ಪಿಸುವ ಗುರಿ ಹೊಂದಲಾಗಿದೆ ಎಂದು ಬಿಇಒ ಸೋಮಶೇಖರಗೌಡ ತಿಳಿಸಿದ್ದಾರೆ.