ETV Bharat / state

ಅಂಡರ್‌ಪಾಸ್​ಗೆ ಮೇಲ್ಛಾವಣಿ ಅಳವಡಿಸಲು ಮೀನಾಮೇಷ.. ಗುತ್ತಿಗೆದಾರ ಕಂಪನಿ ವಿರುದ್ಧ ಆಕ್ರೋಶ - Delay in installing the roof to underpass

ಶೀಘ್ರದಲ್ಲಿ ಅಂಡರ್​ ಪಾಸ್​ ಮೇಲ್ಛಾವಣಿಗೆ ಟಿನ್ ಸೀಟ್ ಹಾಕಿಸುವುದಾಗಿ ಗುತ್ತಿಗೆ ಪಡೆದುಕೊಂಡಿರುವ ಕಂಪನಿಯು ಮೇ 2ರಂದು ಸಂಸದ ಕರಡಿ ಸಂಗಣ್ಣ ಅವರಿಗೆ ತಿಳಿಸಿತ್ತು. ಆದರೆ, ಈವರೆಗೆ ಕಂಪನಿಯ ಅಧಿಕಾರಿಗಳು ಆ ಸಂಬಂಧ ಯಾವುದೇ ಕೆಲಸ ಪ್ರಾರಂಭಿಸಿಲ್ಲ.

Delay in installing the roof to underpass
ಅಂಡರ್​ ಪಾಸ್​ಗೆ ಮೇಲ್ಚಾವಣಿ ಅಳವಡಿಸಲು ಮೀನಾ ಮೇಷ
author img

By

Published : May 14, 2020, 9:29 AM IST

ಕುಷ್ಟಗಿ(ಕೊಪ್ಪಳ): ಪಟ್ಟಣದ ಹೊರವಲಯದ ಕೃಷ್ಣಗಿರಿ ಕಾಲೋನಿ ಬಳಿ ಇರುವ ಅಂಡರ್ ಪಾಸ್​ಗೆ ಮೇಲ್ಛಾವಣಿ ಅಳವಡಿಸಲು ಗುತ್ತಿಗೆ ಪಡೆದುಕೊಂಡಿರುವ ಓಎಸ್​ಇ ಕಂಪನಿ ಮೀನಾ ಮೇಷ ಎನಿಸುತ್ತಿರುವುದು ಸ್ಥಳೀಯರ ಆಕ್ರೋಶಕ್ಕೆ ಕಾರಣವಾಗಿದೆ.

ಶೀಘ್ರದಲ್ಲಿ ಅಂಡರ್​ ಪಾಸ್​ ಮೇಲ್ಛಾವಣಿಗೆ ಟಿನ್ ಸೀಟ್ ಹಾಕಿಸುವುದಾಗಿ ಗುತ್ತಿಗೆ ಪಡೆದುಕೊಂಡಿರುವ ಕಂಪನಿಯು ಮೇ 2ರಂದು ಸಂಸದ ಕರಡಿ ಸಂಗಣ್ಣ ಅವರಿಗೆ ತಿಳಿಸಿತ್ತು. ಆದರೆ, ಈವರೆಗೆ ಕಂಪನಿಯ ಅಧಿಕಾರಿಗಳು ಆ ಸಂಬಂಧ ಯಾವುದೇ ಕೆಲಸ ಪ್ರಾರಂಭಿಸಿಲ್ಲ. ಹೀಗಾಗಿ ಸೀಟ್​ ಹಾಕಲು ಅಳವಡಿಸಿರುವ ಕಬ್ಬಿಣ ಮಾತ್ರ ಅಸ್ಥಿಪಂಜರದಂತೆ ಕಾಣುತ್ತಿದೆ. ಸ್ವಲ್ಪ ಮಳೆಯಾದರೆ ಸಾಕು ನೀರು ತುಂಬಿ ಜನರು ಸಂಚರಿಸಲಾಗದ ಸ್ಥಿತಿ ನಿರ್ಮಾಣವಾಗುತ್ತಿದೆ.

ಅಂಡರ್​ ಪಾಸ್​ ಒಳಗಡೆ ನೀರು ತುಂಬಿದರೆ ಜನರು ಹೆದ್ದಾರಿ ದಾಟಿ ಹೋಗಬೇಕಾದ ಅನಿವಾರ್ಯತೆಯಿದೆ. ಈ ಸಂದರ್ಭದಲ್ಲಿ ಪ್ರಾಣ ಹಾನಿ ಏನಾದರೂ ಸಂಭವಿಸಿದರೆ ಅದಕ್ಕೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಮತ್ತು ಗುತ್ತಿಗೆ ವಹಿಸಿಕೊಂಡಿರುವ ಓರಿಯಂಟಲ್ ಕಂಪನಿ ನೇರ ಹೊಣೆ ಎಂದು ವಾರ್ಡ್​ ಸದಸ್ಯೆ ಗೀತಾ ಮಹೇಶ್ ಕೋಳೂರು ಎಚ್ಚರಿಸಿದ್ದಾರೆ.

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.